ಮಂಗಳೂರು : ಸಿಎಂ ಇಬ್ರಾಹಿಂ ಅವರಿಗೆ ವಿಧಾನ ಪರಿಷತ್ನ ವಿಪಕ್ಷ ಸಭಾನಾಯಕ ಸ್ಥಾನ ಸಿಗದೆ ಇರುವುದಕ್ಕೂ, ನನಗೆ ವಿಧಾನಸಭೆಯ ವಿಪಕ್ಷ ಉಪನಾಯಕ ಸ್ಥಾನ ಸಿಕ್ಕಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶಾಸಕ ಯು. ಟಿ ಖಾದರ್ ಹೇಳಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಉಪನಾಯಕ ಸ್ಥಾನ ಖಾಲಿಯಿತ್ತು. ಅದನ್ನು ತುಂಬಿಸಬೇಕಿತ್ತು. ಅದಕ್ಕೆ ನನಗೆ ಅವಕಾಶ ಕೊಟ್ಟಿದ್ದಾರೆ. ಸಿ ಎಂ ಇಬ್ರಾಹಿಂ ಅವರು ಪಕ್ಷದಲ್ಲಿ ಇರುತ್ತಾರೆ. ಅವರು ಪಕ್ಷ ಬಿಡದಂತೆ ಎಐಸಿಸಿ ನಾಯಕರು ಮಾತನಾಡುತ್ತಾರೆ. ನಾನು ನಿನ್ನೆ ದೂರವಾಣಿ ಮೂಲಕ ಮಾತಾಡಿದ ವೇಳೆ ನನಗೆ ಶುಭ ಹಾರೈಸಿದ್ದಾರೆ ಎಂದರು.
ಅವರು ಪಕ್ಷ ಬಿಡುವ ಬಗ್ಗೆ ಮಾತಾಡಿಲ್ಲ. ಅಲಿಂಗ ಹೋರಾಟ, ಅಗೌ ಹೋರಾಟ ಕಾಂಗ್ರೆಸ್ ಪಕ್ಷದ ವ್ಯಾಪ್ತಿಯ ಒಳಗಡೆ ಇರುತ್ತದೆ. ಎಲ್ಲಾ ವರ್ಗದವರನ್ನು ಸೇರಿಸಿಕೊಂಡು ಹೋಗುವುದು ಕಾಂಗ್ರೆಸ್ ಸಿದ್ದಾಂತ. ಕಾಂಗ್ರೆಸ್ ಪಕ್ಷ ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ ಎಂದು ತಿಳಿಸಿದರು.
ಸಿಎಂ ಇಬ್ರಾಹಿಂ ಅವರು ಹುಲಿ ಕುರಿ ಎಂದು ಟ್ವೀಟ್ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಹುಲಿಯು ಅಲ್ಲ, ಕುರಿಯೂ ಅಲ್ಲ. ಮನುಷ್ಯತ್ವ, ನಿಯತ್ತು ಇರುವ ಮನುಷ್ಯನಷ್ಟೇ ಎಂದರು. ಕೆಎಸ್ಆರ್ಟಿಸಿ ಬಸ್ ದರ ಏರಿಕೆಗೆ ಖಂಡನೆ. ಸರಕಾರಿ ಬಸ್ಗಳ ದರವನ್ನು ದಿಢೀರ್ ಆಗಿ ಏರಿಸಿರುವುದು ಖಂಡನೀಯ. ಹಿಂದೆ ಒಂದು ರೂ. ಹೆಚ್ಚಳ ಮಾಡುವುದಿದ್ದರೂ ಪ್ರಕಟಣೆ ನೀಡಿ ಮಾಡಲಾಗುತ್ತಿತ್ತು.
ಆದರೆ, ಇದೀಗ ಏಕಾಏಕಿ ದರ ಹೆಚ್ಚಳ ಮಾಡಿದ್ದಾರೆ. ಖಾಸಗಿ ಬಸ್ ದರಕ್ಕೆ ಸಮನಾಗಿ ಕೆಎಸ್ಆರ್ಟಿಸಿ ಬಸ್ ದರ ನಿಗದಿ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸಲಾಗುವುದು ಎಂದರು.
ಓದಿ: ಕೆ ಆರ್ ಪುರ : 50 ಕೋಟಿ ವೆಚ್ಚದ ತಾಯಿ-ಮಕ್ಕಳ ಆಸ್ಪತ್ರೆಗೆ ಸಿಎಂ ಶಂಕು ಸ್ಥಾಪನೆ