ETV Bharat / state

ಮಂಗಳೂರಿನಲ್ಲಿ ಪಿಎಫ್ಐ, ಎಸ್​ಡಿಪಿಐ ಕಚೇರಿಗಳ ಮೇಲೆ ಎನ್​ಐಎ ದಾಳಿ: ಹಲವು ಪ್ರತಿಭಟನಾಕಾರರು ವಶಕ್ಕೆ

ಮಂಗಳೂರಿನ ಪಿಎಫ್ಐ, ಎಸ್​ಡಿಪಿಐ ಜಿಲ್ಲಾ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

nia-raid-on-pfi-sdpi-offices-in-mangaluru
ಮಂಗಳೂರಿನ ಪಿಎಫ್ಐ, ಎಸ್​ಡಿಪಿಐ ಕಚೇರಿ ಮೇಲೆ ಎನ್​ಐಎ ದಾಳಿ: ಗೋ ಬ್ಯಾಕ್ ಘೋಷಣೆ
author img

By

Published : Sep 22, 2022, 7:29 AM IST

Updated : Sep 22, 2022, 9:44 AM IST

ಮಂಗಳೂರು: ನಗರದಲ್ಲಿನ ಪಿಎಫ್ಐ, ಎಸ್​ಡಿಪಿಐ ಜಿಲ್ಲಾ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​​ಐಎ) ದಾಳಿ ನಡೆಸಿದೆ. ಇಂದು ಮುಂಜಾನೆ 3.30 ರ ಸುಮಾರಿಗೆ ದಾಳಿ ನಡೆಸಲಾಗಿದೆ, ಶೋಧ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಇರುವ ಕಚೇರಿಗಳು ಸೇರಿದಂತೆ ನಗರದ 8 ಕಡೆ ಈ ಸಂಘಟನೆಗಳ ಮುಖಂಡರ ಮನೆಗಳಲ್ಲಿ ಶೋಧ ನಡೆಯುತ್ತಿದೆ. ಪಿಎಫ್ಐ, ಎಸ್​ಡಿಪಿಐ ಕಚೇರಿ ಇರುವ ಈ ರಸ್ತೆಯ ಎರಡು ಬದಿಗಳಲ್ಲೂ ಸಿಆರ್​ಪಿಎಫ್ ಅಧಿಕಾರಿಗಳ ಬಂದೋಬಸ್ತ್​ ಇದೆ. ಎನ್​ಐಎ ಅಧಿಕಾರಿಗಳು ಕಚೇರಿಯೊಳಗೆ ಪರಿಶೀಲನೆ ಮುಂದುವರೆಸಿದ್ದಾರೆ.

ಮಂಗಳೂರಿನಲ್ಲಿ ಪಿಎಫ್ಐ, ಎಸ್​ಡಿಪಿಐ ಕಚೇರಿಗಳ ಮೇಲೆ ಎನ್​ಐಎ ದಾಳಿ

ಗೋ ಬ್ಯಾಕ್ ಘೋಷಣೆ: ಎನ್​​ಐಎ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಂತೆ ಪಿಎಫ್ಐ ಕಾರ್ಯಕರ್ತರು ಅವರ ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗಿದರು.

ಹಲವರು ಪೊಲೀಸ್ ವಶಕ್ಕೆ: ಪ್ರತಿಭಟನೆ ಸ್ಥಳಕ್ಕೆ ಬಂದ ನಗರ ಪೊಲೀಸ್ ಕಮೀಷನರ್ ಶಶಿಕುಮಾರ್, ಪ್ರತಿಭಟನಕಾರರಲ್ಲಿ ಸ್ಥಳದಿಂದ ತೆರಳುವಂತೆ ಸೂಚಿಸಿದರು. ಆದರೆ ಸೂಚನೆ ಮೀರಿ ಪ್ರತಿಭಟನೆ ಮುಂದುವರಿಸಿದ ಪಿಎಫ್ಐ, ಎಸ್ ಡಿ ಪಿ ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಹಲವು ಮಂದಿ ಸ್ಥಳದಿಂದ ತೆರಳಿದ್ದಾರೆ.

ಇದನ್ನೂ ಓದಿ: ಮಲೆನಾಡಿಗೆ ಉಗ್ರರ ನಂಟು, ಬೆಚ್ಚಿಬಿದ್ದ ಜನತೆ: ಬಂಧಿತರಿಂದ ಮಹತ್ವದ ಮಾಹಿತಿ

Last Updated : Sep 22, 2022, 9:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.