ETV Bharat / state

ತೋಡಿಕಾನ ದೇವರಗುಂಡಿಯಲ್ಲಿ ಮಾಡೆಲ್​ಗಳ ಅರೆಬೆತ್ತಲೆ ಫೋಟೊ ಶೂಟ್​: ಸಾರ್ವಜನಿಕರಿಂದ ಆಕ್ರೋಶ

ದೇವರಗುಂಡಿ ಫಾಲ್ಸ್​​​ನಲ್ಲಿ ಇಬ್ಬರು ಮಾಡೆಲ್​ಗಳು​ ಫೋಟೊಶೂಟ್ ನಡೆಸಿದ್ದಾರೆ ಎನ್ನಲಾಗ್ತಿದೆ. ಇಂತಹ ಪವಿತ್ರ ಸ್ಥಳದಲ್ಲಿ ಬೆಂಗಳೂರಿನ ಇಬ್ಬರು ಮಾಡೆಲ್​​ಗಳು​​​ ಅರೆಬೆತ್ತಲಾಗಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

sulya people outrage about bikini photoshoot in devaragundi falls
ಸುಳ್ಯದ ತೋಡಿಕಾನ ದೇವರಗುಂಡಿಯಲ್ಲಿ ಮಾಡೆಲ್​​ಗಳ ಬಿಕಿನಿ ಫೋಟೋ ಶೂಟ್..ಸಾರ್ವಜನಿಕರಿಂದ ಆಕ್ರೋಶ!
author img

By

Published : Oct 29, 2020, 6:46 PM IST

Updated : Oct 29, 2020, 6:52 PM IST

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೋಡಿಕಾನ ಗ್ರಾಮದಲ್ಲಿರುವ ದೇವರಗುಂಡಿ ಫಾಲ್ಸ್​​​ನಲ್ಲಿ ಬೆಂಗಳೂರು ಮೂಲದ ಇಬ್ಬರು ಮಾಡೆಲ್​​ಗಳು ಅರೆಬೆತ್ತಲೆಯಾಗಿ ಫೋಟೊ ಶೂಟ್​​​ ನಡೆಸಿರುವ ಆರೋಪ ಕೇಳಿಬಂದಿದೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸುಳ್ಯದ ತೋಡಿಕಾನ ಸಮೀಪ ಇರುವ ಪ್ರಸಿದ್ಧ ಮಲ್ಲಿಕಾರ್ಜುನ ದೇವಸ್ಥಾನ ಬಳಿ ಇರುವ ಈ ದೇವರಗುಂಡಿ ಫಾಲ್ಸ್​​​ನಲ್ಲಿ ಮಾಡೆಲ್​ಗಳು ಫೋಟೊ ಶೂಟ್ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಐತಿಹ್ಯಗಳ ಪ್ರಕಾರ ದೇವರಗುಂಡಿಯಲ್ಲಿ ಸಾಕ್ಷಾತ್ ಶಿವನೇ ಸ್ನಾನಕ್ಕೆ ಬರುತ್ತಿದ್ದ ಎನ್ನುವ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಭಕ್ತರಾಗಲಿ ಅಥವಾ ಸ್ಥಳೀಯರಾಗಲಿ ಈ ಫಾಲ್ಸ್​​​ನಲ್ಲಿ ಸ್ನಾನ ಮಾಡುವುದಿಲ್ಲ.

ಇಂತಹ ಪವಿತ್ರ ಸ್ಥಳದಲ್ಲಿ ಬೆಂಗಳೂರಿನ ಇಬ್ಬರು ಮಾಡೆಲ್​​​ ಅರೆಬೆತ್ತಲಾಗಿದ್ದಕ್ಕೆ ಸ್ಥಳೀಯರು ಕಿಡಿಕಾರಿದ್ದಾರೆ. ಈ ಕುರಿತಾಗಿ ಸ್ಥಳೀಯರು ದೇಗುಲದ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಆದರೆ ಆ ಜಾಗ ದೇವಸ್ಥಾನದ ವ್ಯಾಪ್ತಿಗೆ ಬರುವುದಿಲ್ಲವೆಂದು ಆಡಳಿತ ಮಂಡಳಿಯವರು ಸ್ಪಷ್ಟಪಡಿಸಿದ್ದಾರೆ.

Last Updated : Oct 29, 2020, 6:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.