ETV Bharat / state

ಪುತ್ತೂರಿನ ಇಬ್ಬರು ಯುವತಿಯರು ಬಿಎಸ್ಎಫ್​ಗೆ ಆಯ್ಕೆ..ಹೀಗಿದೆ ಅವರು ಬೆಳೆದು ಬಂದ ಹಾದಿ! - ಪುತ್ತೂರು ಸುದ್ದಿ

ಪುತ್ತೂರಿನ ಇಬ್ಬರು ಯುವತಿಯರು ದೇಶ ಸೇವೆ ಸಲ್ಲಿಸಲು ಬಾರ್ಡರ್ ಸೆಕ್ಯುರಿಟಿ ಫೋರ್ಸ್​ಗೆ ಆಯ್ಕೆಯಾಗಿದ್ದಾರೆ. ಏ.1 ರಿಂದ ಸೇನೆಯ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

BSF
ಯುವತಿಯರು ಬಿಎಸ್ಎಫ್​ಗೆ ಆಯ್ಕೆ
author img

By

Published : Mar 30, 2021, 9:54 AM IST

Updated : Mar 30, 2021, 1:02 PM IST

ಪುತ್ತೂರು: ಇಲ್ಲಿನ ಬಲ್ನಾಡು ಗ್ರಾಮದ ರಮ್ಯ ಹಾಗೂ ಕಡಬ ತಾಲೂಕಿನ ಕಾಣಿಯೂರಿನ ಯೋಗಿತಾ ಎಂಬವರು ದೇಶ ಸೇವೆ ಸಲ್ಲಿಸಲು ಬಾರ್ಡರ್ ಸೆಕ್ಯುರಿಟಿ ಫೋರ್ಸ್​ಗೆ ಆಯ್ಕೆಯಾಗಿದ್ದಾರೆ. ಏ.1 ರಿಂದ ಸೇನೆಯ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಬಲ್ನಾಡಿನ ರಮ್ಯ: ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಪದ್ಮಯ್ಯ ಗೌಡ ಹಾಗೂ ತೇಜವತಿ ದಂಪತಿಗಳ ಪುತ್ರಿ. ಈಕೆಯ ಸಹೋದರ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಕಿರಿಯ ಸಹಾಯಕರಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಲ್ನಾಡು ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ, ಪಿಯುಸಿ ಹಾಗೂ ಪದವಿಯಯನ್ನು ವಿವೇಕಾನಂದ ಕಾಲೇಜಿನಲ್ಲಿ ಪಡೆದಿರುತ್ತಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮೆಡಿಕಲ್ ಪರೀಕ್ಷೆ ಬರೆದಿದ್ದರು. ಆದರೆ, ಕೊರೊನಾದಿಂದಾಗಿ ಅದರ ಫಲಿತಾಂಶ ತಡವಾಗಿ ಪ್ರಕಟವಾಗಿತ್ತು. ತನ್ನ ಶಾಲಾ ದಿನಗಳಲ್ಲಿಯೇ ಎನ್​ಸಿಸಿಯಲ್ಲಿ ಪಾಲ್ಗೊಂಡು ತರಬೇತಿ ಸಹ ಪಡೆದಿದ್ದರು.

ಇದನ್ನು ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಗಾಳಿ ಸಹಿತ ಮಳೆ.. ಮೀನುಗಾರಿಕಾ ಬಂದರ್​ನಲ್ಲಿದ್ದ ಬೋಟ್​ಗಳು ಚೆಲ್ಲಾಪಿಲ್ಲಿ

ಕಾಣಿಯೂರಿನ ಯೋಗಿತಾ ಎಂ: ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಮಲೆಕರ್ಚಿ ಮೇದಪ್ಪ ಗೌಡ ಮತ್ತು ದೇವಕಿ ಅವರ ಪುತ್ರಿ ಯೋಗಿತಾ. ಎಂ. ಅವರು ಭಾರತೀಯ ಸೇನೆಯ ಗಡಿಭದ್ರತಾ ಪಡೆ(BSF) ಗೆ ಆಯ್ಕೆಯಾಗಿದ್ದು, ಏಪ್ರಿಲ್ 1 ರಂದು ಮಧ್ಯಪ್ರದೇಶದ ಗ್ವಾಲಿಯರ್​ನ ತೇಕನ್ಪುರ್​ದಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಬೊಬ್ಬೆಕೇರಿ ಮತ್ತು ಅಲಂಕಾರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಪ್ರೌಢಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಕಾಣಿಯೂರಿನಲ್ಲಿ (SSLC ಶೇ.81 ಅಂಕ), ಕೆ.ಎಸ್ ಗೌಡ ಪಿಯು ಕಾಲೇಜು ನಿಂತಿಕಲ್​ನಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.70 ಅಂಕಗಳೊಂದಿಗೆ ಪಿಯು ಶಿಕ್ಷಣ ಪಡೆದಿರುತ್ತಾರೆ. ವಿಶ್ವವಿದ್ಯಾಲಯ ಕಾಲೇಜು ಮಂಗಳೂರಿನಲ್ಲಿ ಬಿಎಸ್ಸಿ ಪದವಿ, ಕೊಣಾಜೆ ಮಂಗಳ ಗಂಗೋತ್ರಿಯಲ್ಲಿ ಮೈಕ್ರೋಬಯಾಲಾಜಿ ವಿಷಯದಲ್ಲಿ ಎಂಎಸ್ಸಿ ಪದವಿ ಪಡೆದಿರುತ್ತಾರೆ.

ಮೊತ್ತಮೊದಲ ಬಾರಿಗೆ ಕಾಣಿಯೂರಿನ ಯುವತಿ ಮಿಲಿಟರಿಗೆ ಆಯ್ಕೆಗೊಂಡಿರುವ ಸಂತಸದಲ್ಲಿ ಕಾಣಿಯೂರಿನ ಗ್ರಾಮಸ್ಥರಿಂದ, ಇಲ್ಲಿನ ಶ್ರೀ ಶೀರಾಡಿ ರಾಜನ್ ದೈವಸ್ಥಾನ ಸಮಿತಿ ಏಲಡ್ಕ, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಕಾಣಿಯೂರು, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಕಾಣಿಯೂರು, ಕಣ್ವರ್ಷಿ ಮಹಿಳಾ ಮಂಡಲದಿಂದ ಬೀಳ್ಕೊಡುಗೆ ಅಭಿನಂದನಾ ಕಾರ್ಯಕ್ರಮ ಮಾ.30ರಂದು ಸಂಜೆ 4 ಗಂಟೆಗೆ ಕಾಣಿಯೂರಿನಲ್ಲಿ ನಡೆಯಲಿದೆ.

Last Updated : Mar 30, 2021, 1:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.