ETV Bharat / state

ಮಂಗಳೂರಿನಲ್ಲಿ ಭಯೋತ್ಪಾದನಾ ನಿಗ್ರಹ ತಂಡದಿಂದ ಅಣಕು ಕಾರ್ಯಾಚರಣೆ - mock opeartion of anti terrorism in manglore

ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಒಟ್ಟು 35 ಪೊಲೀಸ್ ಸಿಬ್ಬಂದಿಗೆ ಭಯೋತ್ಪಾದನಾ ನಿಗ್ರಹ ತರಬೇತಿ ನೀಡಲಾಗಿದ್ದು, 15 ಜನರ ಎರಡು ತಂಡ ಕರ್ತವ್ಯಕ್ಕೆ ನಿಯೋಜನೆಗೊಂಡಿದೆ.

anti-terrorism-squad-in-manglore
ಮಂಗಳೂರಿನಲ್ಲಿ ಭಯೋತ್ಪಾದನಾ ನಿಗ್ರಹ ತಂಡದಿಂದ ಅಣಕು ಕಾರ್ಯಾಚರಣೆ
author img

By

Published : Jun 16, 2022, 7:11 PM IST

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಭಯೋತ್ಪಾದನಾ ನಿಗ್ರಹ ತಂಡ ರಚಿಸಲಾಗಿದ್ದು, ಇಂದು ಉಗ್ರರನ್ನು ಮಟ್ಟ ಹಾಕುವ ಬಗ್ಗೆ ಅಣಕು ಕಾರ್ಯಾಚರಣೆ ಮಾಡಲಾಯಿತು.

ಮಂಗಳೂರಿನ 35 ಪೊಲೀಸ್ ಸಿಬ್ಬಂದಿಗೆ ಭಯೋತ್ಪಾದನಾ ನಿಗ್ರಹದ ತರಬೇತಿ ನೀಡಲಾಗಿದ್ದು, ತರಬೇತಿ ಮುಗಿಸಿದ ತಂಡವು ಮಂಗಳೂರಿನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದೆ. 15 ಸಿಬ್ಬಂದಿಗಳನ್ನು ಒಳಗೊಂಡ ಎರಡು ಭಯೋತ್ಪಾದನಾ ನಿಗ್ರಹ ತಂಡವನ್ನು ರಚಿಸಲಾಗಿದ್ದು, ಈ ಸಿಬ್ಬಂದಿಗಳ ರಜೆಯ ವೇಳೆ ಉಳಿದ ಐದು ಮಂದಿ ಕರ್ತವ್ಯದಲ್ಲಿರಲಿದ್ದಾರೆ.

ಕಟ್ಟಡದಲ್ಲಿ ಅವಿತಿದ್ದ ಮೂವರು ಉಗ್ರರನ್ನು ಜೀವಂತ ಹಿಡಿಯುವ ಅಣಕು ಕಾರ್ಯಾಚರಣೆ ಇದಾಗಿತ್ತು. ರಕ್ಷಣಾ ಸಿಬ್ಬಂದಿ ಕಟ್ಟಡದಲ್ಲಿರುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮೂವರು ಉಗ್ರರನ್ನು ಬಂಧಿಸಿದರು. ಇದರ ಜೊತೆಗೆ ಈ ತಂಡದಿಂದ ವಿವಿಧ ರೀತಿಯ ಯುದ್ಧ ಕೌಶಲ್ಯಗಳ ಪ್ರದರ್ಶನ ನಡೆಯಿತು.

ಜಲಫಿರಂಗಿಯ ಪ್ರದರ್ಶನ: ಕಮೀಷನರೇಟ್ ವ್ಯಾಪ್ತಿಗೆ ವರುಣ್ ಎಂಬ ವಾಟರ್ ಜೆಟ್ ವಾಹನ ಬಂದಿದ್ದು, ಇದರ ಪ್ರದರ್ಶನ ನಡೆಯಿತು. ಅಣಕು ಕಾರ್ಯಾಚರಣೆಯಲ್ಲಿ ಪ್ರತಿಭಟನಕಾರರನ್ನು ಜಲಫಿರಂಗಿ ಮೂಲಕ ಚದುರಿಸಲಾಯಿತು.

ಭಯೋತ್ಪಾದನಾ ನಿಗ್ರಹಕ್ಕೆ 30 ಜನರ ಎರಡು ತಂಡವನ್ನು ಸಿದ್ಧಪಡಿಸಲಾಗಿದೆ. ಇವರು ಎರಡು ತಿಂಗಳುಗಳ ಕಾಲ ತರಬೇತಿ ಪಡೆದಿದ್ದಾರೆ. ತರಬೇತಿಯಲ್ಲಿ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸಾಮರ್ಥ್ಯ ವಿವಿಧ ರೀತಿಯ ತರಬೇತಿಯನ್ನು ಪಡೆದಿದ್ದಾರೆ. ಯಾವುದೇ ಸಂದರ್ಭದಲ್ಲಿ ಭಯೋತ್ಪಾದನೆಯನ್ನು ಬೇಕಾದ ತರಬೇತಿ ಪಡೆದಿದ್ದಾರೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದರು.

ಇದನ್ನೂ ಓದಿ: ವಿಡಿಯೋ: ಪೊಲೀಸ್ ಅಧಿಕಾರಿಯ ಕಾಲರ್‌ಪಟ್ಟಿ​ ಹಿಡಿದು ಕಾಂಗ್ರೆಸ್‌ನ ರೇಣುಕಾ ಚೌಧರಿ ದರ್ಪ!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.