ಉಳ್ಳಾಲ (ದಕ್ಷಿಣ ಕನ್ನಡ): ಸಹೋದರರು ಸಂಚರಿಸುತ್ತಿದ್ದ ಬೈಕ್ ಅಪಘಾತಕ್ಕೀಡಾಗಿ ಓರ್ವ ಸಾವನ್ನಪ್ಪಿ, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜೆಪ್ಪು ಮಹಾಂಕಾಳಿಪಡ್ಪು ಕ್ರಾಸ್ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಪ್ರತಾಪ್ ಶೆಟ್ಟಿ (32) ಮೃತರು. ಸಹೋದರ ಅಭಿಲಾಷ್ ಶೆಟ್ಟಿ (22) ಗಂಭೀರವಾಗಿ ಗಾಯಗೊಂಡವರು. ಬಾರ್ನಲ್ಲಿ ಮ್ಯಾನೇಜರ್ ಆಗಿ ಪ್ರತಾಪ್ ಶೆಟ್ಟಿ ಕೆಲಸ ಮಾಡುತ್ತಿದ್ದರು. ಅದೇ ಬಾರ್ನಲ್ಲಿ ಅವರ ಚಿಕ್ಕಮ್ಮನ ಮಗ ಅಭಿಲಾಷ್ ಶೆಟ್ಟಿ (22) ಕೌಂಟರ್ ಬಾಯ್ ಆಗಿದ್ದರು. ಇಬ್ಬರು ಕೆಲಸ ಮುಗಿಸಿ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಜೆಪ್ಪು ಮಹಾಕಾಳಿಪಡ್ಪು ಕ್ರಾಸ್ ಬಳಿ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.
(ಇದನ್ನೂ ಓದಿ: ಶಬ್ದಕ್ಕೆ ಹೆದರಿ ಬೈಕ್ ಸವಾರನಿಗೆ ಗುದ್ದಿದ ಎಮ್ಮೆ.. ಶಬ್ದ ಮಾಲಿನ್ಯದ ಜಾಗೃತಿ ಮೂಡಿಸಿದ IPS ಸಜ್ಜನರ್)