ಮಂಗಳೂರು: ಜಿಲ್ಲೆಯಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಂದ ಜಿಲ್ಲಾಡಳಿತ ಈವರೆಗೆ ಒಂದು ಕೋಟಿ ರೂ. ಗೂ ಅಧಿಕ ದಂಡ ವಸೂಲಿ ಮಾಡಿದೆ.
ಕೊರೊನಾ ಮೊದಲನೇ ಅಲೆ ಆರಂಭವಾದ ಸಂದರ್ಭದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿತ್ತು. ಮಾಸ್ಕ್ ಧರಿಸದೆ ಇರುವವರ ಮೇಲೆ ದಂಡ ವಿಧಿಸಲಾಗುತ್ತಿತ್ತು. ಹೀಗೆ 2020 ಎಪ್ರಿಲ್ ನಿಂದ ಈವರೆಗೆ 1 ಕೋಟಿ 16 ಸಾವಿರದ 717 ರೂಗಳನ್ನು ವಸೂಲಿ ಮಾಡಲಾಗಿದೆ. ಜಿಲ್ಲೆಯಲ್ಲಿ 82,384 ಮಂದಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸದೆ ಇದ್ದು, ಇವರ ಬಳಿಯಿಂದ ಈ ದಂಡ ವಸೂಲಿ ಮಾಡಲಾಗಿದೆ.
ನಗರ ಸ್ಥಳೀಯ ಸಂಸ್ಥೆ, ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯತ್ಗಳು ಈ ದಂಡ ವಿಧಿಸಿ ಈ ಹಣವನ್ನು ವಸೂಲಿ ಮಾಡಿದೆ.