ಮಂಗಳೂರು: ಪಿಎಫ್ಐ, ಎಸ್ಡಿಪಿಐ ಕಚೇರಿ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದ್ರೆ ಈ ವೇಳೆ ಎನ್ಐಎ ಅಧಿಕಾರಿಗಳು ಎಸ್ಡಿಪಿಐ ಕಚೇರಿಯ ಬಾಗಿಲು ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಎಸ್ಡಿಪಿಐ ಮುಖಂಡ ಅಥಾವುಲ್ಲ ಜೋಕಟ್ಟೆ ಮಾತನಾಡಿ, ನಮ್ಮ ಕಚೇರಿ ಮೇಲೆ ದಾಳಿ ಮಾಡುವ ವೇಳೆ ಎನ್ಐಎ ಅಧಿಕಾರಿಗಳು ಅನಾಗರಿಕರಾಗಿ ವರ್ತಿಸಿದ್ದಾರೆ ಎಂದು ಆರೋಪ ಮಾಡಿದರು.
ಎನ್ಐಎ ಇನ್ಸ್ಪೆಕ್ಟರ್ ಷಣ್ಮುಗಂ ಅವರ ತಂಡ ದಾಳಿ ನಡೆಸಲು ಬಂದಾಗ ಕಚೇರಿಯ ಬಾಗಿಲುಗಳ ಗಾಜನ್ನು ಒಡೆದುಹಾಕಿದ್ದಾರೆ. ಕಚೇರಿಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಎನ್ಐಎ ಅಧಿಕಾರಿಗಳು ಸರ್ಚ್ ವಾರಂಟ್ ಇಲ್ಲದೆ ಎಸ್ಡಿಪಿಐ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ಬಗ್ಗೆ ನಾವು ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.
ಓದಿ: ಮಂಗಳೂರಿನಲ್ಲಿ ಎನ್ಐಎ ಪರಿಶೀಲನೆ ಮುಕ್ತಾಯ: ಮೂವರು ಪಿಎಫ್ಐ ಮುಖಂಡರು ವಶಕ್ಕೆ