ಮಂಗಳೂರು : ದೀಪಾವಳಿ ಹಬ್ಬದ ಸೀಸನ್ನಲ್ಲಿ ಹೊಸ ಬಟ್ಟೆ ಖರೀದಿಸುವವರ ಸಂಖ್ಯೆ ಹೆಚ್ಚಾಗಿದ್ದು, ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಜವಳಿ ಉದ್ಯಮಿಗಳ ಮೊಗದಲ್ಲಿ ತುಸು ನಗು ತರಿಸಿದೆ.
ಲಾಕ್ಡೌನ್ ಅವಧಿಯಲ್ಲಿ ಉಳಿದುಕೊಂಡಿದ್ದ ಬಟ್ಟೆಗಳಿರುವ ಕಾರಣ, ಹೊಸ ಸ್ಟಾಕ್ ಅನ್ನು ಸ್ವಲ್ಪಮಟ್ಟಿಗೆ ತರಿಸಿಕೊಂಡಿದ್ದಾರೆ. ಹಬ್ಬದ ಸೀಸನ್ನಲ್ಲಿ ಬಟ್ಟೆಗಳ ಖರೀದಿ ಜೋರಾಗಿದ್ದು, ಮಾಲೀಕರು ಮತ್ತಷ್ಟು ಹೊಸ ಸ್ಟಾಕ್ ತರಿಸಿಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಹಬ್ಬದ ವೇಳೆ ಜವಳಿ ಉದ್ಯಮ ತುಸು ಚೇತರಿಕೆ ಕಂಡಿದ್ದು, ಇದು ಮುಂದುವರಿಯುತ್ತದೆ ಎನ್ನುವ ವಿಶ್ವಾಸವು ಜವಳಿ ವ್ಯಾಪಾರಿಗಳಲ್ಲಿಲ್ಲ. ಕಳೆದ ವರ್ಷದ ಹಬ್ಬದ ಸೀಸನ್ಗೆ ಹೋಲಿಸಿದರೆ ಈ ಬಾರಿ ಶೇ.25ರಷ್ಟು ವ್ಯಾಪಾರ ನಡೆದಿದೆ ಎನ್ನುತ್ತಾರೆ ಮಂಗಳೂರಿನ ಜವಳಿ ಅಂಗಡಿ ಮಾಲೀಕ ಉಸ್ಮಾನ್.