ಸುಳ್ಯ: ಬೆಳ್ಳಾರೆ ಸಮೀಪದ ಕಾವಿನಮೂಲೆಯಲ್ಲಿ ಇಂದು ವ್ಯಾನ್ ಮತ್ತು ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿದ್ದು ಸ್ಕೂಟಿ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ.
ಘಟನೆಯಲ್ಲಿ ಕೊಲ್ಲಮೊಗ್ರ ಚಾಂತಳದ ನಿವಾಸಿ ಚಿದಾನಂದ (40 ) ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಬೆಳ್ಳಾರೆ ಕಡೆಯಿಂದ ಸುಳ್ಯಗೆ ಬರುತ್ತಿದ್ದ ಸಾಯಿ ಗುರು ವ್ಯಾನ್ ಹಾಗೂ ಸೋಣಂಗೇರಿ ಕಡೆಯಿಂದ ಬೆಳ್ಳಾರೆ ಕಡೆಗೆ ಹೋಗುತ್ತಿದ್ದ ಕೊಲ್ಲಮೊಗ್ರದ ಚಿದಾನಂದ ಎಂಬವರು ಓಡಿಸುತ್ತಿದ್ದ ಸ್ಕೂಟಿ ಕಾವಿನಮೂಲೆ ಎಂಬಲ್ಲಿ ಪರಸ್ಪರ ಡಿಕ್ಕಿಯಾಗಿದೆ. ಪರಿಣಾಮ ಸ್ಕೂಟಿ ಸವಾರ ಚಿದಾನಂದರ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರಿಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುಲಾಗಿತ್ತು. ಆದರೆ ಅವರು ಮಾಣಿ ಸಮೀಪ ರಸ್ತೆ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.
ಸ್ಕೂಟಿಯ ಹಿಂಬದಿಯಲ್ಲಿ ಸಹ ಸವಾರರಾಗಿದ್ದ ತನ್ನ ಸಂಬಂಧಿಯಾದ ಬೆಳ್ಳಾರೆಯಲ್ಲಿ ಖಾಸಗಿ ಕಂಪನಿ ವಿತರಕ ವಿನೀತ್ಗೆ ಸ್ವಲ್ಪ ಪ್ರಮಾಣದ ಗಾಯವಾಗಿರುವುದಾಗಿ ತಿಳಿದು ಬಂದಿದೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.