ETV Bharat / state

ಮಂಗಳೂರು ದಸರಾಕ್ಕೆ ಅಂತಿಮ ತೆರೆಗೆ ಕ್ಷಣಗಣನೆ: ನಾಡದೇವತೆಯ ಮೆರವಣಿಗೆಗೆ ಸಕಲ ಸಿದ್ಧತೆ

ಶ್ರೀಕ್ಷೇತ್ರದ ಅಭಿವೃದ್ಧಿಯ ರೂವಾರಿ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಮಂಗಳೂರು ದಸರಾ ಮೆರವಣಿಗೆ ವೈಭವಯುತವಾಗಿ ಸಾಗಿ ಸಂಭ್ರಮದಿಂದ ಸಂಪನ್ನಗೊಳ್ಳಲಿದೆ.

ಮಂಗಳೂರು ದಸರಾ ಸುದ್ದಿ
author img

By

Published : Oct 8, 2019, 12:05 PM IST

ಮಂಗಳೂರು : ಮಂಗಳೂರು ದಸರಾ ಸಡಗರಕ್ಕೆ ಅಂತಿಮ ತೆರೆ ಬೀಳಲು ಕ್ಷಣಗಣನೆ ಆರಂಭವಾಗಿದೆ. ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ದಸರಾ ಮೆರವಣಿಗೆ ಸಾಗಲಿದೆ.

ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಸೆಪ್ಟೆಂಬರ್ 29ರ ಪರ್ಯಂತರ ಆರಂಭವಾಗಿದ್ದ ಮಂಗಳೂರು ದಸರಾ ಇಂದು ಶಾರದಾ, ನವದುರ್ಗೆಯರನ್ನು ಮೆರವಣಿಗೆ ಮೂಲಕ ನಗರದ ವಿವಿಧ ಕಡೆಗಳಲ್ಲಿ ಸಾಗಿ ಬಳಿಕ ದೇವಸ್ಥಾನದ ಕಲ್ಯಾಣಿಯಲ್ಲಿ ಜಲಸ್ತಂಭನ ಮಾಡುವ ಮೂಲಕ ಸಂಪನ್ನಗೊಳ್ಳಲಿದೆ.

ಹತ್ತು ದಿನಗಳ ಕಾಲ ವಿಶೇಷ, ವಿಭಿನ್ನ‌ ಕಾರ್ಯಕ್ರಮಗಳ ಮೂಲಕ ಎಲ್ಲರ ಗಮನ ಸೆಳೆದಿದ್ದ ಮಂಗಳೂರು ದಸರಾದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಶ್ರೀಕ್ಷೇತ್ರಕ್ಕೆ ಲಕ್ಷಕ್ಕಿಂತಲೂ ಮಿಗಿಲು ಜನರು ಆಗಮಿಸಿ ಜಗನ್ಮಾತೆಯ ಆಶಿರ್ವಾದ ಪಡೆದಿದ್ದರು. ಇಂದು ಶ್ರೀಕ್ಷೇತ್ರದ ಅಭಿವೃದ್ಧಿಯ ರೂವಾರಿ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಮಂಗಳೂರು ದಸರಾ ಮೆರವಣಿಗೆ ವೈಭವಯುತವಾಗಿ ಸಾಗಿ ಸಂಭ್ರಮದಿಂದ ಸಂಪನ್ನಗೊಳ್ಳಲಿದೆ.

