ETV Bharat / state

ಭಾರತದ ಧ್ವಜ ನಮ್ಮನ್ನು ಕಾಪಾಡಿತು : ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿನಿ ಹೀನಾ ಫಾತಿಮಾ - ಭಾರತದ ಧ್ವಜ ನಮ್ಮನ್ನು ಕಾಪಾಡಿತು : ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿ ಹೀನಾ ಫಾತಿಮಾ

ಆದರೂ ಉಕ್ರೇನಿನ ಪ್ರಜೆಗಳು ಹಾಗೂ ಸೈನಿಕರು ಭಾರತೀಯರ ಬಗ್ಗೆ ವಿಶೇಷ ಅಭಿಮಾನ ಹೊಂದಿರುವುದು ಹೆಚ್ಚಿನ ಭರವಸೆಯನ್ನು ಮೂಡಿಸಿದೆ ಎಂದು ದಕ್ಷಿಣ ಕನ್ನಡದ ಹೀನಾ ಫಾತಿಮಾ ಹೇಳಿದರು.

Ujiri student return form Ukraine
ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿ ಹೀನಾ ಫಾತಿಮಾ
author img

By

Published : Mar 6, 2022, 11:03 PM IST

ಬೆಳ್ತಂಗಡಿ(ದಕ್ಷಿಣ ಕನ್ನಡ): ಸ್ಕೆಚ್ ಪೆನ್ ಮೂಲಕ ಪೇಪರಿನಲ್ಲಿ ರಚಿಸಿದ ನಮ್ಮ ರಾಷ್ಟ್ರ ಧ್ವಜವನ್ನು ಕೈಯಲ್ಲಿ ಎತ್ತಿ ಹಿಡಿದು 10 ಕಿಲೋ ಮೀಟರ್​ ದೂರವನ್ನು ಕಾಲ್ನಡಿಗೆ ಮೂಲಕವೇ ಕ್ರಮಿಸಿ ಬಂದೆವು. ಈ ವೇಳೆ ಉಕ್ರೇನ್ ಸೈನಿಕರು ನಮಗೆ ಉತ್ತಮ ರೀತಿಯ ಬೆಂಬಲ ನೀಡಿದರು. ನಮ್ಮ ರಾಷ್ಟ್ರಧ್ವಜ ನಮ್ಮ ಜೀವವನ್ನು ಕಾಪಾಡಿದ ಕಾರಣ ಹುಟ್ಟೂರು ತಲುಪಲು ಸಾಧ್ಯವಾಯಿತು. ಇದು ಉಕ್ರೇನ್​ನಲ್ಲಿ ಆತಂಕದ ಕ್ಷಣಗಳ ಜತೆ ಹರಸಾಹಸ ನಡೆಸಿ ಮನೆಯನ್ನು ಸೇರಿದ ಉಜಿರೆಯ ಟಿಬಿ ಕ್ರಾಸ್ ಸಮೀಪದ ಹೀನಾ ಫಾತಿಮಾ ಅವರ ಅಭಿಪ್ರಾಯ.

ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿ ಹೀನಾ ಫಾತಿಮಾ

ಯುದ್ಧಪೀಡಿತ ಉಕ್ರೇನಿನ ಕಾರ್ಖೀವ್ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಇವರು ಪೋಲೆಂಡ್​ನಿಂದ ಹೊರಟು ಶನಿವಾರ ದೆಹಲಿಗೆ ಆಗಮಿಸಿ ಬೆಂಗಳೂರು ವಿಮಾನ ನಿಲ್ದಾಣ ಮೂಲಕ ಭಾನುವಾರ ಬೆಳಗ್ಗೆ 8 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಿ 11ರ ಸುಮಾರಿಗೆ ಉಜಿರೆಯ ಮನೆಯನ್ನು ತಲುಪಿದರು.

