ETV Bharat / state

ಹಿಜಾಬ್​ ವಿವಾದ: ಹರಿಹರ ಕಾಲೇಜಿನಲ್ಲಿ ಗಲಾಟೆ ಮಾಡಿದವರ ಬಂಧನ - ದಾವಣಗೆರೆಯಲ್ಲಿ ಹಿಜಾಬ್​ ವಿವಾದ

ಹರಿಹರ ಕಾಲೇಜಿನಲ್ಲಿ ಗಲಾಟೆ ಮಾಡಿದವರನ್ನು ದಾವಣಗೆರೆ ಪೊಲೀಸರು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

accused arrest over hijab row in Davanagere, Davanagere hijab row, Davanagere Crime news, ದಾವಣಗೆರೆಯಲ್ಲಿ ಹಿಜಾಬ್​ ವಿವಾದ ಹಿನ್ನೆಲೆ ಆರೋಪಿಗಳ ಬಂಧನ, ದಾವಣಗೆರೆಯಲ್ಲಿ ಹಿಜಾಬ್​ ವಿವಾದ, ದಾವಣಗೆರೆ ಅಪರಾಧ ಸುದ್ದಿ,
ಹರಿಹರ ಕಾಲೇಜಿನಲ್ಲಿ ಗಲಾಟೆ ಮಾಡಿದವರ ಹೆಡೆಮುರಿ ಕಟ್ಟಿದ ದಾವಣಗೆರೆ ಪೋಲಿಸರು
author img

By

Published : Feb 10, 2022, 2:15 PM IST

ದಾವಣಗೆರೆ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ದಾವಣಗೆರೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ವಿವಾದದಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಕೆಲವರು ಕಾಲೇಜಿನ‌ ಆವರಣದಲ್ಲಿ ಆತಂಕ ಸೃಷ್ಟಿಸಿದ್ದು ಇದೀಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವಿದ್ಯಾರ್ಥಿಗಳನ್ನು ಹೊರತುಪಡಿಸಿ ಕೆಲವರು ಕಾಲೇಜಿನ‌ ಆವರಣದಲ್ಲಿ ವಿದ್ಯಾರ್ಥಿನಿಯರನ್ನು ಹಿಡಿದು ಎಳೆದಾಡಿದ್ದಾರೆ ಎಂದು ಆರೋಪಿಸಿ ಒಂದು ಕೋಮಿನ‌ ಯುವಕರು ಕಾಲೇಜಿನ ಆವರಣದಲ್ಲಿ ಜಮಾಯಿಸಿ ಪ್ರತಿಭಟನೆ ಮಾಡಿದ್ದರು. ಈ ಪ್ರತಿಭಟನೆ, ವಾಗ್ವಾದದಿಂದ ಗಲಾಟೆಗೆ ತಿರುಗಿದ ಪರಿಣಾಮ ಪೊಲೀಸರು ಹರಿಹರ ನಗರದ ಜೆ.ಸಿ.ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ‌ ಆವಣದಲ್ಲಿ ಲಾಠಿ ಪ್ರಹಾರ ಮಾಡಿ, ಆಶ್ರುವಾಯು ಸಿಡಿಸಿದ್ದರು. ಇದೀಗ ಈ ಗಲಾಟೆಗೆ ಸಂಬಂಧಿಸಿದಂತೆ ಹರಿಹರ ನಗರ ಠಾಣೆಯ ಪೊಲೀಸರು ಎರಡೂ ಕೋಮಿಗೆ ಸೇರಿದ ಐವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರು ಕಾಲೇಜು ವಿದ್ಯಾರ್ಥಿಗಳ ಸಂಬಂಧಿಗಳು ಎಂದು ತಿಳಿದುಬಂದಿದೆ.

accused arrest over hijab row in Davanagere, Davanagere hijab row, Davanagere Crime news, ದಾವಣಗೆರೆಯಲ್ಲಿ ಹಿಜಾಬ್​ ವಿವಾದ ಹಿನ್ನೆಲೆ ಆರೋಪಿಗಳ ಬಂಧನ, ದಾವಣಗೆರೆಯಲ್ಲಿ ಹಿಜಾಬ್​ ವಿವಾದ, ದಾವಣಗೆರೆ ಅಪರಾಧ ಸುದ್ದಿ,

ಇದನ್ನೂ ಓದಿ: ರಾಯಚೂರಲ್ಲಿ ಕಸದ ರಾಶಿಯಲ್ಲಿ ಸಿಕ್ತು ನಿವೃತ್ತ ಎಎಸ್​ಐ ಮೃತದೇಹ: ಮಗನೇ ಹಂತಕ!

ಮಲೇಬೆನ್ನೂರಿನಲ್ಲಿ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು: ಇನ್ನು ಮಲೇಬೆನ್ನೂರಿನಲ್ಲಿ ನಡೆದ ಸ್ಕ್ರೂ ಡ್ರೈವರ್ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 4 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.