ETV Bharat / state

ಮತಾಂತರ ಆರೋಪ ಇಲ್ಲ: ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ವಿಕ್ಟರ್ ಮಾರ್ಟೀಸ್​ ​ - ವಿಕ್ಟರ್ ಮಾರ್ಟೀಸ್

ಮತಾಂತರ ನಿಷೇಧ ಕಾಯ್ದೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಕಡಬದ ವ್ಯಕ್ತಿ. ಅರ್ಜಿ ಸಲ್ಲಿಸಿದ ವ್ಯಕ್ತಿ ವಿರುದ್ಧವೇ ಮತಾಂತರ ಆರೋಪ. ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಅರ್ಜಿದಾರ ವಿಕ್ಟರ್ ಮಾರ್ಟೀಸ್.

Victor Martiz
ವಿಕ್ಟರ್ ಮಾರ್ಟೀಸ್
author img

By

Published : Nov 23, 2022, 12:05 PM IST

Updated : Nov 23, 2022, 12:59 PM IST

ಕಡಬ(ದಕ್ಷಿಣ ಕನ್ನಡ): ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಪ್ರಶ್ನಿಸಿ ಕಡಬದ ವ್ಯಕ್ತಿಯೋರ್ವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಕಡಬ ತಾಲೂಕಿನ ಕುಟ್ರುಪಾಡಿ ನಿವಾಸಿ ವಿಕ್ಟರ್ ಮಾರ್ಟೀಸ್ ಎಂಬವರು ಮತಾಂತರ ನಿಷೇಧ ಕಾಯ್ದೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರು.

ಈ ಅರ್ಜಿಯು ಮುಖ್ಯ ನ್ಯಾ. ಪಿ.ಬಿ ವರಾಲೆ ನೇತೃತ್ವದ ನ್ಯಾಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ರಾಜ್ಯದಲ್ಲಿ ಮತಾಂತರವನ್ನು ನಿಷೇಧಿಸಲು ರಾಜ್ಯ ಸರ್ಕಾರ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ಕಾಯ್ದೆ-2020 ಅನ್ನು ಜಾರಿಗೊಳಿಸಿದೆ. ಇದು ಸಂವಿಧಾನ ವಿರೋಧಿಯಾಗಿದ್ದು, ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ಭಯೋತ್ಪಾದಕರಾಗುತ್ತಿದ್ದಾರೆ, ಮತಾಂತರ ಕಾನೂನುಬದ್ಧ ಮಾಡುತ್ತಿದ್ದೇವೆ: ಸಿಎಂ

ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ: ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ಮತಾಂತರ ನಿಷೇಧ ಕಾಯ್ದೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿರುವ ಅರ್ಜಿದಾರರ ವಿರುದ್ಧವೇ 2 ಕ್ರಿಮಿನಲ್ ಪ್ರಕರಣಗಳಿವೆ. ಈ ವ್ಯಕ್ತಿಯ ಅರ್ಜಿಯನ್ನು ಪರಿಗಣಿಸಬಾರದು ಎಂದು ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ಮಾನ್ಯ ನ್ಯಾಯಪೀಠ ವಿಕ್ಟರ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ.28ಕ್ಕೆ ಮುಂದೂಡಿದೆ.

ಮತಾಂತರ ನಿಷೇಧ ಕಾಯ್ದೆಯನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಿದ ವಿಕ್ಟರ್ ಮಾರ್ಟೀಸ್

ಮತಾಂತರ ಆರೋಪ ಇಲ್ಲ: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಕ್ಟರ್ 'ನನ್ನ ವಿರುದ್ಧ ಎಲ್ಲೂ ಮತಾಂತರ ಮಾಡಿರುವ ಪ್ರಕರಣ ದಾಖಲಾಗಿಲ್ಲ. ವಿನಾಕಾರಣ ಮತಾಂತರ ಆರೋಪ ಎಂಬಂತೆ ಬಿಂಬಿಸಿ ನನ್ನ ತೇಜೋವಧೆ ಮಾಡಲಾಗುತ್ತಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇನೆ. ನಾನು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನನ್ನ ವಿರುದ್ಧ ಕೆಲವು ಪ್ರಕರಣಗಳು ಇರುವ ಕಾರಣದಿಂದಾಗಿ ಮಾನ್ಯ ನ್ಯಾಯಾಲಯವು ನ.28ಕ್ಕೆ ಮುಂದೂಡಿದೆ' ಎಂದು ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ: ಕಾಯ್ದೆ ಉಲ್ಲಂಘಿಸಿದ್ರೆ ಯಾವ ಶಿಕ್ಷೆ?

Last Updated : Nov 23, 2022, 12:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.