ETV Bharat / state

ಬಡವರ ಹಸಿವಿಗೆ ಮಿಡಿದ ಬೆಳ್ತಂಗಡಿಯ ವಿವೋ ತಂಡ - ಬೆಳ್ತಂಗಡಿ ಸುದ್ದಿ

ಕಿಟ್ ನೀಡಿದ ತಂಡದ ಸದಸ್ಯರು ಯಾರೂ ಕೂಡ ಶ್ರೀಮಂತರಲ್ಲ. ಆದ್ರೆ, ಹಸಿವಿನ ನೋವು ಗೊತ್ತಿದ್ದವರು. ಆದ್ದರಿಂದ ಎಲ್ಲರೂ ಸಂತೋಷದಿಂದ ತಮ್ಮ ಪಾಲು ನೀಡಿ ಸಹಕರಿಸಿದ್ದಾರೆ. ಮುಂದಿನ ತಿಂಗಳು ಕೂಡಾ ಸಂಬಳ ಬಂದ ಕೂಡಲೇ ಕೆಲ ಬಡ ಕುಟುಂಬಗಳಿಗೆ ಸಹಾಯ ಮಾಡಬೇಕೆಂಬ ಆಸೆ ಇದೆ- ವಿವೋ ಟೀಂ ಲೀಡರ್ ಗೋಪಾಲ್ ಕೃಷ್ಣ ಹೇಳಿದ್ದಾರೆ.

vivo team
ಬೆಳ್ತಂಗಡಿಯ ವಿವೋ ತಂಡದ ಮನ
author img

By

Published : Apr 25, 2020, 4:59 PM IST

ಬೆಳ್ತಂಗಡಿ: ಕೊರೊನಾ ಲಾಕ್​ಡೌನ್​ಗೆ ಇಡೀ ದೇಶವೇ ಸ್ತಬ್ಧವಾಗಿದೆ. ದುಡಿವ ಕೈಗಳಿಗೆ ಕೆಲಸವಿಲ್ಲದೇ ಅನೇಕರು ಸಂಕಷ್ಟದಲ್ಲಿದ್ದಾರೆ. ಈ ಸಮಸ್ಯೆ ಅರಿತ ಬೆಳ್ತಂಗಡಿಯ ವಿವೋ ತಂಡ ತಮ್ಮ ಸಂಬಳದ ಸ್ವಲ್ಪ ಭಾಗವನ್ನು ಬಡವರಿಗೆ ಆಹಾರ ಪೂರೈಕೆ ಮಾಡಲು ವಿನಿಯೋಗಿಸಿದೆ.

ವಿವೋ ಮೊಬೈಲ್ ಮಾರಾಟ ಪ್ರತಿನಿಧಿಗಳು ತಮ್ಮ ಸಂಬಳದ ಸ್ವಲ್ಪ ಹಣದಲ್ಲಿ ಆಹಾರ ಸಾಮಗ್ರಿಗಳ ಕಿಟ್ ತಯಾರಿಸಿದ್ದಾರೆ. ಬಳಿಕ ಈ ಕಿಟ್‌ಗಳನ್ನು ತಾಲೂಕಿನ ವಿವಿಧೆಡೆ ಬಡ ಕುಟುಂಬಗಳನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ತೆರಳಿ ಕೊಟ್ಟು ಬಂದಿದ್ದಾರೆ. ವಿಶೇಷ ಅಂದ್ರೆ, ಯಾವುದೇ ಕಾರಣಕ್ಕೂ ಕಿಟ್ ವಿತರಿಸುವಾಗ ಫೋಟೋ ತೆಗೆಯದೇ ಜನರ ಸ್ವಾಭಿಮಾನಕ್ಕೆ ಬೆಲೆ ನೀಡಿದ್ದಾರೆ.

ನಮ್ಮ ವಿವೋ ಟೀಂನ 14 ಸದಸ್ಯರು ಸೇರಿ ಬಡ ಜನರಿಗೆ ಕಿಟ್ ನೀಡುವ ತಿರ್ಮಾನ ತೆಗೆದುಕೊಂಡೆವು. ಅದರಂತೆ ಎಲ್ಲರೂ ಸಂತೋಷದಿಂದ ಸಂಬಳದ ಸ್ವಲ್ಪ ಭಾಗ ಹಣವನ್ನು ನೀಡಿದ್ದಾರೆ. ಆಹಾರ ಸಾಮಗ್ರಿಗಳ ಕೆಲವು ಕಿಟ್​ಗಳನ್ನು ತಯಾರಿಸಿ ತಾಲೂಕಿನ ಕೆಲವು ತುಂಬಾ ಬಡ ಜನರನ್ನು ಆಯ್ಕೆ ಮಾಡಿ ನೀಡಿದ್ದೇವೆ. ಕಿಟ್ ನೀಡಿದ ಟೀಂನ ಯಾರೂ ಕೂಡ ಶ್ರೀಮಂತರಲ್ಲ, ಆದ್ರೆ, ಹಸಿವಿನ ನೋವು ಗೊತ್ತಿದ್ದವರು. ಆದ್ದರಿಂದ ಎಲ್ಲರೂ ಸಂತೋಷದಿಂದ ತಮ್ಮ ಪಾಲು ನೀಡಿ ಸಹಕರಿಸಿದ್ದಾರೆ. ಮುಂದಿನ ತಿಂಗಳಲ್ಲೂ ಸಂಬಳ ಬಂದ ಕೂಡಲೇ ಕೆಲವು ಬಡ ಕುಟುಂಬಗಳಿಗೆ ಸಹಾಯ ಮಾಡಬೇಕೆಂಬ ಆಸೆ ಇದೆ ಎನ್ನುತ್ತಾರೆ ಟೀಂ ಲೀಡರ್ ಗೋಪಾಲ್ ಕೃಷ್ಣ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.