ಮಂಗಳೂರು ದಸರಾಕ್ಕೆ ಅಂತಿಮ ತೆರೆ ಎಳೆಯಲು ಕ್ಷಣಗಣನೆ

ಈ ಬಾರಿಯ ಮೆರವಣಿಗೆಯ ಸ್ವರೂಪದಲ್ಲಿ ಬದಲಾವಣೆ ಮಾಡಲಾಗಿದ್ದು, ಇಲ್ಲಿಯವರೆಗೆ ದಸರಾ ಮೆರವಣಿಗೆ ಸಾಗುವಾಗ ಸ್ತಬ್ಧಚಿತ್ರಗಳು ಮೊದಲಿಗೆ ಸಾಗಿ ಬಳಿಕ ನವದುರ್ಗೆಯರ ಸಹಿತ ಶ್ರೀಮಹಾಗಣಪತಿ, ಶಾರದೆಯ ಮೂರ್ತಿ ಸಾಗುತ್ತಿತ್ತು. ಆದರೆ, ಈ ಬಾರಿ ಮೊದಲಿಗೆ ದೇವರ ಮೂರ್ತಿಗಳು ಸಾಗಿ ಬಳಿಕ ಸ್ತಬ್ಧಚಿತ್ರಗಳು ಸಾಗಲಿವೆ. ಹೀಗಾಗಿ ಮೆರವಣಿಗೆಯ ಅವಧಿ 4 ಗಂಟೆಗಳ ಕಾಲ ಕಡಿತಗೊಳ್ಳಲಿದೆ ಎಂದು ದೇವಾಲಯದ ಆಡಳಿತ ಸಮಿತಿ ಚಿಂತನೆ ನಡೆಸಿದೆ.

ಒಟ್ಟಿನಲ್ಲಿ ಇಂದು ಹತ್ತಾರು ಮೈಲು ಮೆರವಣಿಯ ಮೂಲಕ‌ ಸಾಗುವ ನವದುರ್ಗೆಯರ, ಶ್ರೀಶಾರದಾ, ಮಹಾಗಣಪತಿ ದೇವರ ಮೆರವಣಿಗೆಗೆ ನೂರಕ್ಕಿಂತಲೂ ಮಿಕ್ಕಿ ಹುಲಿವೇಷ, ಪೌರಾಣಿಕ, ಐತಿಹಾಸಿಕ ಸ್ತಬ್ಧಚಿತ್ರಗಳು ಮೆರುಗು‌ ನೀಡಲಿವೆ. ಈ ಸಂದರ್ಭ ಸಾವಿರಾರು ಮಂದಿ ನೋಡುಗರು ಮೆರವಣಿಗೆಗೆ ಸಾಕ್ಷಿಯಾಗಲಿದ್ದಾರೆ.

Intro:ಮಂಗಳೂರು: ವಿಶ್ವವಿಖ್ಯಾತ ಮಂಗಳೂರು ದಸರಾ ಸಡಗರಕ್ಕೆ ಅಂತಿಮ ತೆರೆ ಬೀಳಲು ಕ್ಷಣಗಣನೆ ಆರಂಭವಾಗಿದೆ. ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಸೆಪ್ಟೆಂಬರ್ 29ರ ಪರ್ಯಂತರ ಆರಂಭವಾಗಿದ್ದ ಮಂಗಳೂರು ದಸರಾ ಇಂದು ಶಾರದಾ, ನವದುರ್ಗೆಯರನ್ನು ಮೆರವಣಿಗೆ ಮೂಲಕ ನಗರದ ವಿವಿಧ ಕಡೆಗಳಲ್ಲಿ ಸಾಗಿ ಬಳಿಕ ದೇವಸ್ಥಾನದ ಕಲ್ಯಾಣಿಯಲ್ಲಿ ಜಲಸ್ತಂಭನ ಮಾಡುವ ಮೂಲಕ ಸಂಪನ್ನಗೊಳ್ಳಲಿದೆ.

ಹತ್ತು ದಿನಗಳ ಕಾಲ ವಿಶೇಷ, ವಿಭಿನ್ನ‌ ಕಾರ್ಯಕ್ರಮಗಳ ಮೂಲಕ ಎಲ್ಲರ ಗಮನ ಸೆಳೆದಿದ್ದ ಮಂಗಳೂರು ದಸರಾದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಶ್ರೀಕ್ಷೇತ್ರ ಕುದ್ರೋಳಿಗೆ ಲಕ್ಷಕ್ಕಿಂತಲೂ ಮಿಗಿಲು ಜನರು ಆಗಮಿಸಿ ಸಂಭ್ರಮ ಪಟ್ಟಿದ್ದರು. ಇಂದು ಶ್ರೀಕ್ಷೇತ್ರದ ಅಭಿವೃದ್ಧಿಯ ರೂವಾರಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಮಂಗಳೂರು ದಸರಾ ಮೆರವಣಿಗೆ ವೈಭವಯುತವಾಗಿ ