ETV Bharat / state

ದಾವಣಗೆರೆ: ಮದ್ಯಪಾನಕ್ಕೆ ವೃದ್ಧಾಪ್ಯ ವೇತನದ ಹಣ ಕೊಡದ ತಂದೆ ಕೊಂದ ಪುತ್ರನಿಗೆ 6 ವರ್ಷ ಜೈಲು - ಕೊಲೆ ಅಪರಾಧಿಗೆಗಳಿಗೆ ಜೀವಾವಧಿ ಶಿಕ್ಷೆ

ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತಂದೆಯನ್ನು ಕೊಲೆ ಮಾಡಿದ್ದ ಅಪರಾಧಿ ಪುತ್ರನಿಗೆ 6 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿದೆ.

6-years-sentence-to-criminal-for-killing-his-father-in-davanagere
ದಾವಣಗೆರೆ: ತಂದೆ ಕೊಲೆ ಮಾಡಿದ ಅಪರಾಧಿಗೆ 6 ವರ್ಷ ಶಿಕ್ಷೆ
author img

By

Published : Aug 4, 2023, 9:37 PM IST

ದಾವಣಗೆರೆ: ಮದ್ಯಪಾನ ಮಾಡಲು ಹಣ ಕೊಡದ ಕಾರಣಕ್ಕೆ ತಂದೆಯನ್ನೇ ಕೊಲೆ ಮಾಡಿದ್ದ ಅಪರಾಧಿ ಪುತ್ರನಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 6 ವರ್ಷ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿದೆ. ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದ ನರಸಿಂಹಪ್ಪ (35) ಶಿಕ್ಷೆಗೆ ಗುರಿಯಾದ ಅಪರಾಧಿ. ಈತ ಮದ್ಯಪಾನ ಮಾಡಲು ವೃದ್ಧಾಪ್ಯ ವೇತನದ ಹಣ ಕೊಡುವಂತೆ ತಂದೆ, ತಾಯಿಯನ್ನು ಪೀಡಿಸುತ್ತಿದ್ದ. ಹಣ ಕೊಡದ ಕಾರಣಕ್ಕೆ ತಂದೆ ಮಂಜಪ್ಪರನ್ನು 2022ರ ಏಪ್ರಿಲ್ 7ರಂದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದ.

ಅಂದಿನ ಹೊನ್ನಾಳಿ ವೃತ್ತನಿರೀಕ್ಷಕ ಟಿ.ವಿ.ದೇವರಾಜ್ ಅವರು ಪ್ರಕರಣದ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಆಲಿಸಿದ ನ್ಯಾಯಾಧೀಶ ವಿಜಯಾನಂದ ಅವರು ತೀರ್ಪು ಪ್ರಕಟಿಸಿ ಅಪರಾಧಿಗೆ ದಂಡಸಮೇತ ಶಿಕ್ಷೆ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ 3 ತಿಂಗಳು ಹೆಚ್ಚುವರಿ ಸಾದಾ ಶಿಕ್ಷೆ ವಿಧಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಇಬ್ಬರು ಮನೆಗಳ್ಳರ ಬಂಧನ: ಮನೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಹನುಮಂತಪ್ಪ ಅಲಿಯಾಸ್ ದೊಡ್ಡಮನಿ ಹನುಮಂತ (38), ಹಾಲೇಶಪ್ಪ(48) ಬಂಧಿತರು. ಆರೋಪಿಗಳಿಂದ 3.06 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

two thieves Arrest
ಇಬ್ಬರು ಮನೆಗಳ್ಳರ ಬಂಧನ

2022ರ ಸೆ.25ರಂದು ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ರುದ್ರಮುನಿ ಎಂಬವರ ಮನೆಯಲ್ಲಿ ಕಳ್ಳತನವಾಗಿತ್ತು. ದಾವಣಗೆರೆ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರುದ್ರಮುನಿಯವರು ತಮ್ಮ ಮನೆಯ ಬಾಗಿಲ ಬೀಗ ಮುರಿದು ಮನೆಯಲ್ಲಿದ್ದ 2,70,000 ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ಕಳವು ಮಾಡಲಾಗಿದೆ ಎಂದು ದೂರು ನೀಡಿದ್ದರು.

ಇದನ್ನೂ ಓದಿ: ಕೋಲಾರ: ಮೊಬೈಲ್‌ಗೆ ಬಂದ ಲಿಂಕ್ ತೆರೆದು ₹15 ಲಕ್ಷ ಕಳ್ಕೊಂಡ ವ್ಯಕ್ತಿ!

ಕೊಲೆ ಅಪರಾಧಿಗೆಗಳಿಗೆ ಜೀವಾವಧಿ ಶಿಕ್ಷೆ: ಚಲನಚಿತ್ರ ಮಂದಿರದ ವಾಚ್‌ಮ್ಯಾನ್ ಕೊಲೆ ಪ್ರಕರಣದ ಅಪರಾಧಿಗಳಿಗೆ ಬಳ್ಳಾರಿಯ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. ಬಳ್ಳಾರಿ ನಗರದ ರಾಘವೇಂದ್ರ ಚಲನಚಿತ್ರ ಮಂದಿರದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಎಂಬ ವ್ಯಕ್ತಿಯ ಕೊಲೆ 2016ರ ನ. 22ರ ಮಧ್ಯರಾತ್ರಿ ನಡೆದಿತ್ತು. ಸಿನಿಮಾ ನೋಡಲು ಬಂದಿದ್ದ ಕೊಳಗಲ್ಲು ಗ್ರಾಮದ ಮೌನೇಶ್, ಪಾಲೂತ್ತೂರು ನಾಗೇಶ್ ಹಾಗೂ ಅಡವಿಸ್ವಾಮಿ ಎಂಬ ಮೂವರು ಟಿಕೆಟ್ ಸಿಗದ ಹಿನ್ನೆಲೆ ವೆಂಕಟೇಶ್ ಜೊತೆ ಅವಾಚ್ಯ ಪದಗಳಿಂದ ನಿಂದಿಸಿ ಜಗಳವಾಡಿದ್ದರು. ಇದರಿಂದ ಕುಪಿತಗೊಂಡಿದ್ದ ಆರೋಪಿತರು ನಂತರ ಮಧ್ಯರಾತ್ರಿ ಥಿಯೇಟರ್‌ಗೆ ಬಂದು ಮಲಗಿದ್ದ ವೆಂಕಟೇಶ್‌ನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು.

ಈ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡಿದ್ದ ಬ್ರೂಸ್ ಪೇಟೆ ಪೊಲೀಸರು ಅಪರಾಧಿಗಳ ವಿರುದ್ಧ ಸಾಕ್ಷಿಗಳನ್ನು ಸಂಗ್ರಹಿಸಿ ದೋಷಾರೋಪಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಮೊಕದ್ದಮೆಯ ಪರ-ವಿರೋಧ ಆಲಿಸಿದ ನ್ಯಾಯಾಧಿಶೆ ಎಸ್.ಎಚ್ ಪುಷ್ಪಾಂಜಲಿದೇವಿ ಅವರು ಗುರುವಾರದಂದು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 90 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಅಪರಾಧಿಗಳಲ್ಲಿ ಒಬ್ಬನಾದ ಪಾಲೂತ್ತೂರು ನಾಗೇಶ್ ಈಗಾಗಲೇ ಮೃತಪಟ್ಟಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.