ಸುಳ್ಯ(ದಕ್ಷಿಣ ಕನ್ನಡ): ಲಾಕ್ ಡೌನ್ ಹಿನ್ನೆಲೆಯಲ್ಲಿ ಆಹಾರ ಸಿಗದ ಜನರಿಗೆ ಆಹಾರ ಸಾಮಗ್ರಿಗಳು ಒದಗಿಸುವುದರ ಜೊತೆಗೆ ಮೂಕ ಬೀದಿ ನಾಯಿಗಳಿಗೂ ಆಹಾರ ಹಾಕಿ ಗ್ರಾಮ ಪಂಚಾಯತ್ ಅಧ್ಯಕ್ಷಯೋರ್ವರು ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷ ಅಚ್ಯುತ್ ಗುತ್ತಿಗಾರು ಮತ್ತು ಸಂಗಡಿಗರು ತಮ್ಮ ಗ್ರಾಮದಲ್ಲಿ ಯಾರೂ ಆಹಾರ ಸಿಗದೇ ತೊಂದರೆ ಅನುಭವಿಸಬಾರದು ಎಂದು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಜನರಿಗೆ ಆಹಾರ ಸಾಮಗ್ರಿಗಳು ನೀಡುವುದರ ಜೊತೆಗೆ, ಬೀದಿಯಲ್ಲಿ ಅಲೆದಾಡುವ ಬೀದಿ ನಾಯಿಗಳು ಸೇರಿದಂತೆ ಮೂಕ ಪ್ರಾಣಿಗಳಿಗೂ ಆಹಾರ ನೀಡುವ ಮೂಲಕ ಅವುಗಳ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ತಮ್ಮ ಗ್ರಾಮದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದೊಂದಿಗೆ, ಗುತ್ತಿಗಾರು ಪೇಟೆಯಾದ್ಯಂತ ಸಂಚರಿಸುತ್ತ ಆಹಾರ ನೀಡುತ್ತಿರುವ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಅವರ ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.