ETV Bharat / state

ಮಂಗಳೂರಲ್ಲಿ ಅಹವಾಲು ಸ್ವೀಕಾರ ಸಭೆ: ಪೊಲೀಸ್ ಇಲಾಖೆ​ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಕಿಡಿ - ಎಡಿಜಿಪಿ ಅಲೋಕ್ ಕುಮಾರ್

ಎಡಿಜಿಪಿ ಅಲೋಕ್ ಕುಮಾರ್ ಅವರು ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಸಭೆ - ಭ್ರಷ್ಟಾಚಾರದ​ ವಿರುದ್ಧ ಮಹಿಳೆ ಕಿಡಿ- ಎಡಿಜಿಪಿ ಸಮ್ಮುಖದಲ್ಲೇ ಕೆರಳಿದ ಸಾಮಾಜಿಕ ಕಾರ್ಯಕರ್ತೆ

Public grievance meeting in Mangalore
ಕಮಿಷನರ್​ನ್ನು ತರಾಟೆಗೆ ತೆಗೆದುಕೊಂಡ ಸಾಮಾಜಿಕ ಕಾರ್ಯಕರ್ತೆ
author img

By

Published : Feb 11, 2023, 11:12 AM IST

Updated : Feb 11, 2023, 12:19 PM IST

ಅಹವಾಲು ಸ್ವೀಕಾರ ಸಭೆ: ಕೆರಳಿದ ಸಾಮಾಜಿಕ ಕಾರ್ಯಕರ್ತೆ

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ನಿನ್ನೆ(ಶುಕ್ರವಾರ)ಎಡಿಜಿಪಿ ಅಲೋಕ್ ಕುಮಾರ್ ಅಹವಾಲು ಸ್ವೀಕಾರ ಸಭೆ ನಡೆಸಿದರು. ಇಲ್ಲಿ ಮಂಗಳೂರು ನಗರ ಪೊಲೀಸರು ಸೇರಿದಂತೆ ವ್ಯವಸ್ಥೆಗಳ ಬಗ್ಗೆ ಹಲವು ದೂರುಗಳು ಬಂದಿವೆ. ದೂರುಗಳನ್ನು ಸ್ವೀಕರಿಸಿದ ಎಡಿಜಿಪಿ ಸೂಕ್ತ ದಾಖಲೆಗಳುಳ್ಳ ದೂರುಗಳಿದ್ದಲ್ಲಿ ಈ ಬಗ್ಗೆ ತನಿಖಾ ತಂಡವನ್ನು ರಚಿಸಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ತನಿಖಾ ತಂಡ ರಚಿಸಿ ಕ್ರಮ: ಸಾರ್ವಜನಿಕರ ಕುಂದುಕೊರತೆ ಅಹವಾಲುಗಳನ್ನು ಆಲಿಸಿದ ಬಳಿಕ ಮಾತನಾಡಿದ ಅವರು, ನಾಗರಿಕರು ಮಂಗಳೂರು ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ವೇಶ್ಯಾವಾಟಿಕೆ, ಮರಳುಗಾರಿಕೆ, ಜೂಜು ಹಾಗೂ ಪೊಲೀಸ್ ಇಲಾಖೆಯ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ. ಆದರೆ ಯಾರೂ ಕೂಡ ಸೂಕ್ತ ದಾಖಲೆಗಳನ್ನು ನೀಡಿ ದೂರು ನೀಡಿಲ್ಲ. ಒಬ್ಬಿಬ್ಬರು ಹೆಸರು ಹೇಳಿ ಆರೋಪ ಮಾಡುತ್ತಿದ್ದಾರೆ. ಈ ಪ್ರಕರಣಗಳನ್ನು ತನಿಖಾ ತಂಡ ರಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

