ಮಂಗಳೂರು: ಆವರಣ ಕಟ್ಟೆಯಿಲ್ಲದ ತೆರೆದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನಗರದ ಪಡುಪಣಂಬೂರು ಗ್ರಾಪಂ ವ್ಯಾಪ್ತಿಯ ಬೆಳ್ಳಾಯರು ಕೆರೆಕಾಡು ಎಂಬಲ್ಲಿ ನಡೆದಿದೆ.
ವಿಶ್ವನಾಥ್ ಬಿ. ದೇವಾಡಿಗ (36) ಬಾವಿಗೆ ಬಿದ್ದು ಮೃತಪಟ್ಟವರು. ವಿಶ್ವನಾಥ್ ಬಿ. ದೇವಾಡಿಗ ಅವರು ಜು.31ರಂದು ರಾತ್ರಿ ಸ್ಥಳೀಯ ಭಜನಾ ಮಂದಿರದಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಿದ್ದರು. ಬಳಿಕ ಅವರು ಮನೆಗೆ ಹಿಂದಿರುಗುವಾಗ ತಮ್ಮ ಮನೆಯ ಹತ್ತಿರ ಇರುವ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಆ.1ರಂದು ಬೆಳಗ್ಗೆ ಅವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.