ಮಂಗಳೂರು: ಲಾಕ್ಡೌನ್ನಿಂದ ಯುಎಇಯಲ್ಲಿ ಸಂಕಷ್ಟಕ್ಕೊಳಗಾಗಿದ್ದ ಅನಿವಾಸಿ ಕನ್ನಡಿಗರನ್ನು ಹೊತ್ತು ತಂದ ಎರಡು ವಿಮಾನಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿವೆ.

ಯುಎಇಯ ಶಾರ್ಜಾದಿಂದ ಭಾನುವಾರ ರಾತ್ರಿ ಎರಡು ವಿಮಾನ ಬಂದಿದ್ದು, ಅದರಲ್ಲಿ ಚಾರ್ಟರ್ಡ್ ವಿಮಾನದಲ್ಲಿ 173 ಮಂದಿ ಆಗಮಿಸಿದ್ರೆ, ವಂದೇ ಭಾರತ್ ಮಿಷನ್ನ ವಿಮಾನದಲ್ಲಿ 181 ಮಂದಿ ತಾಯ್ನಾಡಿಗೆ ಮರಳಿದ್ದಾರೆ.

ಚಾರ್ಟರ್ಡ್ ವಿಮಾನವು ಮಂಗಳೂರು ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ ಬಂದಿಳಿದಿದ್ದರೆ, ವಂದೇ ಭಾರತ್ ಮಿಷನ್ ವಿಮಾನ ರಾತ್ರಿ ವೇಳೆಗೆ ಆಗಮಿಸಿದೆ. ಚಾರ್ಟರ್ಡ್ ವಿಮಾನವನ್ನು ಯುಎಇಯ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ವ್ಯವಸ್ಥೆ ಮಾಡಿದ್ದು, ಈ ಎಲ್ಲಾ ಪ್ರಯಾಣಿಕರನ್ನು ಮಂಗಳೂರಿನ ವಿವಿಧ ಹೋಟೆಲ್ಗಳಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.