ಮಂಗಳೂರು: ಇತ್ತೀಚೆಗೆ ಬಾಲಿವುಡ್ ಹಾಡಿಗೆ ನೃತ್ಯ ಕಲಿಯುತ್ತಿದ್ದ ಮಂಗಳೂರಿನ ನಾಲ್ವರು ಮಂಗಳಮುಖಿಯರಲ್ಲಿ ಮೂವರು ಬೋಳೂರಿನ ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ಮಾಡಿ ಮೆಚ್ಚುಗೆ ಗಳಿಸಿದ್ದಾರೆ.
ಮಂಗಳೂರಿನ ಪ್ರಿಯಾ, ರೇಖಾ ಮತ್ತು ಸಂಧ್ಯಾ ಎಂಬ ಮೂವರು ಮಂಗಳಮುಖಿಯರು ನೃತ್ಯ ಪ್ರದರ್ಶನದ ಮೂಲಕ ಮೆಚ್ಚುಗೆ ಗಳಿಸಿದವರು. ನೃತ್ಯ ಕಲಿತ್ತಿದ್ದ ಹನಿ ಎಂಬುವರು ಅನಾರೋಗ್ಯದ ಕಾರಣ ನೃತ್ಯ ಪ್ರದರ್ಶನ ಮಾಡಲು ಸಾಧ್ಯವಾಗಲಿಲ್ಲ.
'ಶ್ರೀಗಣೇಶ ದೇವಾ' ಎಂಬ ಭಕ್ತಿಗೀತೆಗೆ ಈ ಮೂವರು ಮಂಗಳಮುಖಿಯರು ಸ್ಟೆಪ್ ಹಾಕಿದ್ದಾರೆ. ಈ ಮಂಗಳಮುಖಿಯರು ಈ ಅವಕಾಶ ಗಿಟ್ಟಿಸಿಕೊಳ್ಳಲು ಬಹಳಷ್ಟು ಪ್ರಯತ್ನ ಪಟ್ಟಿದ್ದರು. ತಾವು ಜನಸಾಮಾನ್ಯರಂತೆ ಸಮಾಜದಲ್ಲಿ ಬದುಕಬೇಕೆಂಬ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡುತ್ತಿರುವ ಇವರಿಗೆ ಸುಸೆನ್ ಮಿಸ್ಕಿತ್ ಅವರು ನೃತ್ಯ ಕಲಿಸಿದರೆ, ಮೋಹನ್ ಎಂಬುವರು ಬೆಂಬಲವಾಗಿ ನಿಂತಿದ್ದರು.