ಭಾರತೀಯ ರಾಯಭಾರ ಕಚೇರಿ ನಮ್ಮನ್ನು ಸ್ವಂತ ಮಕ್ಕಳಂತೆ ನೋಡಿಕೊಂಡು ಉತ್ತಮ ವ್ಯವಸ್ಥೆಗಳನ್ನು ಮಾಡಿಕೊಟ್ಟಿದೆ. ಅಧಿಕಾರಿಗಳ ಸ್ಪಂದನೆ ಅಭೂತಪೂರ್ವವಾಗಿತ್ತು. ಏಳು ದಿನ ಬಂಕರಿನಲ್ಲಿ ಕಾಲ ಕಳೆದಿದ್ದ ಏಳು ಜನ ಭಾರತೀಯರಾದ ಭೂಮಿಕಾ, ಅಕ್ಷಿತಾ ಅಭಿಷೇಕ್, ಆಕಾಶ್, ವೈಭವ ನಾಡಿಗ್, ಪ್ರಜ್ವಲ್ ಹಿಪ್ಪರಗಿ, ಮಂಜುನಾಥ ನಾನು ಸೇರಿಕೊಂಡು ಧೈರ್ಯದಿಂದ ಬಂಕರ್ ನಿಂದ ಬುಧವಾರ ಹೊರಬಂದೆವು.

ಕಾಲ್ನಡಿಗೆ, ಟ್ಯಾಕ್ಸಿ, ರೈಲು ಮೂಲಕ ಪ್ರಯಾಣಿಸಿ ಪೋಲ್ಯಾಂಡ್ ಗಡಿ ತಲುಪಿದೆವು. ಈ ವೇಳೆ ದಾರಿ ಮಧ್ಯೆ ಬಾಂಬ್ ಸ್ಫೋಟಗೊಂಡು ಒಂದೂವರೆ ತಾಸು ರೈಲು ನಿಂತಿತು. ಒಳಗಡೆ ಕಂಪನದ ಅನುಭವವಾಯಿತು. ರೈಲಿನ ಜನಜಂಗುಳಿ, ನೂಕುನುಗ್ಗಲು ಸರಿಯಾದ ಆಹಾರ ವ್ಯವಸ್ಥೆ ಇಲ್ಲದೆ ಕಷ್ಟ ಪಡುವಂತಾಯಿತು ಎಂದರು.

ಯುದ್ಧದ ಕುರಿತು ಕಾಲೇಜಿನಲ್ಲೂ ಯಾವುದೇ ಮುನ್ಸೂಚನೆ ಇಲ್ಲದ ಕಾರಣ ತರಗತಿಗಳಿಗೆ ಹಾಜರಾಗುವುದು ಅನಿವಾರ್ಯವಾಗಿತ್ತು. ಆದರೆ ಏಕಾಏಕಿ ಯುದ್ಧ ಆರಂಭಗೊಂಡು ಬಂಕರ್​ನಲ್ಲಿ ಕಾಲ ಕಳೆಯುವಂತಾಯಿತು.

ಯುದ್ಧದ ಬಳಿಕ ರೈಲುಗಳಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಅವಕಾಶವಿದ್ದು, ಇವರ ಗುಂಪಿನ ನಾಲ್ಕು ಮಂದಿ ಹುಡುಗರು ಭಾನುವಾರವಷ್ಟೇ ಪೋಲೆಂಡ್ ತಲುಪಿದ್ದಾರೆ. ಯುದ್ಧದ ಕಾರಣದಿಂದ ಹೆಚ್ಚಿನ ಸಮಯ ವಿದ್ಯುತ್, ನೆಟ್ ವರ್ಕ್ ಸಮಸ್ಯೆ ಇರುವುದರಿಂದ ಸಂವಹನವು ಸಾಧ್ಯವಾಗುತ್ತಿಲ್ಲ. ಆದರೂ ಉಕ್ರೇನಿನ ಪ್ರಜೆಗಳು ಹಾಗೂ ಸೈನಿಕರು ಭಾರತೀಯರ ಬಗ್ಗೆ ವಿಶೇಷ ಅಭಿಮಾನ ಹೊಂದಿರುವುದು ಹೆಚ್ಚಿನ ಭರವಸೆಯನ್ನು ನೀಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ನವೀನ್​ ಪಾರ್ಥಿವ ಶರೀರ ಎಲ್ಲಿಯೂ ಹೋಗಿಲ್ಲ, ಕುಟುಂಬಕ್ಕೆ ತಲುಪಿಸಲಾಗುತ್ತದೆ: ಸಚಿವ ಉಮೇಶ ಕತ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.