ಮಂಗಳೂರು: ತುಳು ಭಾಷೆಗೆ ಅಧಿಕೃತ ಸ್ಥಾನಮಾನ ದೊರಕಬೇಕೆಂಬ ಕೂಗು ಮತ್ತೊಮ್ಮೆ ಗರಿಗೆದರಿದ್ದು, ಸರ್ಕಾರದ ಗಮನ ಸೆಳೆಯಲು ಇಂದು ಟ್ವಿಟರ್ಅಭಿಯಾನ ನಡೆಯುತ್ತಿದೆ.
ಇಂದು ಬೆಳಗ್ಗೆ 6ರಿಂದ ರಾತ್ರಿ 11.59 ಗಂಟೆಯವರೆಗೆ 'ಟ್ವೀಟ್ ತುಳುನಾಡು' ಹೆಸರಿನಲ್ಲಿ ಅಭಿಯಾನ ನಡೆಸಲಾಗುತ್ತಿದ್ದು, #TuluOfficialinKA_KL ಹ್ಯಾಶ್ಟ್ಯಾಗ್ನಲ್ಲಿ ಟ್ವೀಟ್ ಮಾಡಲು ಸೂಚಿಸಲಾಗಿದೆ.
ಇಂದಿನ ಟ್ವಿಟರ್ ಅಭಿಯಾನದಲ್ಲಿ ತುಳು ಭಾಷೆ ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ ಅಧಿಕೃತ ಆಗಬೇಕು. ಸದನದಲ್ಲಿ ತುಳು ಭಾಷೆಯನ್ನು ಅಧಿಕೃತ ಮಾಡುವ ಮಸೂದೆ ಜಾರಿಗೊಳಿಸಬೇಕು ಎನ್ನುವ ಒತ್ತಾಯ ಮಾಡಲಾಗ್ತಿದೆ. ಇಂದಿನ ಟ್ವಿಟರ್ ಅಭಿಯಾನ ಟ್ರೆಂಡ್ ಆಗುವ ಸಾಧ್ಯತೆಯಿದ್ದು, ಬೆಳಗ್ಗೆ 6 ಗಂಟೆಯಿಂದ 9.30 ರೊಳಗೆ, ಅಂದರೆ ಕೇವಲ 3.30 ಗಂಟೆಯಲ್ಲಿ ಅಭಿಯಾನ ಬೆಂಬಲಿಸಿ ಬರೋಬ್ಬರಿ 28 ಸಾವಿರ ಮಂದಿ ಟ್ವೀಟ್ ಮಾಡಿದ್ದಾರೆ.
-
#TuluOfficialinKA_KL Let's all be proud tuluvas with our distinct identity, our unique culture, our entrepreneurship & our all inclusive "live & let live" philosophy of coexistence with people speaking many languages. We beleive in & practice "उदार चरितानां तु वसुधैव कुटुम्बकं " pic.twitter.com/idaKKjmtF1
— Capt Ganesh Karnik 🇮🇳 (@GaneshKarnik) June 13, 2021 " class="align-text-top noRightClick twitterSection" data="
">#TuluOfficialinKA_KL Let's all be proud tuluvas with our distinct identity, our unique culture, our entrepreneurship & our all inclusive "live & let live" philosophy of coexistence with people speaking many languages. We beleive in & practice "उदार चरितानां तु वसुधैव कुटुम्बकं " pic.twitter.com/idaKKjmtF1
— Capt Ganesh Karnik 🇮🇳 (@GaneshKarnik) June 13, 2021#TuluOfficialinKA_KL Let's all be proud tuluvas with our distinct identity, our unique culture, our entrepreneurship & our all inclusive "live & let live" philosophy of coexistence with people speaking many languages. We beleive in & practice "उदार चरितानां तु वसुधैव कुटुम्बकं " pic.twitter.com/idaKKjmtF1
— Capt Ganesh Karnik 🇮🇳 (@GaneshKarnik) June 13, 2021
ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ. ಗಣೇಶ್ ಕಾರ್ಣಿಕ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೂಡ ತುಳುವಿಗೆ ಅಧಿಕೃತ ಮಾನ್ಯತೆ ದೊರಕಬೇಕೆಂದು ಟ್ವೀಟ್ ಮಾಡಿ ಅಭಿಯಾನವನ್ನು ಬೆಂಬಲಿಸಿದ್ದಾರೆ. ಈ ಹಿಂದೆಯೂ ಹಲವು ಬಾರಿ ಇಂತಹ ಅಭಿಯಾನಗಳು ನಡೆದಿವೆ.