ETV Bharat / state

ಸುಬ್ರಹ್ಮಣ್ಯ: ನವಜಾತ ಗಂಡು ಮಗುವನ್ನು ಬಾವಿಗೆಸೆದು ಕೊಂದ ತಾಯಿ - ಈಟಿವಿ ಭಾರತ ಕನ್ನಡ

ಹೆಣ್ಣು ಮಗುವಾಗಬೇಕೆಂಬ ಆಸೆ ಇದ್ದ ತಾಯಿಗೆ ಗಂಡು ಮಗು ಜನಿಸಿದ ಬೇಸರದಲ್ಲಿ ನವಜಾತ ಶಿಶುವನ್ನು ಬಾವಿಗೆಸೆದು ಕೊಲೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

Etv Bharat
ನವಜಾತ ಗಂಡು ಮಗುವನ್ನು ಬಾವಿಗೆ ಎಸೆದು ಕೊಂದ ತಾಯಿ
author img

By

Published : Oct 30, 2022, 9:22 AM IST

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ನವಜಾತ ಗಂಡು ಮಗುವನ್ನು ತಾಯಿಯೇ ಬಾವಿಗೆ ಎಸೆದು ಕೊಂದಿರುವ ಅಮಾನವೀಯ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೂತ್ಕುಂಜ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ಸುಳ್ಯ ತಾಲೂಕಿನ ಪಂಜ ಸಮೀಪದ ಕೂತ್ಕುಂಜದ ಬಸ್ತಿಕಾಡು ನಿವಾಸಿ ಪವಿತ್ರ ಮಗುವನ್ನು ಕೊಂದಿರುವ ಆರೋಪಿ. ಅಕ್ಟೋಬರ್​ 10ರಂದು ಈಕೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎಂದು ತಿಳಿದುಬಂದಿದೆ. ಶನಿವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ದುಷ್ಕೃತ್ಯ ಎಸಗಿದ್ದಾರೆ.

ಪವಿತ್ರಾ ಸುಮಾರು ನಾಲ್ಕು ವರ್ಷಗಳ ಹಿಂದೆ ಬೆಂಗಳೂರು ಮೂಲದ ಹರೀಶ್ ಎಂಬವರನ್ನು ವಿವಾಹವಾಗಿದ್ದರು. ಪತಿ ಜತೆ ಹೊಂದಾಣಿಕೆ ಇಲ್ಲದೇ ವಿಚ್ಛೇದನ ಪಡೆದಿದ್ದರು. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಣಿಕಂಠ ಎಂಬಾತನನ್ನು ಸುಮಾರು ಒಂದು ವರ್ಷದ ಹಿಂದೆ 2ನೇ ವಿವಾಹ ಆಗಿದ್ದರು. ಸುಮಾರು ಎರಡು ತಿಂಗಳು ಗಂಡನೊಂದಿಗಿದ್ದು, ಗರ್ಭಿಣಿಯಾದ ಈಕೆಗೆ ಅನಾರೋಗ್ಯವಿದ್ದ ಕಾರಣ ತವರು ಮನೆಗೆ ಬಂದಿದ್ದರು.

ಇವರಿಗೆ ಹೆಣ್ಣು ಮಗು ಆಗಬೇಕೆಂಬ ಬಯಕೆಯಿದ್ದು, ಇಷ್ಟ ನೆರವೇರದೇ ಇದ್ದುದರಿಂದ ಹುಟ್ಟಿದ ಗಂಡು ಶಿಶುವನ್ನು ಬಾವಿಗೆ ಎಸೆದು ಕೊಲೆ ಮಾಡಿದ್ದಾರೆ ಎಂದು ಸುಬ್ರಹ್ಮಣ್ಯ ಠಾಣೆಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು; ಪೋಷಕರಿಂದ ಮಗಳ ನೇತ್ರದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.