ETV Bharat / state

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಹಾಕಿದವ ಶಿರಾಡಿ ಜೋಡಿ ಕೊಲೆ ಹಂತಕ! - ಇತಿಹಾಸದಲ್ಲಿ ಮರಣದಂಡನೆಯ ಎರಡನೇ ತೀರ್ಪು

ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ: ಆರೋಪಿ ಜಯೇಶ್​ನನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ, 7 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.

Accused Jayesh
ಆರೋಪಿ ಜಯೇಶ್
author img

By

Published : Jan 16, 2023, 1:09 PM IST

Updated : Jan 16, 2023, 2:14 PM IST

ಉಪ್ಪಿನಂಗಡಿ/ಬೆಳಗಾವಿ: 14 ವರ್ಷಗಳ ಹಿಂದೆ ಕಡಬ ತಾಲೂಕಿನ ಶಿರಾಡಿಯಲ್ಲಿ ನಡೆದಿದ್ದ ತಾಯಿ ಮತ್ತು ಮಗುವಿನ ಕೊಲೆ ಪ್ರಕರಣದ ಆರೋಪಿ ಮತ್ತು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ ಮರಣದಂಡನೆ ವಿಧಿಸಿರುವ ಆರೋಪಿ ಜಯೇಶ್ ಯಾನೆ ಶಾಕೀರ್ ಯಾನೇ ಸಾಹಿರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾನೆ. ಈತ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಫೋನ್ ಕರೆ ಮಾಡಿ ಜೀವಬೆದರಿಕೆ ಜೊತೆಗೆ ಹಣದ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಜಯೇಶ್: 2008 ಆಗಸ್ಟ್ 2 ರಂದು ಅಂದಿನ ಪುತ್ತೂರು ಮತ್ತು ಇಂದಿನ ಕಡಬ ತಾಲೂಕಿಗೆ ಒಳಪಡುವ ಶಿರಾಡಿಯ ಸೌಮ್ಯಾ ಮತ್ತು ಅವರ ಪುತ್ರ ಜಿಷ್ಣು ಎಂಬವರನ್ನು ಕೊಲೆ ಮಾಡಿದ ಆರೋಪವನ್ನು ಜಯೇಶ್ ಎದುರಿಸುತ್ತಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸುಮಾರು 27 ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು. ಆರೋಪಿಯಾದ ಜಯೇಶ್‌ನನ್ನು ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯು ಸೆಕ್ಷನ್ 450, 392 ಹಾಗೂ 302 ಪ್ರಕಾರ ಆರೋಪಿ ಮರಣದಂಡನೆಗೆ ಯೋಗ್ಯವಾದ ಅಪರಾಧ ಎಸಗಿದ್ದಾನೆ ಎಂದು ಪರಿಗಣಿಸಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಪುತ್ತೂರಿನ ನ್ಯಾಯಾಲಯದ ಇತಿಹಾಸದಲ್ಲಿ ಮರಣದಂಡನೆಯ ಎರಡನೇ ತೀರ್ಪು ಇದಾಗಿತ್ತು. ಅಂದು ಪ್ರಾಸಿಕ್ಯೂಶನ್ ಪರ ಸರ್ಕಾರಿ ಅಭಿಯೋಜಕ ಉದಯಕುಮಾರ್ ವಾದ ಮಂಡಿಸಿದ್ದರು.

ಶಿರಾಡಿ ಸಮೀಪದ ಪೊಲ್ಯೊಟ್ಟು ಎಂಬಲ್ಲಿನ ನಿವಾಸಿಯಾಗಿದ್ದ ಜಯೇಶ್ ಸಿರಿಬಾಗಿಲು ಗ್ರಾಮದ ಪೊಲ್ಯೊಟ್ಟು ಎಂಬಲ್ಲಿನ ನಿವಾಸಿಯಾಗಿದ್ದ ತನ್ನ ದೊಡ್ಡಪ್ಪನ ಮಗ ರೋಹಿತ್ ಎಂಬುವರ ಪತ್ನಿ ಸೌಮ್ಯಾ ಅವರ ಕುತ್ತಿಗೆಗೆ ಬಟ್ಟೆಯನ್ನು ಸುತ್ತಿ ಮಾರಕಾಯುಧದಿಂದ ಹೊಟ್ಟೆಗೆ ತಿವಿದು, ಕೊಲೆಗೈದು ಅವರ ಕತ್ತಿನಲ್ಲಿದ್ದ 10 ಗ್ರಾಂ ಚಿನ್ನದ ಮಾಂಗಲ್ಯ ಸರ ಮತ್ತು ಕಿವಿಯಲ್ಲಿದ್ದ ಬೆಂಡೋಲೆಯನ್ನು ದೋಚಿದ್ದನು. ಮಾತ್ರವಲ್ಲದೆ ಸೌಮ್ಯಾ ಅವರ ಪುತ್ರ 3 ವರ್ಷದ ಜಿಷ್ಣುವಿಗೂ ಚೂರಿಯಿಂದ ತಿವಿದು ಬರ್ಬರವಾಗಿ ಕೊಲೆ ಮಾಡಿ ನಂತರದಲ್ಲಿ ಕೇರಳಕ್ಕೆ ಪರಾರಿಯಾಗಿದ್ದನು. ಚಿನ್ನಾಭರಣಕ್ಕಾಗಿ ತನ್ನ ಪತ್ನಿ, ಮಗುವನ್ನು ಕೊಲೆ ಮಾಡಲಾಗಿದೆ ಎಂದು ಸೌಮ್ಯಾರ ಪತಿ ಲೋಹಿತ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.

