ETV Bharat / state

ಮಂಗಳೂರು ಗೋಲಿಬಾರ್ ಪ್ರಕರಣ: 800 ಪುಟಗಳ 8 ಚಾರ್ಜ್‌ಶೀಟ್ ಸಲ್ಲಿಕೆ

ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಚಾರ್ಜ್‌ ಶೀಟ್‌ಗಳನ್ನು ನ್ಯಾಯಾಲಯಕ್ಕೆ ಮೂವರು ತನಿಖಾಧಿಕಾರಿಗಳು ಸಲ್ಲಿಸಿದ್ದಾರೆ.

Mangalore Golibar case
ಮಂಗಳೂರು ಗೋಲಿಬಾರ್ ಪ್ರಕರಣ: 800 ಪುಟಗಳ 8 ಚಾರ್ಜ್‌ಶೀಟ್ ಸಲ್ಲಿಕೆ
author img

By

Published : Jun 18, 2020, 1:09 AM IST

ಮಂಗಳೂರು: 2019 ಡಿ.19ರಂದು ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ದೋಷಾರೋಪಣಾ ಪಟ್ಟಿಯನ್ನು ಮಾ. 17 ರಂದು ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಪ್ರಕರಣವನ್ನು ಮ್ಯಾಜಿಸ್ಟೀರಿಯಲ್, ಸಿಐಡಿ, ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಮತ್ತು ಸಿಐಡಿ ತನಿಖೆ ಇನ್ನು ಬಾಕಿಯಿದ್ದು, ಹೈಕೋರ್ಟ್ ನಿಗದಿಪಡಿಸಿದ ದಿನದೊಳಗೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಹೈಕೋರ್ಟ್​ ಸೂಚನೆ ಹಿನ್ನೆಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 800 ಪುಟಗಳ ದೋಷಾರೋಪ ಪಟ್ಟಿಯನ್ನು (ಮಧ್ಯಂತರ) ತನಿಖಾಧಿಕಾರಿಗಳು ಮಾ.17ರಂದೇ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಮಂಗಳೂರು ಉತ್ತರ (ಬಂದರ್) ಠಾಣೆಯಲ್ಲಿ ದಾಖಲಾದ 4 ಪ್ರಕರಣ, ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ದಾಖಲಾದ 3 ಪ್ರಕರಣ ಸೇರಿದಂತೆ ಸಿಐಡಿ ತಂಡವು ಕೂಡ ತನ್ನ ಚಾರ್ಜ್‌ಶೀಟ್‌ವೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಬಂದರ್ ಠಾಣಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ಸ್​ಪೆಕ್ಟರ್ ಗೋವಿಂದರಾಜು, ಪಾಂಡೇಶ್ವರ ಠಾಣಾ ಇನ್ಸ್​ಪೆಕ್ಟರ್ ಲೋಕೇಶ್ ತನಿಖಾಧಿಕಾರಿಯಾಗಿದ್ದರೆ, ಸಿಐಡಿ ಎಸ್ಪಿ ರಾಹುಲ್‌ಕುಮಾರ್ ಷಹಾಪುರ್‌ವಾಡ್ ಸಿಐಡಿ ತಂಡದ ತನಿಖಾಧಿಕಾರಿಯಾಗಿದ್ದರು. ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಒಟ್ಟು 464 ಮಂದಿಯ ಹೆಸರನ್ನು ಆರೋಪಿಗಳನ್ನಾಗಿ ಪ್ರಸ್ತಾಪಿಸಲಾಗಿದೆ.

ಬಂದರ್ ಠಾಣೆಯ ನಾಲ್ಕು ಪ್ರಕರಣಗಳ ಚಾರ್ಜ್‌ಶೀಟ್‌ನಲ್ಲಿ 313 ಮಂದಿ, ಪಾಂಡೇಶ್ವರ ಠಾಣೆಯ ಮೂರು ಪ್ರಕರಣಗಳಲ್ಲಿ 129 ಹಾಗೂ ಸಿಐಡಿ ತನಿಖಾಧಿಕಾರಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ 22 ಆರೋಪಿಗಳ ಹೆಸರಿದೆ.

ಸದ್ಯ ಮಧ್ಯಂತರ 8 ಜಾರ್ಜ್‌ಶೀಟ್ ಸಲ್ಲಿಕೆಯಾಗಿವೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಆಯುಕ್ತಾಲಯದ ವಿವಿಧ ಠಾಣೆಗಳಲ್ಲಿ ಒಟ್ಟು 32 ಎಫ್‌ಐಆರ್‌ಗಳು ದಾಖಲಾಗಿವೆ. ಈ ಪೈಕಿ ಕೇವಲ ಎಂಟು ಪ್ರಕರಣಗಳಲ್ಲಿ ಮಾತ್ರವೇ ತನಿಖಾಧಿಕಾರಿಗಳು ಚಾರ್ಜ್‌ಶೀಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇನ್ನು 24 ಪ್ರಕರಣಗಳ ಚಾರ್ಜ್ ಶೀಟ್ ಬಾಕಿ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.