ದಾವಣಗೆರೆ: ಜಿಲ್ಲೆಯಲ್ಲಿ ಇಂದು 8 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 333 ಕ್ಕೆ ಏರಿಕೆಯಾಗಿದೆ.
ದಾವಣಗೆರೆಯಲ್ಲಿ 5, ಹರಿಹರ, ಚನ್ನಗಿರಿ, ಹೊನ್ನಾಳಿಯಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿವೆ. ನಗರದ ನಿಟ್ಟುವಳ್ಳಿಯ 17 ವರ್ಷದ ಯುವಕ, ಎಂಸಿಸಿಬಿ ಬ್ಲಾಕ್ನ 34 ವರ್ಷದ ವ್ಯಕ್ತಿಗೆ, ಚೌಕಿಪೇಟೆ ವಿಠ್ಠಲ ಮಂದಿರ ಬಳಿ 35 ವರ್ಷದ ವ್ಯಕ್ತಿಗೆ, ಬೇತೂರ ರಸ್ತೆಯ 80 ವರ್ಷದ ವೃದ್ಧನಿಗೆ ಹಾಗೂ ಪಿಬಿ ರಸ್ತೆಯ 24 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ.
ಹೊನ್ನಾಳಿ ತಾಲೂಕಿನ ಕ್ಯಾಸನಕೇರೆ ಗ್ರಾಮದ 19 ವರ್ಷದ ಯುವಕ, ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿಯ 40 ವರ್ಷದ ವ್ಯಕ್ತಿ ಹಾಗೂ ಹರಿಹರದ 60 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ.
ಇಂದು ಮೂವರು ಡಿಸ್ಚಾರ್ಜ್ ಆಗಿದ್ದು, ಇದುವರೆಗೆ ಸೋಂಕಿನಿಂದ 272 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 8 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ 53 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.