3 ತಿಂಗಳಿಗೊಮ್ಮೆ ಅಹವಾಲು ಸ್ವೀಕಾರ ಸಭೆ: ಸ್ಕಿಲ್ ಗೇಮ್, ಅಕ್ರಮ ಚಟುವಟಿಕೆ, ಮರಳು ಮಾಫಿಯಾ ಬಗ್ಗೆ ಸಾರ್ವಜನಿಕರಿಂದ ಆರೋಪ ಕೇಳಿ ಬಂದಿದೆ. ನಿರ್ದಿಷ್ಟ ದಾಖಲೆಗಳಿದ್ದರೆ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಅಕ್ರಮ ಸ್ಕಿಲ್ ಗೇಮ್ ನಿಲ್ಲಿಸುವುದಕ್ಕೆ ಪೊಲೀಸರಿಗೆ ಸೂಚಿಸಲಾಗಿದೆ. ಯಾವುದೇ ಅಕ್ರಮ ಚಟುವಟಿಕೆಗೆ ಅವಕಾಶ ನೀಡದಂತೆ ಸಿಸಿಬಿಗೆ ಸೂಚಿಸಲಾಗಿದೆ. ಮೂರು ತಿಂಗಳಿಗೊಮ್ಮೆ ಸಾರ್ವಜನಿಕರ ಅಹವಾಲು ಸಭೆ ನಡೆಸಬೇಕು. ಡ್ರಗ್ಸ್ ಕುರಿತು ವೈದ್ಯಕೀಯ ಕಾಲೇಜು ಪ್ರಮುಖರನ್ನು ಕರೆದು ಮಾತನಾಡಿದ್ದೇನೆ ಎಂದು ಹೇಳಿದರು.

ಮೊದಲ ಬಾರಿಗೆ ನಗರದಲ್ಲಿ ಎಡಿಜಿಪಿ ಸಾಮಾಜಿಕ ಕುಂದುಕೊರತೆಗಳ ಸಭೆ ನಡೆಸಿದರಾದರೂ, ಎಲ್ಲಾ ಸಾರ್ವಜನಿಕರಿಗೆ ನಗರದ ಸಮಸ್ಯೆಗಳನ್ನು ನಿವೇದಿಸಲು ಅಸಾಧ್ಯವಾಗದ ಹಿನ್ನೆಲೆ ಕೆಲ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.

ಭ್ರಷ್ಟಾಚಾರದ ​ ವಿರುದ್ಧ ಆಕ್ರೋಶ: ಎಡಿಜಿಪಿ ಅಲೋಕ್ ಕುಮಾರ್ ಅವರು ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿಯವರು, ಮಾಧ್ಯಮದ ಮುಂದೆಯೇ ಎಡಿಜಿಪಿ ಅಲೋಕ್ ಕುಮಾರ್ ಅವರಲ್ಲಿ ಮಂಗಳೂರು ಪೊಲೀಸ್ ಇಲಾಖೆಯ ವಿರುದ್ಧ ಭ್ರಷ್ಟಾಚಾರ ಆರೋಪದ ಸುರಿಮಳೆಗೈದಿದ್ದಾರೆ.

ಮಹಿಳಾ ಠಾಣೆಯಲ್ಲಿ ಲಂಚಾವತಾರ : ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಲಂಚಾವತಾರ ತಾಂಡವಾಡುತ್ತಿದೆ. ಈ ಬಗ್ಗೆ ದಾಖಲೆ ಕೊಡುತ್ತೇನೆ. ಸಂತ್ರಸ್ತರನ್ನು ಕರೆದುಕೊಂಡು ಬಂದು ತಮ್ಮ ಮುಂದೆ ನಿಲ್ಲಿಸುತ್ತೇನೆ. ಈ ಬಗ್ಗೆ ತಾನು ಕಮಿಷನರ್ ಅವರಲ್ಲಿ ಭೇಟಿಗೆ ಅವಕಾಶ ಕೇಳಿದರೆ ನನಗೆ ಈವರೆಗೆ ಅವಕಾಶ ದೊರಕಿಲ್ಲ. ನಗರದಲ್ಲಿ ಕೆಲ ಲಾಡ್ಜ್, ಸಲೂನ್​​ಗಳು ಯಾರಿಂದ ಕಾರ್ಯಾಚರಣೆ ಮಾಡುತ್ತಿವೆ ಅನ್ನೋದು ನಮಗೆ ಗೊತ್ತಿದೆ. ನಾವೇನಾದರೂ ಇದನ್ನು ದೂರು ನೀಡಿದ್ದಲ್ಲಿ ನಮ್ಮ ಮೇಲೆ ಕೇಸ್​ ದಾಖಲಿಸುತ್ತಾರೆ. ರಾಜಕಾರಣಿಗಳ ದಾಳಕ್ಕೆ ತಕ್ಕಂತೆ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ ಎಂದು ಆರೋಪಿಸಿದರು.