ಮೂರ್ತೆದಾರಿಕೆ ಜೊತೆ ಮೇಸ್ತ್ರಿ ಕೆಲಸಕ್ಕೂ ಹೋಗುತ್ತಿದ್ದ ತಾನು ಅಂದು ಎಂದಿನಂತೆ ಕೆಲಸಕ್ಕೆ ಹೋಗಿದ್ದೆ. ಗುಂಡ್ಯದಿಂದ ಕೆಲಸ ಮುಗಿಸಿ ಸಂಜೆ ಮನೆಗೆ ಬರುತ್ತಿದ್ದ ವೇಳೆ ಮನೆಯ ಮುಂಭಾಗದಲ್ಲಿರುವ ಗೇಟಿನ ಬಳಿ ತಲುಪುತ್ತಿದ್ದಂತೆಯೇ ಮನೆಯ ಒಳಗಡೆ ಇದ್ದ ನನ್ನ ಚಿಕ್ಕಪ್ಪನ ಮಗ ಜಯೇಶ್​ ನನ್ನನ್ನು ನೋಡಿ ಗಾಬರಿಯಿಂದ ಓಡಲಾರಂಭಿಸಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ಹೊರಗಡೆ ಹೋಗಿ ಬರುತ್ತೇನೆ ಎಂದು ಹೇಳಿ ಓಡಿ ಹೋಗಿದ್ದ. ಮನೆಯ ಬಾಗಿಲ ಬಳಿ ಬಂದು ನಾನು ಪತ್ನಿ ಸೌಮ್ಯಾಳನ್ನು ಕರೆದರೂ ಆಕೆ ಹೊರ ಬರಲಿಲ್ಲ. ಒಳಗಡೆ ಹೋಗಿ ನೋಡಿದಾಗ ತಾಯಿ, ಮಗ ಹೆಣವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆರೋಪಿ ಜಯೇಶ್ ಸೌಮ್ಯಾಳ ಕತ್ತಿನಲ್ಲಿದ್ದ ಕರಿಮಣಿ ಸರ, ಬೆಂಡೋಲೆ ಕಿತ್ತು ತೆಗೆದಿದ್ದು, ಚಿನ್ನಾಭರಣಕ್ಕಾಗಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಲೋಹಿತ್ ಅವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿತ್ತು.

ಈ ಘಟನೆ ನಡೆದ ಸಂದರ್ಭದಲ್ಲಿ ಆರೋಪಿ ಜಯೇಶ್ 19ರ ಹರೆಯದವನಾಗಿದ್ದ. ತಾಯಿ ಮಗುವಿನ ಕೊಲೆ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಜಯೇಶ್ ಕೇರಳದಲ್ಲಿ ನೆಲೆಸಿದ್ದ. ನಂತರ ಅಲ್ಲಿ ಯುವತಿಯೊಬ್ಬಳನ್ನು ವಿವಾಹವಾಗಿ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದನು.

ಆಕಸ್ಮಿಕವಾಗಿ ಪೊಲೀಸರಿಗೆ ಸಿಕ್ಕಿಬಿದ್ದ!: ಕೇರಳದಲ್ಲಿ ನೆಲೆಸಿದ್ದ ಈತ ಪತ್ನಿಯೊಂದಿಗೆ ಜಗಳವಾಡಿ 2012ರ ಅಕ್ಟೋಬರ್ 10ರಂದು ತೆಂಗಿನ ಮರ ಹತ್ತಿ ಕುಳಿತಿದ್ದ. ಈ ವಿಚಾರ ತಿಳಿದು ಅಲ್ಲಿಗೆ ಆಗಮಿಸಿದ್ದ ಅಲ್ಲಿನ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಆತನನ್ನು ಮರದಿಂದ ಕೆಳಗಿಳಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆತ ಶಿರಾಡಿಯಲ್ಲಿ ನಡೆದಿದ್ದ ತಾಯಿ, ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ವಿಚಾರ ತಿಳಿದು ಬಂದಿತ್ತು.

