ಮಂಗಳೂರು : ಟೂಲ್ ಕಿಟ್ ಎಂಬುವುದು ಸಾಮಾಜಿಕ ಜಾಲತಾಣದಲ್ಲಿ ಒಂದು ಓಪನ್ ಡಾಕ್ಯುಮೆಂಟ್, ಅದು ಅಟಂ ಬಾಂಬ್ ಅಲ್ಲ. ಟೂಲ್ ಕಿಟ್ ಹೆಸರಿನಲ್ಲಿ ಪರಿಸರವಾದಿ ದಿಶಾ ರವಿ ಬಂಧಿಸಿರೋ ದೆಹಲಿ ಪೊಲೀಸರ ಕ್ರಮದ ವಿರುದ್ಧ ಮಾಜಿ ಸಚಿವ ಯು ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಟೂಲ್ ಕಿಟ್ ಎಂಬುವುದು ಸಾಮಾಜಿಕ ಜಾಲತಾಣದಲ್ಲಿ ಒಪನ್ ಡಾಕ್ಯುಮೆಂಟ್. ಅದು ಅಟಂ ಬಾಂಬ್ ಅಲ್ಲ. ಯಾವ ಸಂಸ್ಥೆಯಲ್ಲಿ ಟೂಲ್ ಕಿಟ್ ಬಳಸುವುದಿಲ್ಲ ಹೇಳಿ?.
ರೈತರ ಧ್ವನಿಯನ್ನು ದಮನಿಸಲು, ರೈತರನ್ನು ಬೆಂಬಲಿಸುವವರನ್ನು ದಮನಿಸಲು ಕೇಂದ್ರ ಸರ್ಕಾರ ಮಾಡಿದ ಕೃತ್ಯದಿಂದಾಗಿ ದಿಶಾ ರವಿ ಬಂಧನವಾಗಿದೆ ಅಂತಾ ವಾಗ್ದಾಳಿ ನಡೆಸಿದರು.
ಕರ್ನಾಟಕದ ವಿದ್ಯಾರ್ಥಿನಿಯೊಬ್ಬಳನ್ನು ಈ ರೀತಿ ಆರೋಪ ಮಾಡಿ ಬಂಧಿಸಿರುವುದನ್ನು ಕರ್ನಾಟಕ ಸರ್ಕಾರ ಪ್ರಶ್ನಿಸಬೇಕು. ಈ ಬಗ್ಗೆ ರಾಜ್ಯ ಗೃಹ ಸಚಿವರು ರಾಜ್ಯದ ಜನತೆಗೆ ಉತ್ತರಿಸಬೇಕು ಎಂದರು. ವಿದ್ಯಾರ್ಥಿನಿಯನ್ನು ಬಂಧಿಸಿರುವುದರಲ್ಲಿ ಬಹಳ ತಪ್ಪಿದೆ.
ಇದರ ಹಿಂದೆ ಖಾಲಿಸ್ತಾನ ಇದೆ ಎಂಬುದು ಸುಳ್ಳಾರೋಪ. ಖಾಲಿಸ್ತಾನ ನಾಶಕ್ಕೆ ಇಂದಿರಾಗಾಂಧಿ ಪಣತೊಟ್ಟು ಅದಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಬಂದಾಗ ಮತ್ತೆ ಖಾಲಿಸ್ತಾನ ಇದೆಯೆಂದಾದರೆ ಇವರು ಏನು ಆಡಳಿತ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಬೈಂದೂರಿನಲ್ಲಿ ವಿಮಾನ ನಿಲ್ದಾಣವಾಗಲಿ : ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ವಿಮಾನ ನಿಲ್ದಾಣದ ಅಗತ್ಯವಿದೆ. ಮಂಗಳೂರಿನಲ್ಲಿ ವಿಮಾನ ನಿಲ್ದಾಣ ಇರುವಂತೆಯೇ ಬೈಂದೂರಿನಲ್ಲಿ ವಿಮಾನ ನಿಲ್ದಾಣವಾದರೆ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ.
ಉಡುಪಿ ಮತ್ತು ಮಂಗಳೂರಿನ ಕೋಣಾಜೆ ನಡುವೆ ಮೆಟ್ರೋ, ಕೋಸ್ಟಲ್ ಟೂರಿಸ್ಟ್ ಸರ್ಕ್ಯೂಟ್ ಬಗ್ಗೆ ಬಜೆಟ್ನಲ್ಲಿ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಲಾಗುವುದು ಎಂದರು.
ಈ ಸುದ್ದಿಯನ್ನೂ ಓದಿ: ಹುಟ್ಟುಹಬ್ಬದ ವಿಶ್ ಮಾಡೋಕೆ ಬಂದು ಭಾವನನ್ನೇ ಕೊಂದ: ಸಿಲಿಕಾನ್ ಸಿಟಿಯಲ್ಲಿ ಮರ್ಯಾದಾ ಹತ್ಯೆ..?
ಉಳ್ಳಾಲದಲ್ಲಿ 35 ಲಕ್ಷ ವೆಚ್ಚದಲ್ಲಿ ಆಲೋಪತಿ, ಆಯುರ್ವೇದ ಚಿಕಿತ್ಸೆ ನೀಡುವ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಆಯುರ್ವೇದ, ಅಲೋಪತಿ ಒಟ್ಟಿಗೆ ಇರುವ ಜಿಲ್ಲೆಯ ಮೊದಲ ಆಸ್ಪತ್ರೆ ಇದಾಗಲಿದೆ. ಶೀಘ್ರ ಆರೋಗ್ಯ ಸಚಿವರು ಇದಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು.