ಶಿವಮೊಗ್ಗ: ನಗರದಲ್ಲಿ ಸುಮಾರು ಅರ್ಧ ಗಂಟೆ ಮಳೆ ಸುರಿದು ಜನಜೀವನ ಅಸ್ತವ್ಯಸ್ಥಗೊಂಡಿದೆ.
ವಾಯುಭಾರ ಕುಸಿತದಿಂದ ಮಳೆ ಸುರಿಯುತ್ತಿದೆ ಎನ್ನಲಾಗಿದೆ. ವರುಣನ ಅಬ್ಬರದಿಂದ ನಗರದ ಕೆಲ ಭಾಗದಲ್ಲಿ ವಿದ್ಯುತ್ ಕೈಕೊಟ್ಟಿದೆ.
ಬೆಳ್ತಂಗಡಿಯಲ್ಲಿ ಗುಡುಗು ಸಹಿತ ಗಾಳಿ ಮಳೆಗೆ ಕೃಷಿಕರು ಕಂಗಾಲಾಗಿದ್ದಾರೆ. ಮುಖ್ಯವಾಗಿ ಒಣ ಅಡಿಕೆ ಅಂಗಳದಲ್ಲಿದ್ದು, ಮಳೆಯಿಂದ ಅಡಿಕೆಯನ್ನು ರಕ್ಷಿಸಲು ಹರಸಾಹಸ ಪಡುವಂತಾಯಿತು.
ತಾಲೂಕು ಕೇಂದ್ರ ಬೆಳ್ತಂಗಡಿ, ಉಜಿರೆ, ಗೇರುಕಟ್ಟೆ, ಪಜಿರಡ್ಕ, ಗುರಿಪಳ್ಳ ಮೊದಲಾದೆಡೆ ಮಳೆಯಾಗಿದೆ. ಕೋಲ, ನೇಮ, ಮದುವೆ ಮೊದಲಾದ ಕಾರ್ಯಗಳಿಗೆ ಅಡ್ಡಿಯುಂಟಾಗಿದೆ.