ಬಳಿಕ ಈತನನ್ನು ಉಪ್ಪಿನಂಗಡಿ ಪೊಲೀಸರು ಕೇರಳ ಪೊಲೀಸರಿಂದ ವಶಕ್ಕೆ ಪಡೆದುಕೊಂಡು ಶಿರಾಡಿ ಡಬಲ್ ಮರ್ಡರ್ ಪ್ರಕರಣದಲ್ಲಿ ಬಂಧಿಸಿ 2012 ಅಕ್ಟೋಬರ್ 11ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಜಯೇಶ್‌ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ನಂತರದಲ್ಲಿ ಪುತ್ತೂರು ನ್ಯಾಯಾಲಯಕ್ಕೆ ಸಾಕ್ಷಿ ವಿಚಾರಣೆಗಾಗಿ ಈತನನ್ನು ಪೊಲೀಸರು ಕರೆತಂದಿದ್ದ ವೇಳೆ ನ್ಯಾಯಾಲಯದ ಕಟಕಟೆಯಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ನ್ಯಾಯಾಲಯ ಆವರಣದಿಂದ ತಪ್ಪಿಸಿಕೊಂಡ ಈತನನ್ನು ವಕೀಲರು ಮತ್ತು ಸಾರ್ವಜನಿಕರು ಸೇರಿಕೊಂಡು ಪುತ್ತೂರು ಮಿನಿವಿಧಾನ ಸೌಧದ ಎದುರು ಹಿಡಿದು ಮತ್ತೆ ಪೊಲೀಸರಿಗೆ ಒಪ್ಪಿಸಿದ್ದರು. ಈ ಬಗ್ಗೆಯೂ ಪುತ್ತೂರು ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.

ಶಿರಾಡಿ ತಾಯಿ ಮಗುವಿನ ಕೊಲೆ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಆಗಿನ ಉಪ್ಪಿನಂಗಡಿ ಠಾಣಾ ವೃತ್ತ ನಿರೀಕ್ಷಕ ರವೀಶ್ ಹಾಗೂ ಸಬ್‌ಇನ್‌ಸ್ಪೆಕ್ಟರ್ ಮಾರುತಿ ಜಿ.ನಾಯಕ್ ನಡೆಸಿದ್ದರು. ನಂತರದ ತನಿಖೆಯನ್ನು ಪುತ್ತೂರು ನಗರ ವೃತ್ತ ನಿರೀಕ್ಷಕ ಸುರೇಶ್ ಕುಮಾರ್ ನಡೆಸಿದ್ದರು. ಈ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಎಂ.ಉದಯಕುಮಾರ್ ಕಾರ್ಯನಿರ್ವಹಿಸಿದ್ದರು.

ಜೀವಬೆದರಿಕೆ ಆರೋಪಿಯಿಂದ ಡೈರಿ ಜಪ್ತಿ: ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದ ಕೈದಿ ಜಯೇಶ್​ನನ್ನು ನಿನ್ನೆ ವಿಚಾರಣೆ ನಡೆಸಿದ ನಾಗ್ಪುರ ಪೊಲೀಸರು ಆತನ ಬಳಿ ಹಲವು ಫೋನ್​ ನಂಬರ್​ಗಳಿದ್ದ ಡೈರಿಯನ್ನು ಜಪ್ತಿ ಮಾಡಿದ್ದರು. ಇಂದು ಜಯೇಶ್​ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ 7 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂಬುದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಹಳೆಯದಾದ ಜೈಲಿನಲ್ಲಿ ಇನ್ನೂ ಅಪ್​ಗ್ರೇಡ್​ ಆಗದ 2ಜಿ ಜಾಮರ್​ ತಂತ್ರಜ್ಞಾನವಿದ್ದು, ಇಲ್ಲಿ ಅಳವಡಿಸಿರುವ 2ಜಿ ಜಾಮರ್​ ಕೈದಿಗಳು ಜೈಲಿನಲ್ಲಿ ಸಿಬ್ಬಂದಿ ಕಣ್ಣು ತಪ್ಪಿಸಿ ಬಳಸುತ್ತಿರುವ 4ಜಿ ಮೊಬೈಲ್​ಗಳ ನೆಟ್​ವರ್ಕ್​ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ. ಹಾಗಾಗಿ ಕೈದಿಗಳು ಜೈಲಿನಲ್ಲಿದ್ದುಕೊಂಡೇ ಉದ್ಯಮಿಗಳು, ರಾಜಕಾರಣಿಗಳಿಗೆ ಜೀವಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ. ಫೋನ್​ಗಳ ಅಪ್​ಗ್ರೇಡ್​ಗೆ ತಕ್ಕಂತೆ ಜಾಮರ್​ಗಳ ಅಪ್​ಗ್ರೇಡ್​ ಅನ್ನೂ ಕೂಡ ಸರ್ಕಾರ ಮಾಡಬೇಕಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೈಲಿನಿಂದಲೇ ಜೀವ ಬೆದರಿಕೆ ಕರೆ: ಕೈದಿಯ ಡೈರಿ ಜಪ್ತಿ, ತೀವ್ರ ವಿಚಾರಣೆ

Last Updated : Jan 16, 2023, 2:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.