ETV Bharat / state

ವಿದ್ಯುತ್ ಬಿಲ್ ಕಟ್ಟಿಲ್ಲ, ವಿದ್ಯುತ್ ಕಡಿತ ಮಾಡುವುದಾಗಿ ಮೆಸ್ಕಾಂ ಹೆಸರಲ್ಲಿ ವಂಚನೆ - ಈಟಿವಿ ಭಾರತ ಕನ್ನಡ

ಮೆಸ್ಕಾಂ ಹೆಸರಲ್ಲಿ ಸಂದೇಶ ಕಳುಹಿಸಿ, ಹಿಂದಿನ ವಿದ್ಯುತ್​ ಶುಲ್ಕ ಬಾಕಿ ಇದೆ. ಆದ್ದರಿಂದ ನಿಮ್ಮ ವಿದ್ಯುತ್​ ಕಡಿತ ಮಾಡಲಾಗುವುದು ಎಂದು ಬೆದರಿಸಿ ಜನರಿಂದ ಹಣ ಪೀಕಲು ಆನ್​ಲೈನ್​ ವಂಚಕರು ಮುಂದಾಗಿದ್ದಾರೆ.

online-fraud-in-the-name-of-mescom
ವಿದ್ಯುತ್ ಬಿಲ್ ಕಟ್ಟಿಲ್ಲ,ವಿದ್ಯುತ್ ಕಡಿತ ಮಾಡುವುದಾಗಿ ಮೆಸ್ಕಾಂ ಹೆಸರಲ್ಲಿ ವಂಚನೆ
author img

By

Published : Dec 8, 2022, 3:34 PM IST

ಕಡಬ(ದಕ್ಷಿಣ ಕನ್ನಡ): ಈ ಹಿಂದೆ ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ, ಗೋಲ್ಡ್ ಕಾಯಿನ್ ನಿಧಿ, ಎಂದೆಲ್ಲಾ ಕರೆ ಮಾಡಿ ಜನರ ಬ್ಯಾಂಕ್ ಖಾತೆಯ ಮಾಹಿತಿ ಪಡೆದು ವಂಚನೆ ಮಾಡುತ್ತಿದ್ದ ಆನ್ಲೈನ್ ವಂಚಕರು ಇದೀಗ ವಿದ್ಯುತ್ ಇಲಾಖೆಯ ಮೆಸ್ಕಾಂ ಹೆಸರಲ್ಲಿ ವಂಚನೆ ಆರಂಭಿಸಿದ್ದಾರೆ. ಆನ್​ಲೈನ್​ ವಂಚನೆಗಳ ಬಗ್ಗೆ ಜನರು ಕೊಂಚ ಜಾಗೃತರಾದ ಬೆನ್ನಲ್ಲೇ ಇದೀಗ ಹೊಸ ರೀತಿಯಲ್ಲಿ ಹಣ ಪೀಕಲು ವಂಚಕರು ಸಂಚು ರೂಪಿಸಿದ್ದಾರೆ.

ಮೆಸ್ಕಾಂ ಹೆಸರಲ್ಲಿ ವಂಚನೆ: ನಿಮ್ಮ ವಿದ್ಯುತ್ ಬಿಲ್ ಬಾಕಿ ಇದ್ದಲ್ಲಿ ನಿಮಗೊಂದು ಫೋನ್ ನಂಬರ್ (+91 9650933774)ನಿಂದ ಸಂದೇಶ ಬರುತ್ತದೆ. ಅದರಲ್ಲಿ ನಿಮ್ಮ ಹಿಂದಿನ ವಿದ್ಯುತ್ ಶುಲ್ಕ ಬಾಕಿ ಇದ್ದು ಇಂದು ರಾತ್ರಿ 9:30ಕ್ಕೆ ವಿದ್ಯುತ್ ಕಡಿತ ಮಾಡಲಾಗುವುದು. ವಿದ್ಯುತ್ ಕಡಿತ ಮಾಡದಿರಲು ಈ ನಂಬರ್​ (9883677632)ಗೆ ಕರೆ ಮಾಡಿ ಎಂದು ಅದರಲ್ಲಿ ಬರೆದಿರುತ್ತದೆ. ಈ ತರಹ ಕಡಬದ ಹಲವು ವಿದ್ಯುತ್ ಗ್ರಾಹಕರಿಗೆ ಮೆಸೇಜ್ ಬಂದಿದೆ.

