ETV Bharat / state

ಲಾಕ್​ಡೌನ್​ ಬಳಿಕ ಮಂಗಳೂರಿನಲ್ಲಿ ರಸ್ತೆಗಿಳಿದ ಖಾಸಗಿ ಬಸ್​ಗಳು - ಮಂಗಳೂರು ಇತ್ತೀಚಿನ ಸುದ್ದಿ

ಕೊರೊನಾ ಪ್ರಚೋದಿತ ಲಾಕ್​ಡೌನ್​ನಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್​ ಸೇವೆ ಇದೀಗ ಮತ್ತೆ ಪ್ರಾರಂಭವಾಗಿದೆ. ಇಂದು ಮುಂಜಾನೆಯಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಸ್​ಗಳು ರಸ್ತೆಗಿಳಿದಿವೆ.

Mangaluru
ಮಂಗಳೂರಿನಲ್ಲಿ ರಸ್ತೆಗಿಳಿದ ಖಾಸಗಿ ಬಸ್​ಗಳು
author img

By

Published : Jul 1, 2021, 12:38 PM IST

ಮಂಗಳೂರು: ಅನ್​ಲಾಕ್​ ಬಳಿಕ ಒಂದೊಂದೇ ಕಾರ್ಯಚಟುವಟಿಕೆಗಳು ಪುನಾರಂಭ ಆಗ್ತಿವೆ. ಕೊರೊನಾ ಲಾಕ್​ಡೌನ್​ನಿಂದ ಬಂದ್​ ಆಗಿದ್ದ ಖಾಸಗಿ ಬಸ್​ ಸಂಚಾರ ಸಹ ಇಂದು ಬೆಳಗ್ಗೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭವಾಗಿದೆ.

ಲಾಕ್​ಡೌನ ಸಂದರ್ಭದಲ್ಲಿ ಸ್ಥಗಿತವಾಗಿದ್ದ ಖಾಸಗಿ ಬಸ್ ಸೇವೆ ಜೂನ್ ಕೊನೆಯ ವಾರದಲ್ಲಿ ಆರಂಭಿಸಲು ಅನುಮತಿ ನೀಡಲಾಗಿತ್ತು. ಆದರೆ ಬಸ್ ನಿರ್ವಹಣೆ, ತೆರಿಗೆ ಮತ್ತು ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಆಗ್ರಹಿಸಿ ತಕ್ಷಣದಿಂದ ಆರಂಭಿಸಲು ಖಾಸಗಿ ಬಸ್ ಮಾಲೀಕರು ನಿರಾಕರಿಸಿದ್ದರು. ಬಸ್​ನಲ್ಲಿ ಶೇ.50 ರಷ್ಟು ಮಂದಿಗೆ ಪ್ರಯಾಣಕ್ಕೆ ಅವಕಾಶ ನೀಡಿರುವುದರಿಂದ ಸಾರಿಗೆ ಪ್ರಾಧಿಕಾರ ಕೊರೊನಾ ಲಾಕ್​ಡೌನ್ ನಿಯಮಾವಳಿ ಮುಗಿಯುವ ತನಕ ಶೇ.20ರಷ್ಟು ಬಸ್ ದರ ಏರಿಕೆಗೆ ಅನುಮತಿ ನೀಡಿತ್ತು. ಇದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಖಾಸಗಿ ಬಸ್ ಸೇವೆ ಪುನಾರಂಭವಾಗಿದೆ. ಮಂಗಳೂರಿನಿಂದ ಬೆಳಗ್ಗೆಯಿಂದಲೇ ಖಾಸಗಿ ಬಸ್​ಗಳು ನಗರ, ಉಡುಪಿ ಮತ್ತು ಜಿಲ್ಲೆಯ ವಿವಿಧೆಡೆ ಸಂಚರಿಸುತ್ತಿವೆ.

ಮಂಗಳೂರಿನಲ್ಲಿ ರಸ್ತೆಗಿಳಿದ ಖಾಸಗಿ ಬಸ್​ಗಳು

ಸಿಟಿ ಬಸ್​ಗಳಿಗೆ ಸರ್ವಿಸ್ ಬಸ್ ನಿಲ್ದಾಣವೇ ತಂಗುದಾಣ:

ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್​ಗಳ ಆರಂಭ ಮತ್ತು ಕೊನೆ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ಆಗುತ್ತಿತ್ತು. ಇಲ್ಲಿಯ ರಸ್ತೆಯಲ್ಲಿ ನಗರ ಸಾರಿಗೆ ಬಸ್​ಗಳು ನಿಲ್ಲುತ್ತಿದ್ದವು. ಆದರೆ ಇಂದಿನಿಂದ ಈ ಎಲ್ಲಾ ನಗರ ಬಸ್ ಗಳು ಸರ್ವಿಸ್ ಬಸ್ ನಿಲ್ದಾಣದಲ್ಲಿ ನಿಲ್ಲುವಂತೆ ವ್ಯವಸ್ಥೆ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.