ETV Bharat / state

ಸೌದಿಯಲ್ಲಿರುವ ಅನಿವಾಸಿ ಭಾರತೀಯರೊಂದಿಗೆ ಶಾಸಕ ಖಾದರ್​ ಮಾತುಕತೆ - MLA Khader talks with non resident Indian,

ಅನಿವಾಸಿ ಭಾರತೀಯರೊಂದಿಗೆ ಶಾಸಕ ಖಾದರ್ ಜೂಮ್​ ಆ್ಯಪ್ ಮೂಲಕ ಮಾತುಕತೆ ನಡೆಸಿದರು.

non resident Indian, MLA Khader talks with non resident Indian, MLA Khader news, ಅನಿವಾಸಿ ಭಾರತೀಯರು, ಅನಿವಾಸಿ ಭಾರತೀಯರೊಂದಿಗೆ ಶಾಸಕ ಖಾದರ್​ ಮಾತುಕತೆ, ಶಾಸಕ ಯುಟಿ ಖಾದರ್​ ಸುದ್ದಿ,
ಅನಿವಾಸಿ ಭಾರತೀಯರೊಂದಿಗೆ ಶಾಸಕ ಖಾದರ್​ ಮಾತುಕತೆ
author img

By

Published : May 16, 2020, 11:08 AM IST

ಮಂಗಳೂರು: ಭಾರತಕ್ಕೆ ಬರಬೇಕೆಂದು ಆಶಿಸುತ್ತಿರುವ ಅನಿವಾಸಿ ಕನ್ನಡಿಗರೊಂದಿಗೆ ಶಾಸಕ ಯು.ಟಿ.ಖಾದರ್ ಜೂಮ್ ಆ್ಯಪ್ ಮೂಲಕ ಮಾತುಕತೆ ನಡೆಸಿದರು.

ಅನಿವಾಸಿ ಭಾರತೀಯರೊಂದಿಗೆ ಶಾಸಕ ಖಾದರ್​ ಮಾತುಕತೆ

ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಕನ್ನಡಿಗರೊಂದಿಗೆ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಯು.ಟಿ.ಖಾದರ್, ಅನಿವಾಸಿ ಕನ್ನಡಿಗರೊಂದಿಗೆ ಮಾತನಾಡಿರುವ ನಾನು ಕನ್ನಡಿಗರು ಸವಾಲುಗಳು ಮತ್ತು ಸಮಸ್ಯೆಗಳನ್ನು ಚರ್ಚಿಸಿದ್ದೇನೆ. ಈ ಬಗ್ಗೆ ಕೇಂದ್ರ ಸರ್ಕಾರದ ಮನವೊಲಿಸಲು ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದೇನೆ ಅಂತಾ ಹೇಳಿದ್ದಾರೆ.

ಅಲ್ಲದೆ ಈ ಟ್ವೀಟ್ ಮೂಲಕ ‘ವಂದೇ ಭಾರತ ಮಿಷನ್’ ಅಡಿಯಲ್ಲಿ ಸೌದಿಯಿಂದ ಕರ್ನಾಟಕಕ್ಕೆ ಹೆಚ್ಚಿನ ವಿಮಾನ ಹಾರಾಟ ಮಾಡಿಸಬೇಕೆಂದು ಪ್ರಧಾನಿ ಮೋದಿ, ನಾಗರಿಕ ವಿಮಾನಯಾನ ಸಚಿವರನ್ನು ಒತ್ತಾಯಿಸಿದ್ದೇನೆ ಎಂದಿದ್ದಾರೆ.

ಉದ್ಯೋಗ ಕಳೆದುಕೊಂಡಿರುವ ಕನ್ನಡಿಗ ವಲಸಿಗರಿಗೆ ವಿಶೇಷ ಪುನರ್ವಸತಿ ಪ್ಯಾಕೇಜ್ ಘೋಷಿಸಲು ಖಾದರ್​ ಮುಖ್ಯಮಂತ್ರಿಯನ್ನು ಟ್ವೀಟ್​ ಮೂಲಕ ಒತ್ತಾಯಿಸಿದ್ದಾರೆ. ಜೊತೆಗೆ ಕೇಂದ್ರ ಸಚಿವ ಸದಾನಂದಗೌಡ, ಉಪ ಮುಖ್ಯಮಂತ್ರಿ ಅಶ್ವತ್ಥ್​ ನಾರಾಯಣ, ಡಾ. ಜೈಶಂಕರ್ ಅವರನ್ನು ಉಲ್ಲೇಖಿಸಿದ್ದಾರೆ. ಈ ಟ್ವೀಟ್​ಗೆ ಉಪ ಮುಖ್ಯಮಂತ್ರಿ ಅಶ್ವತ್ಥ್​ ನಾರಾಯಣ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.