ಈ ನಂಬರ್‌ಗೆ ಕರೆ ಮಾಡಿದರೆ ಅತ್ತ ಕಡೆಯಿಂದ ಮಾತನಾಡುವ ವ್ಯಕ್ತಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ವಿನಂತಿ ಮಾಡುತ್ತಾನೆ. ಹಾಗೇ ಹಿಂದಿಯಲ್ಲಿ ಮಾತನಾಡುವ ವ್ಯಕ್ತಿ ವಿದ್ಯುತ್​ ಬಿಲ್ ಕೂಡಲೇ ಪಾವತಿ ಮಾಡಿ ಈಗ ಮೆಸ್ಕಾಂನಲ್ಲಿ ಹೊಸ ನಿಯಮ ಬಂದಿದೆ. ನಮಗೆ ಏನೂ ಮಾಡಲು ಸಾಧ್ಯವಿಲ್ಲ, ವಿದ್ಯುತ್ ಕಡಿತ ಮಾಡಲೇಬೇಕು ಎಂದು ಹೇಳುತ್ತಾನೆ.

ವಿದ್ಯುತ್ ಬಿಲ್ ಕಟ್ಟಿಲ್ಲ,ವಿದ್ಯುತ್ ಕಡಿತ ಮಾಡುವುದಾಗಿ ಮೆಸ್ಕಾಂ ಹೆಸರಲ್ಲಿ ವಂಚನೆ

ಈ ಬಗ್ಗೆ ಏನಾದರೂ ಮಾಡಿ ಸರ್ ಇವತ್ತು ವಿದ್ಯುತ್ ಕಡಿತ ಮಾಡಬೇಡಿ ಎಂದು ವಿನಂತಿಸುವಾಗ, ತನ್ನ ಉನ್ನತ ಅಧಿಕಾರಿಗಳು ನಿಮಗೆ ಕರೆ ಮಾಡುತ್ತಾರೆ ಎಂದು ಹೇಳಿ ಫೋನ್ ಕಡಿತ ಮಾಡುತ್ತಾನೆ. ಕೂಡಲೇ ಮತ್ತೊಂದು ನಂಬರ್​ನಿಂದ (+918777496357) ಕರೆ ಮಾಡುವ ವ್ಯಕ್ತಿ ತಾನು ಮಂಗಳೂರು ಮೆಸ್ಕಾಂನ ರೀಜಿನಲ್ ಆಫೀಸರ್ ನಿಮ್ಮ ವಿದ್ಯುತ್​ ಶುಲ್ಕ ಯಾಕೆ ಕಟ್ಟಿಲ್ಲ ಎಂದು ಗದರಿಸುತ್ತಾನೆ. ಇಂದು ಹಣವಿಲ್ಲ ಸರ್ ನಾಳೆ ಕಟ್ಟುತ್ತೇನೆ ಎಂದು ಹೇಳಿದರೆ, ನೀವು ಕೂಡಲೇ *401*8918480220 ಇದಕ್ಕೆ ಕರೆ ಮಾಡಿ ಎಂದು ಹೇಳುತ್ತಾನೆ.

ತನ್ನ ಪ್ರಯತ್ನ ಫಲ ನೀಡಲ್ಲ ಎಂದು ತಿಳಿದ ಅನಾಮಧೇಯ ವ್ಯಕ್ತಿ ಈಗಲೇ ನಿಮ್ಮ ಫೋನ್ ನಂಬರ್ ಬ್ಲಾಕ್ ಮಾಡುತ್ತೇನೆ, ನಿಮ್ಮ ವಾಟ್ಸಾಪ್ ಬ್ಲಾಕ್ ಮಾಡುತ್ತೇನೆ, ಇಂದೇ ರಾತ್ರಿ ನಿಮ್ಮ ವಿದ್ಯುತ್ ಪೂರ್ಣವಾಗಿ ಕಡಿತ ಮಾಡುತ್ತೇನೆ ಎಂದು ಬೈದು ಕರೆ ಕಡಿತ ಮಾಡುತ್ತಾನೆ. ನಂತರದಲ್ಲಿ ನಿಮಗೆ ಒಂದರ ಮೇಲೊಂದರಂತೆ ಇಂಟರ್ನೆಟ್ ಕರೆಗಳು ಬರಲು ಆರಂಭವಾಗುತ್ತದೆ.

ಒಂದು ವೇಳೆ ಜಿಯೋ ನಂಬರ್ ಆಗಿದ್ದಲ್ಲಿ *401* ಸಂಖ್ಯೆಯ ಜೊತೆಗೆ ಯಾವುದೇ ಫೋನ್ ನಂಬರ್ ಸೇರಿಸಿ ಕರೆ ಮಾಡಿದರೂ ಅದು ನಮ್ಮ ಕರೆಗಳನ್ನು ಇನ್ನೊಂದು ನಂಬರ್ ಗೆ ಫಾರ್ವರ್ಡ್ ಮಾಡುವ ತಂತ್ರಜ್ಞಾನ ಆಗಿದೆ. ಈ ತರಹ ನಿಮಗೆ ಆದಲ್ಲಿ ಕೂಡಲೇ ಆಯಾ ಸಿಮ್ ಕಸ್ಟಮರ್ ಕೇರ್ ಗೆ ಕರೆ ಮಾಡಿ ಫಾರ್ವರ್ಡ್ ಕರೆಗಳನ್ನು ನಿಷ್ಕ್ರಿಯಗೊಳಿಸಬಹುದು.

