ETV Bharat / state

ನ.8 ರಂದು ಅಕ್ಷರ ಸಂತ ಹರೇಕಳ ಹಾಜಬ್ಬನವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

2020 ನೇ ಸಾಲಿನಲ್ಲಿ ಹರೇಕಳ ಹಾಜಬ್ಬನವರಿಗೆ ಪ್ರಕಟಿಸಿದ್ದ ಪದ್ಮಶ್ರೀ ಪ್ರಶಸ್ತಿಯ ಪ್ರದಾನ ಕಾರ್ಯಕ್ರಮ ನಡೆದಿರಲಿಲ್ಲ. ಇದೀಗ ನ. 8 ರಂದು ದೆಹಲಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೇಂದ್ರ ಗೃಹ ಸಚಿವಾಯದಿಂದ ಅಕ್ಷರ ಸಂತನಿಗೆ ಆಹ್ವಾನ ಬಂದಿದೆ.

harekala hajabba
ಹರೇಕಳ ಹಾಜಬ್ಬ
author img

By

Published : Oct 21, 2021, 2:25 PM IST

ಮಂಗಳೂರು: ಭಾರತ ಸರ್ಕಾರದಿಂದ ನೀಡಿರುವ ಪದ್ಮಶ್ರೀ ಪ್ರಶಸ್ತಿಯು ನ.8 ರಂದು ಅಕ್ಷರ ಸಂತ ಹರೇಕಳ ಹಾಜಬ್ಬನವರಿಗೆ ಪ್ರದಾನವಾಗಲಿದೆ.

2020 ನೇ ಸಾಲಿನಲ್ಲಿ ಪ್ರಕಟಿಸಲಾಗಿದ್ದ ಪದ್ಮಶ್ರೀ ಪ್ರಶಸ್ತಿಯ ಪ್ರದಾನ ಕಾರ್ಯಕ್ರಮ ನಡೆದಿರಲಿಲ್ಲ. ಇದೀಗ ನ.8 ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರಶಸ್ತಿ ಸ್ವೀಕರಿಸಲು ನ. 8 ರಂದು ದೆಹಲಿಗೆ ಆಗಮಿಸುವಂತೆ ಹರೇಕಳ ಹಾಜಬ್ಬನವರಿಗೆ ಕೇಂದ್ರ ಗೃಹ ಸಚಿವಾಯದಿಂದ ಪತ್ರದ ಮುಖೇನ ಆಹ್ವಾನ ಬಂದಿದೆ.

ಪದ್ಮಶ್ರೀ ಪ್ರಶಸ್ತಿ ಪ್ರದಾನ ಕುರಿತು ಮಾಹಿತಿ ನೀಡಿದ ಹರೇಕಳ ಹಾಜಬ್ಬ

ಮಂಗಳೂರು ನಗರದಲ್ಲಿ ಕಿತ್ತಳೆ ಹಣ್ಣು ವ್ಯಾಪಾರ ಮಾಡುತ್ತಾ ಅದರಿಂದ ಬಂದ ಹಣವನ್ನು ಒಟ್ಟುಗೂಡಿಸಿ ಹರೇಕಳ ಹಾಜಬ್ಬನವರು ತಮ್ಮ ಊರಿನಲ್ಲಿ ಶಾಲೆ ತೆರೆದಿದ್ದರು. ಅಷ್ಟೇ ಅಲ್ಲದೆ ತಮ್ಮ ಊರಿನಲ್ಲಿ ಶಾಲೆ ಪ್ರಾರಂಭಿಸಲು ಸಾಕಷ್ಟು ಶ್ರಮಪಟ್ಟಿದ್ದರು. ಅವರ ಈ ಸಾಧನೆಯನ್ನು ಗುರುತಿಸಿ ಸರ್ಕಾರ 2020 ರ ಜನವರಿ 25 ರಂದು ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿತ್ತು.

ಆದರೆ, ಕಾರಣಾಂತರಗಳಿಂದ ಇಲ್ಲಿವರೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿರಲಿಲ್ಲ. ನ. 8 ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಹಾಜಬ್ಬನವರು ಶೀಘ್ರವೇ ದೆಹಲಿಗೆ ತೆರಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.