ETV Bharat / state

2 ವರ್ಷಗಳಿಂದ ಗಂಡಿ ವಾರ್ಡ್​ಗೆ ಅನುದಾನ ನೀಡದೆ ಅನ್ಯಾಯ: ದಿನಕರ್ ಉಳ್ಳಾಲ್ - Dakshina kannada news

ಗಂಡಿ ವಾರ್ಡ್ ಯಾವುದೇ ಅನುದಾನ ಮೀಸಲಿಡದಿರಲು ಕಾರಣವೇನು ಎಂದು ಪ್ರಶ್ನಿಸಿದ ದಿನಕರ್ ಉಳ್ಳಾಲ್ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

Dinesh Ullal
ದಿನೇಶ್ ಉಳ್ಳಾಲ್
author img

By

Published : Oct 16, 2020, 6:43 PM IST

Updated : Oct 16, 2020, 9:23 PM IST

ಮಂಗಳೂರು: ಉಳ್ಳಾಲ ನಗರ ಸಭೆಯ 18ನೇ ಗಂಡಿ ವಾರ್ಡ್​ನಲ್ಲಿ ಕಳೆದ 2 ವರ್ಷಗಳಿಂದ ಯಾವುದೇ ಕಾಮಗಾರಿ ನಡೆಸದೆ ಅನ್ಯಾಯವೆಸಗಲಾಗಿದೆ. ಈ 2 ವರ್ಷಗಳಲ್ಲಿ ಉಳ್ಳಾಲ ನಗರ ಸಭೆಗೆ 60 ಕೋಟಿ ರೂ.ನಷ್ಟು ಅನುದಾನ ಬಂದಿದ್ದರೂ ಗಂಡಿ ವಾರ್ಡ್​ಗೆ ಒಂದು ರೂ. ಕೂಡಾ ಮೀಸಲಿಡಲಾಗಿಲ್ಲ ಎಂದು ಉಳ್ಳಾಲ ನಗರಸಭೆ ಸದಸ್ಯ ದಿನಕರ್ ಉಳ್ಳಾಲ್ ಅಳಲು ತೋಡಿಕೊಂಡರು.

ನಗರದ ಪ್ರೆಸ್ ಕ್ಲಬ್​ನಲ್ಲಿ‌ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರು, ಪೌರಾಯುಕ್ತರು, ಇಂಜಿನಿಯರ್ ಕೂಡಲೇ ಸ್ಪಂದಿಸಬೇಕು‌. ಇಲ್ಲದಿದ್ದಲ್ಲಿ ಈ ಅನ್ಯಾಯಕ್ಕೆ ತಾವುಗಳೆ ಜವಾಬ್ದಾರರಾಗುತ್ತೀರಿ ಎಂದು ಹೇಳಿದರು.

2017ರಲ್ಲಿ‌ ವಾರ್ಡ್ ನ ಗಂಡಿ ಹಾಗೂ ಅಡ್ಡರಸ್ತೆಗಳ ಅಂದಾಜು ವೆಚ್ಚ 50 ಲಕ್ಷ ರೂ.ನಲ್ಲಿ ಅಭಿವೃದ್ಧಿ ಕಾಮಗಾರಿ 3ರಲ್ಲಿ ಅಳವಡಿಸಿ ಟೆಂಡರ್ ಕರೆದು ಶಿಲಾನ್ಯಾಸ ನೆರವೇರಿಸಲಾಗಿತ್ತು. ಕಾಮಗಾರಿ ಆರಂಭವಾಗಬೇಕು ಅನ್ನುವಾಗ ವಿಧಾನಸಭೆ ಚುನಾವಣೆ ನಡೆಯಿತು. ಆ ಬಳಿಕ ಈವರೆಗೆ ಆ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಶಾಸಕರು, ಜಿಲ್ಲಾಧಿಕಾರಿ, ಕಂದಾಯ ಹಾಗೂ ಪೌರಾಡಳಿತ ಸಚಿವರು, ದ.ಕ.ಯೋಜನಾ ನಿರ್ದೇಶಕರಿಗೆ, ಉಳ್ಳಾಲ ನಗರಸಭಾ ಪೌರಾಯುಕ್ತರಿಗೆ ಹಾಗೂ ಮುಖ್ಯಮಂತ್ರಿಯವರಿಗೂ ಮನವಿ ಸಲ್ಲಿಸಿದ್ದೆ. ಆದರೆ ಈವರೆಗೆ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು.

2 ವರ್ಷಗಳಿಂದ 18ನೇ ಗಂಡಿ ವಾರ್ಡ್ ಗೆ ಎಸ್ಎಫ್​ಸಿ ಅನುದಾನ, ಎಂಪಿ, ಎಂಎಲ್ಎ, ಎಂಎಲ್​ಸಿ ಫಂಡ್ ನಿಂದಾಗಲಿ, ಪಂಚಾಯತ್ ಅನುದಾನದಿಂದಾಗಲಿ ಹಣವನ್ನು ಮೀಸಲಿಡದೆ ತಾರತಮ್ಯ ಎಸಗಲಾಗಿದೆ.‌ ಇಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಿದೆ. ಗಂಡಿ ವಾರ್ಡ್ ಗುಡ್ಡಗಾಡು ಪ್ರದೇಶವಾಗಿದ್ದು ಕಳೆದ 20 ವರ್ಷಗಳಿಂದ ಬೀದಿ ದೀಪದ ವ್ಯವಸ್ಥೆಯನ್ನು ಸರಿಯಾಗಿ ಮಾಡಿಲ್ಲ. ಪುರಾತನ ಗಂಡಿ ಕೆರೆಯಲ್ಲಿ ಹೂಳು ತುಂಬಿದ್ದು, ಇದನ್ನು ಪುನರುತ್ಥಾನಗೊಳಿಸಿದ್ದಲ್ಲಿ ಸಾವಿರಾರು ಕುಟುಂಬಗಳಿಗೆ ನೀರಿನ ವ್ಯವಸ್ಥೆ ಆಗುತ್ತದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಪ್ರತಿಭಟನೆ ನಡೆಸಿದ್ದರೂ ಯಾರೂ ಕ್ರಮಕೈಗೊಳ್ಳುತ್ತಿಲ್ಲ‌. ಎಲ್ಲಾ ಕಡೆಗಳಲ್ಲೂ ಅಭಿವೃದ್ಧಿ ಕಾಮಗಾರಿ ನಡೆಸುತ್ತಿದ್ದರೂ, ಗಂಡಿ ವಾರ್ಡ್ ಗೆ ಮಾತ್ರ ಯಾವುದೇ ಅನುದಾನ ಮೀಸಲಿಡದಿರಲು ಕಾರಣವೇನು ಎಂದು ಪ್ರಶ್ನಿಸಿದ ದಿನೇಶ್ ಉಳ್ಳಾಲ್ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

Last Updated : Oct 16, 2020, 9:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.