'ಪ್ರೇಮಿಗಳ ದಿನ' ಆಚರಣೆಗೆ ವಿರೋಧ: ಇನ್ನೇನು 'ಪ್ರೇಮಿಗಳ ದಿನಾಚರಣೆ' ಹತ್ತಿರ ಬರುತ್ತಿದ್ದು, ಎಂದಿನಂತೆ ಈ ಬಾರಿಯೂ ಹಿಂದೂ ಜನಜಾಗೃತಿ ಸಮಿತಿ ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯು ಎಡಿಜಿಪಿಗೆ ಮನವಿಯನ್ನು ನೀಡಿದೆ. ಈ ಸಂದರ್ಭದಲ್ಲಿ ಸದಸ್ಯೆ ಭವ್ಯಾ ಗೌಡ ಮಾತನಾಡಿ, ' ಫೆ.14ರಂದು ಪ್ರೇಮಿಗಳ ದಿನಾಚರಣೆಯ ಹೆಸರಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮಾಡುತ್ತ ಯುವ ಜನತೆ ಅನೈತಿಕತೆ ಹಾಗೂ ಸ್ವೇಚ್ಛಾಚಾರದಲ್ಲಿ ತೊಡಗುತ್ತಾರೆ. ಪ್ರೇಮಿಗಳ ದಿನದ ನೆಪದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದು ಖೇದಕರ. ಈ ದಿನ ಪಾರ್ಟಿ ನೆಪದಲ್ಲಿ ಯುವಕ ಯುವತಿಯರು ಮದ್ಯಪಾನ, ಧೂಮಪಾನ, ಡ್ರಗ್ಸ್ ಮಾಫಿಯಾಗಳಿಗೆ ಬಲಿಯಾಗುತ್ತಿದ್ದಾರೆ' ಎಂದು ಕಳವಳ ವ್ಯಕ್ತಪಡಿಸಿದರು.

ಜನಜಾಗೃತಿ ಅಭಿಯಾನ: ಸಮೀಕ್ಷೆ ಪ್ರಕಾರ ಈ ದಿನದಂದು ಗರ್ಭ ನಿರೋಧಕ ಮಾತ್ರೆ ಸರಬರಾಜು ಹೆಚ್ಚಾಗುತ್ತಿದೆ. ಆದ್ದರಿಂದ ಪ್ರೇಮಿಗಳ ದಿನದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಜನಜಾಗೃತಿ ಅಭಿಯಾನ ನಡೆಸಲು ಉದ್ದೇಶಿಸಿದೆ. ಹಾಗಾಗಿ ಪ್ರೇಮಿಗಳ ದಿನದಂದು ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು. ಇದಕ್ಕಾಗಿ ವಿಶೇಷ ಪೊಲೀಸ್ ದಳ ನಿರ್ಮಿಸಬೇಕು. 2019 ಫೆ.14ರಂದು ಪುಲ್ವಾಮ ದಾಳಿ ನಡೆಯಿತು. ಇದರಲ್ಲಿ ದೇಶದ 40 ಯೋಧರು ಹುತಾತ್ಮರಾದರು. ಆದ್ದರಿಂದ ಯುವ ಜನತೆಯಲ್ಲಿ ರಾಷ್ಟ್ರ ಜಾಗೃತಿ ಮೂಡಿಸಲು ಆ ದಿನವನ್ನು ದುಃಖದ ದಿನವಾಗಿ ಮಾಡಬೇಕು. ಇಂತಹ ದಿನಗಳನ್ನು ಆಚರಿಸುವ ಬದಲು ಪ್ರೇಮಿಗಳ ದಿನಾಚರಣೆ ಮಾಡುವುದು ಅತ್ಯಂತ ಖಂಡನೀಯ ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಡಿಜಿಪಿ ಅಲೋಕ್ ಕುಮಾರ್, ಕಾನೂನಿನಲ್ಲಿ ಪ್ರೇಮಿಗಳ ದಿನಾಚರಣೆ ಮಾಡಬಾರದೆಂದು ಇಲ್ಲ. ಪೊಲೀಸರು ಕಾನೂನಿನ ಅಡಿಯಲ್ಲಿ ಯಾವ ರೀತಿ ವ್ಯವಸ್ಥೆ ಮಾಡಬೇಕೋ ಅದನ್ನು ಮಾಡುತ್ತಾರೆ. ಕಾನೂನು ಬಿಟ್ಟು ಏನಾದರೂ ಮಾಡಿದ್ದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಬಿಐಇಸಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ.. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್

Last Updated : Feb 11, 2023, 12:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.