ETV Bharat / state

ಡಿ.17ರಂದು ರಾಜ್ಯದ ಎಲ್ಲ ವಿವಿ, ಪದವಿ ಕಾಲೇಜುಗಳು ಬಂದ್: ಎನ್​ಎಸ್​ಯುಐ

ಡಿಸೆಂಬರ್‌ 17ರಂದು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಪದವಿ ಕಾಲೇಜುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಯಲಿದೆ ಎಂದು ಎನ್​ಎಸ್​ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ತಿಳಿಸಿದರು.

nsui-called-for-university-and-colleges-bundh
ಡಿ.17ರಂದು ರಾಜ್ಯದಲ್ಲಿ ಎಲ್ಲ ವಿಶ್ವವಿದ್ಯಾಲಯ,ಪದವಿ ಕಾಲೇಜುಗಳು ಬಂದ್ : ಎನ್​ಎಸ್​ಯುಐ
author img

By

Published : Dec 15, 2022, 5:01 PM IST

ಎನ್​ಎಸ್​ಯುಐ ಮಾಧ್ಯಮಗೋಷ್ಟಿ

ಮಂಗಳೂರು: ವಿದ್ಯಾರ್ಥಿ ವೇತನ, ಪದವಿ ಫಲಿತಾಂಶ ಪ್ರಕಟ ಹಾಗೂ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಒತ್ತಾಯಿಸಿ ಎನ್​ಎಸ್​ಯುಐ ಡಿ.17ರಂದು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಪದವಿ ಕಾಲೇಜುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಿದೆ ಎಂದು ಎನ್​ಎಸ್​ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸಿದೆ. ಹಲವು ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನವನ್ನೇ ನಂಬಿ ವಿದ್ಯಾರ್ಜನೆ ಮಾಡುತ್ತಾರೆ. ಆದ್ದರಿಂದ ತಕ್ಷಣ ವಿದ್ಯಾರ್ಥಿ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಅದೇ ರೀತಿ ಪದವಿ ಪರೀಕ್ಷೆಗಳು ಮುಗಿದು ಆರೇಳು ತಿಂಗಳು ಕಳೆದರೂ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ. ಇದರಿಂದಾಗಿ ಮುಂದಿನ ಸೆಮಿಸ್ಟರ್ ಓದಲು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಸರಕಾರ ಘೋಷಿಸಿರುವ ಉಚಿತ ಬಸ್ ಪಾಸ್ ಇನ್ನೂ ಜಾರಿಯಾಗಿಲ್ಲ. ಇದೀಗ ಅವೈಜ್ಞಾನಿಕವಾಗಿ ಎನ್ಇಪಿಯನ್ನು ಜಾರಿಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದರು.

ಇದನ್ನೂ ಓದಿ : ಬಸ್​ನಲ್ಲಿ ಕುಳಿತ ವ್ಯಕ್ತಿಗೆ ಬ್ಯಾಗ್​ ನೀಡಿ ವಾಪಸ್​ ಪಡೆದ ಮಹಿಳೆ.. ತಪ್ಪು ಎಂಬಂತೆ ಬಿಂಬಿಸಿ ವ್ಯಕ್ತಿಗೆ ಥಳಿಸಿದ ಯುವಕರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.