ETV Bharat / state

ಮಂಗಳೂರಿನಲ್ಲಿ ಹೆದ್ದಾರಿ ಗುಂಡಿ ಹೆಚ್ಚಳ..ಮೋದಿಯವರೇ ಮತ್ತೆ ಬನ್ನಿ ಎಂದು ಪ್ರತಿಭಟಿಸಿದ ಯುವಕ - ರಾಷ್ಟ್ರೀಯ ಹೆದ್ದಾರಿ ದುರಸ್ತಿ

ಎರಡು ತಿಂಗಳ ಹಿಂದೆ ರಸ್ತೆ ಹೊಂಡಗಳನ್ನು ದುರಸ್ತಿಗೊಳಿಸುವಂತೆ ಪ್ರತಿಭಟನೆ ನಡೆಸಿದ್ದೆ. ಆದರೆ ಸಂಸದರು, ಎನ್​ಹೆಚ್​ಎ ಅಧಿಕಾರಿಗಳು ಎರಡು ತಿಂಗಳು ಕಳೆದರೂ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ‌ ಎಂದು ಲಿಖಿತ್ ರೈ ಎಂಬುವವರು ಬೇಸರ ವ್ಯಕ್ತಪಡಿಸಿದ್ದಾರೆ.

ಪುತ್ತೂರು ನಿವಾಸಿ ಲಿಖಿತ್ ರೈ
ಪುತ್ತೂರು ನಿವಾಸಿ ಲಿಖಿತ್ ರೈ
author img

By

Published : Sep 29, 2022, 7:50 PM IST

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಗುಂಡಿ ಮುಚ್ಚಬೇಕಾಗಿದೆ. ಮೋದಿಯವರೇ ಮಂಗಳೂರಿಗೆ ಬನ್ನಿ ಅಂತ ಪುತ್ತೂರಿನ ಲಿಖಿತ್ ರೈ ಎಂಬ ಯುವಕ ಮಂಗಳೂರಿನ ನಂತೂರು ಜಂಕ್ಷನ್ ನಲ್ಲಿ ಒಂದು ಗಂಟೆಗಳ ಏಕಾಂಗಿ ಪ್ರತಿಭಟನೆ ನಡೆಸಿ ಹೆದ್ದಾರಿ ಗುಂಡಿಯ ಬಗ್ಗೆ ಸರ್ಕಾರದ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಪುತ್ತೂರು ನಿವಾಸಿ ಲಿಖಿತ್ ರೈ ಅವರು ಮಾತನಾಡಿದ್ದಾರೆ

ಲಿಖಿತ್ ರೈ ಅವರ ಗೆಳೆಯ ನಗರದ ಬಿಕರ್ನಕಟ್ಟೆಯಲ್ಲಿ ಬೈಕ್​ನಲ್ಲಿ ಬರುತ್ತಿದ್ದ ವೇಳೆ ರಸ್ತೆ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದರು. ಈ ಸಂದರ್ಭ ಲಿಖಿತ್ ರೈ ರಾಷ್ಟ್ರೀಯ ಹೆದ್ದಾರಿ ಹಾಗೂ ಮಂಗಳೂರು ಮನಪಾ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದರು.

ಈ ವೇಳೆ ಮಾತನಾಡಿದ ಲಿಖಿತ್ ರೈಯವರು, ಎರಡು ತಿಂಗಳ ಹಿಂದೆ ರಸ್ತೆ ಹೊಂಡಗಳನ್ನು ದುರಸ್ತಿಗೊಳಿಸುವಂತೆ ಪ್ರತಿಭಟನೆ ನಡೆಸಿದ್ದೆ. ಆದರೆ ಸಂಸದರು, ಎನ್​ಹೆಚ್​ಎ ಅಧಿಕಾರಿಗಳು ಎರಡು ತಿಂಗಳು ಕಳೆದರೂ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಮಾಡುವ ಗೋಜಿಗೇ ಹೋಗಿಲ್ಲ‌. ಆದರೆ ಪ್ರಧಾನಿ ಮೋದಿಯವರು ಬಂದಿದ್ದ ವೇಳೆ ಎರಡೇ ದಿನಗಳಲ್ಲಿ ಕೂಳೂರಿನ ರಸ್ತೆಯು ಸಂಪೂರ್ಣ ದುರಸ್ತಿ ಮಾಡಿದ್ದಾರೆ.

ಹಾಗಾದರೆ ರಸ್ತೆ ದುರಸ್ತಿ ಆಗಬೇಕೆಂದಿದ್ದಲ್ಲಿ ಪ್ರಧಾನಿ ಮೋದಿಯವರೇ ಬರಬೇಕೆ?. ಹಾಗಾದರೆ ಮತ್ತೆ ಪ್ರಧಾನಿಯವರು ಮತ್ತೆ ಮಂಗಳೂರಿಗೆ ಬರಲಿ. ಹಾಗಾದರೂ ರಸ್ತೆ ದುರಸ್ತಿಯಾಗಲಿ. ಅವರಿಂದ ಮಾತ್ರ ಇಲ್ಲಿನ ರಸ್ತೆಯನ್ನು ದುರಸ್ತಿ ಮಾಡಲು ಸಾಧ್ಯ. ಹೆದ್ದಾರಿ ದುರಸ್ತಿ ಸಾಧ್ಯವಿಲ್ಲವೆಂದಾದಲ್ಲಿ ಜನರ ತೆರಿಗೆ ಹಣ ವಾಪಸ್ ಮಾಡಿ ಎಂದು ಆಗ್ರಹಿಸಿದರು.

ಓದಿ: ಬೆಂಗಳೂರು ರಾಜಕಾಲುವೆ ಒತ್ತುವರಿ, ರಸ್ತೆ ಗುಂಡಿ ಸಮಸ್ಯೆ ಬಗ್ಗೆ ಹೈಕೋರ್ಟ್ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.