ETV Bharat / state

ಕಾರಿಂಜೇಶ್ವರ ದೇವಸ್ಥಾನದ ಪಕ್ಕದ ತಡೆಗೋಡೆ ಕುಸಿತ

ಶ್ರೀ ಕಾರಿಂಜೇಶ್ವರ ದೇವಸ್ಥಾನದ ಎಡ ಪಾರ್ಶ್ವದ ಬದಿಗೆ ಕಟ್ಟಿದ್ದ ಕಲ್ಲಿನ ತಡೆಗೋಡೆ ಕುಸಿದು ಬಿದ್ದಿದೆ. ಇಲ್ಲಿನ ವಾನರ ಸಮೂಹಕ್ಕೆ ನೈವೇದ್ಯ ನೀಡುತ್ತಿದ್ದ ಅಂಗಣದ ಇಂಟರ್ ಲಾಕ್ ಕಿತ್ತು ಹೋಗಿದೆ.

Sri Karingeshwara temple wall collapse due to heavy rain
ಭಾರಿ ಮಳೆಗೆ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಪಕ್ಕದ ತಡೆಗೋಡೆ ಕುಸಿತ
author img

By

Published : Oct 14, 2020, 3:55 PM IST

ಬಂಟ್ವಾಳ(ಮಂಗಳೂರು): ಮಂಗಳವಾರದಿಂದೀಚೆಗೆ ಸುರಿದ ಭಾರೀ ಮಳೆಗೆ ಬಂಟ್ವಾಳ ತಾಲೂಕಿನ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ತಡೆಗೋಡೆ ಕುಸಿದು ಬಿದ್ದಿದೆ.

ಭಾರಿ ಮಳೆಗೆ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಪಕ್ಕದ ತಡೆಗೋಡೆ ಕುಸಿತ

ದೇವಸ್ಥಾನದ ಎಡ ಪಾರ್ಶ್ವದ ಬದಿಗೆ ಕಟ್ಟಿದ್ದ ಕಲ್ಲಿನ ತಡೆಗೋಡೆ ಕುಸಿದು ಬಿದ್ದಿದ್ದು ಬುಧವಾರ ಬೆಳಗ್ಗೆ ಸಿಬ್ಬಂದಿ ಗಮನಕ್ಕೆ ಬಂದಿದೆ. ಅಲ್ಲದೇ ಇಲ್ಲಿನ ವಾನರ ಸಮೂಹಕ್ಕೆ ನೈವೇದ್ಯ ನೀಡುತ್ತಿದ್ದ ಅಂಗಣದ ಇಂಟರ್ ಲಾಕ್ ಕಿತ್ತು ಹೋಗಿದೆ.

ಬೃಹತ್ ಬಂಡೆಯ ಮೇಲೆ ಸ್ಥಾಪಿತಗೊಂಡ ದೇವಸ್ಥಾನಕ್ಕೆ ನಾಲ್ಕು ಯುಗಗಳ ಇತಿಹಾಸವಿದೆ. ಕಾರಿಂಜೇಶ್ವರನ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಾರೆ. ಕೊರೊನಾ ಹಿನ್ನೆಲೆಯಲ್ಲಿ ನಿರ್ಬಂಧ ಇರುವ ಕಾರಣ ನಿಯಮ ಪಾಲನೆಗಳೊಂದಿಗೆ ದೇವಸ್ಥಾನದಲ್ಲಿ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ.

ಪ್ರಸ್ತುತ ಕುಸಿದ ಭಾಗದ ಕೆಳಭಾಗದಲ್ಲಿ ಕಲ್ಲು, ಮಣ್ಣಿನ ದಿಬ್ಬವಿದ್ದು ದೇವಸ್ಥಾನಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಆಡಳಿತಾಧಿಕಾರಿ ನೋಣಯ್ಯ ನಾಯ್ಕ್ ತಿಳಿಸಿದ್ದಾರೆ. ತಜ್ಞರ ಪರಿಶೀಲನೆ ಬಳಿಕ ಪರಿಹಾರೋಪಾಯ ನಡೆಸಬೇಕಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.