ಮೆಸ್ಕಾಂ ಅಧಿಕಾರಿಗಳ ಪ್ರತಿಕ್ರಿಯೆ: ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ, ಕಡಬ ಮೆಸ್ಕಾಂ ಅಧಿಕಾರಿಗಳಾದ ಸಜಿಕುಮಾರ್ ಮತ್ತು ಕೃಷ್ಣಮೂರ್ತಿ, ಮೆಸ್ಕಾಂ ಹೆಸರಲ್ಲಿ ಬರುವ ಯಾವುದೇ ಅನಾಮಧೇಯ ಕರೆಗಳನ್ನು ನಂಬಬೇಡಿ. ಬಿಲ್ ಬಾಕಿ ಸೇರಿದಂತೆ ಯಾವುದೇ ವಿದ್ಯುತ್ ಸಂಬಂಧ ಸಮಸ್ಯೆಗಳಿಗೆ ಗ್ರಾಹಕರು ನೇರವಾಗಿ ನಮ್ಮ ಕಚೇರಿಗೆ ಭೇಟಿ ನೀಡಿ. ಗ್ರಾಹಕರ ಅಧಿಕೃತ ಮಾಹಿತಿ ದಾಖಲೆ ಮಾಡುವ ಮೂಲಕ ಆನ್ಲೈನ್, ನನ್ನ ಮೆಸ್ಕಾಂ ಆ್ಯಪ್,ಅಂಚೆ ಕಚೇರಿ,ಗ್ರಾಮ ವನ್ ವ್ಯವಸ್ಥೆ ಮೂಲಕ ಪಾವತಿ ಮಾಡಬಹುದು ಎಂದು ಹೇಳಿದರು.

ವಿದ್ಯುತ್ ಬಿಲ್ ಬಾಕಿ ಇದ್ದಲ್ಲಿ ಆಯಾ ವಲಯಗಳ ನಿಮ್ಮ ಪರಿಚಯದ ನಮ್ಮ ಪವರ್‌ಮ್ಯಾನ್‌ ಸಿಬ್ಬಂದಿ ನಿಮ್ಮನ್ನು ಭೇಟಿಯಾಗುತ್ತಾರೆ. ವಿದ್ಯುತ್ ಕಡಿತ ಮಾಡಲು ನಮ್ಮ ಸಿಬ್ಬಂದಿಗಳು ಬೆಳಗ್ಗೆ 8:30 ರಿಂದ ಮಧ್ಯಾಹ್ನ 2:00 ನಡುವೆ ಆಗಮಿಸುತ್ತಾರೆ. ಯಾವುದೇ ಪರಿಚಯ ಇಲ್ಲದ ವ್ಯಕ್ತಿಗಳಿಗೆ ಯಾವುದೇ ಮಾಹಿತಿಯನ್ನೂ ನೀಡಬೇಡಿ. ನಮ್ಮ ಬಿಲ್ ಪಾವತಿ ಕೇಂದ್ರಗಳಲ್ಲಿ ಬೆಳಗ್ಗೆ 9:30 ರಿಂದ ಮಧ್ಯಾಹ್ನ 3:30, ಗ್ರಾಮೀಣ ಭಾಗಗಳ ಬಿಲ್ ಕೌಂಟರ್‌ಗಳಲ್ಲಿ ಬೆಳಗ್ಗೆ 9:30 ರಿಂದ ಮಧ್ಯಾಹ್ನ 1:30 ವರೆಗೆ ಶುಲ್ಕ ಪಾವತಿಸಲು ಸೌಲಭ್ಯ ಇದೆ. ಈಗಾಗಲೇ ಆನ್ಲೈನ್ ವಂಚನೆ ಬಗ್ಗೆ ಸೈಬರ್ ಪೊಲೀಸರಿಗೆ ಹಲವು ಕಡೆಗಳಲ್ಲಿ ಇಲಾಖೆ ವತಿಯಿಂದ ದೂರು ನೀಡಲಾಗಿದೆ. ನಮ್ಮಲ್ಲೂ ಕೂಡಲೇ ದೂರು ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಗ್ರಾಹಕರು ವಿದ್ಯುತ್ ಬಿಲ್ ಪಾವತಿಯನ್ನು ನಮ್ಮ ಬಿಲ್ ಪಾವತಿ ಕೇಂದ್ರದಲ್ಲೇ ಪಾವತಿಸಿ ರಶೀದಿ ಪಡೆದುಕೊಳ್ಳಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರೆಂಟ್​ ಬಿಲ್ ಪಾವತಿಸಿಲ್ಲವೆಂದು ವೃದ್ಧೆಯಿಂದ 28 ಲಕ್ಷ ರೂ ದೋಚಿದ ಖದೀಮರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.