ETV Bharat / state

ಮಳಲಿ ಮಸೀದಿ ನವೀಕರಣ ವೇಳೆ ದೇಗುಲದ ಕುರುಹು ಪತ್ತೆ; ಇಂದು ತಾಂಬೂಲ ಪ್ರಶ್ನೆ - temple design in mosque

ಮಂಗಳೂರು ಹೊರವಲಯದ ಮಳಲಿಯಲ್ಲಿರುವ ಮಸೀದಿಯೊಂದರ ನವೀಕರಣದ ಸಂದರ್ಭದಲ್ಲಿ ಹಿಂದೂ ದೇಗುಲದ ಶೈಲಿ‌ಯ ಕುರುಹುಗಳು ಪತ್ತೆಯಾಗಿದ್ದು, ಇಂದು ತಾಂಬೂಲ ಪ್ರಶ್ನಾ ಚಿಂತನೆಯನ್ನು ಆಯೋಜಿಸಲಾಗಿದೆ.

tamboola prashne regarding malali mosque issue
ಮಳಲಿ ಮಸೀದಿಯಲ್ಲಿ ದೇಗುಲ ಶೈಲಿ‌ ಪತ್ತೆ ಪ್ರಕರಣ
author img

By

Published : May 25, 2022, 7:14 AM IST

Updated : May 25, 2022, 8:20 AM IST

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ಏಪ್ರಿಲ್ 21ರಂದು ಮಸೀದಿ ನವೀಕರಣದ ವೇಳೆ ಹಿಂದೂ ದೇಗುಲ ಶೈಲಿಯ ಕುರುಹುಗಳು ದೊರೆತಿದ್ದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಇಂದು ತಾಂಬೂಲ ಪ್ರಶ್ನಾ ಚಿಂತನೆಯನ್ನು ಆಯೋಜಿಸಿದೆ.

ಹಿಂದೂಗಳ ಧಾರ್ಮಿಕ ನಂಬುಗೆಯ ಪ್ರಕಾರ, ಪುರಾಣದ ಸತ್ಯಾನುಸತ್ಯತೆಯನ್ನು ಜ್ಯೋತಿಷ್ಯದ ಉನ್ನತ ಸ್ಥಾನದಲ್ಲಿರುವ ಅಷ್ಟಮಂಗಲದಿಂದ ತಿಳಿಯಲು ಸಾಧ್ಯವಿದೆ. ಈ ಅಷ್ಟಮಂಗಲ ಏರ್ಪಡಿಸಿ ಮಳಲಿಯ ಮಸೀದಿಯಲ್ಲಿ ಪತ್ತೆಯಾದ ದೇಗುಲ ಶೈಲಿಯ ಇತಿಹಾಸವನ್ನು ಅರಿಯಲು ಹಿಂದೂ ಸಂಘಟನೆಗಳು ನಿರ್ಧರಿಸಿವೆ. ಅಷ್ಟಮಂಗಲವನ್ನು ಯಾವಾಗ ನಡೆಸಬೇಕು, ಎಲ್ಲಿ ನಡೆಸಬೇಕು, ಯಾವ ದೈವಿಕ ಶಕ್ತಿಯಿದೆ ಎಂಬುದನ್ನು ತಿಳಿಯಲು ತಾಂಬೂಲ ಪ್ರಶ್ನಾ ಚಿಂತನೆಗೆ ನಿರ್ಧರಿಸಲಾಗಿದೆ.

  • Mangaluru, Karnataka | Police deployment at Juma Masjid in Malali, Mangaluru as section 144 has been imposed within 500 meters from the worship place till 8 am of May 26th.

    A Hindu temple-like architectural design was purportedly found underneath the Masjid on April 21. pic.twitter.com/cMsAZjH3eh

    — ANI (@ANI) May 25, 2022 " class="align-text-top noRightClick twitterSection" data=" ">

ಮಳಲಿಯ ಮಸೀದಿಯ ಸಮೀಪದಲ್ಲಿರುವ ಶ್ರೀರಾಮಂಜನೇಯ ಭಜನಾ ಮಂದಿರದಲ್ಲಿ ಬೆಳಿಗ್ಗೆ 8 ಗಂಟೆಗೆ ತಾಂಬೂಲ ಪ್ರಶ್ನಾ ಚಿಂತನೆ ನಡೆಯಲಿದೆ. ಕೇರಳದ ಪುರೋಹಿತರು ತಾಂಬೂಲ ಪ್ರಶ್ನೆ ನಡೆಸುವರು. ‌ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮುಖಂಡರುಗಳು, ಬಿಜೆಪಿ ಶಾಸಕರುಗಳು ಪಾಲ್ಗೊಳ್ಳುವರು.

ಇದನ್ನೂ ಓದಿ: ರಾಜಕಾಲುವೆ ತಡೆಗೋಡೆ ಕುಸಿತ ಪ್ರಕರಣ; ಗುತ್ತಿಗೆದಾರರ ವಿರುದ್ಧ ಪಾಲಿಕೆಯಿಂದ ಕ್ರಮದ ಎಚ್ಚರಿಕೆ

ವಿಶೇಷ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಳಲಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಮಸೀದಿಯ ಸುತ್ತಮುತ್ತಲಿನ 500 ಮೀಟರ್​ ವ್ಯಾಪ್ತಿಯಲ್ಲಿ ಸೆಕ್ಷನ್​ 144 ಜಾರಿಯಲ್ಲಿರಲಿದೆ.

Last Updated : May 25, 2022, 8:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.