ಪುತ್ತೂರು (ದಕ್ಷಿಣ ಕನ್ನಡ): ನಗರದ ನಿಡ್ಪಳ್ಳಿ ಗ್ರಾಮದ ಆನಾಜೆಯ ಕುಂಬಳೆಯ ಪುತ್ತಿಗೆಯಲ್ಲಿ ಮಹಿಳೆಯೋರ್ವಳು ತನ್ನ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
![ಆತ್ಮಹತ್ಯೆಗೆ ಶರಣಾದ ರಂಜಿತಾ](https://etvbharatimages.akamaized.net/etvbharat/prod-images/kn-mng-01-crime-news-puttur-photo-script-kac10010_08062020203712_0806f_1591628832_967.jpg)
ನಿಡ್ಪಳ್ಳಿ ಆನಾಜೆಯ ವಿಶ್ವನಾಥ ರೈ ಮತ್ತು ರತ್ನಾವತಿ ರೈ ಎಂಬ ದಂಪತಿಯ ಪುತ್ರಿ ರಂಜಿತಾ (25) ಆತ್ಮಹತ್ಯೆ ಮಾಡಿಕೊಂಡವರು. ನಾಲ್ಕು ವರ್ಷಗಳ ಹಿಂದೆ ಇವರನ್ನು ಕುಂಬಳೆ ಸಮೀಪದ ಪುತ್ತಿಗೆ ಪದ್ಮನಾಭ ರೈ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ಮೂರು ವರ್ಷದ ಗಂಡು ಮಗು ಕೂಡ ಇತ್ತು. ಪದ್ಮನಾಭ ರೈ ಮುಂಬೈನ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಕಳೆದ ನಾಲ್ಕು ತಿಂಗಳ ಹಿಂದೆ ಮನೆಗೆ ವಾಪಸ್ ಆಗಿದ್ದರು. ಅವರ ಸಾಂಸಾರಿಕ ಜೀವನ ಉತ್ತಮವಾಗಿಯೇ ಇತ್ತು ಎನ್ನಲಾಗ್ತಿದೆ.
ಜೂ. 6ರಂದು ರಾತ್ರಿ ಮಗುವಿನ ವಿಚಾರದಲ್ಲಿ ದಂಪತಿಯ ನಡುವೆ ಸಣ್ಣ ಜಗಳ ನಡೆದಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ರಂಜಿತಾ ರೂಮ್ನೊಳಗೆ ಹೋಗಿ ಬಾಗಿಲು ಹಾಕಿಕೊಂಡವರು ವಾಪಸ್ ಬಂದಿರಲಿಲ್ಲ. ಜೂ. 7ರಂದು ಬೆಳಗ್ಗೆ ಮನೆಯವರು ಎದ್ದು ನೋಡಿದಾಗ ರಂಜಿತಾರ ರೂಮ್ನ ಫ್ಯಾನ್‌ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ.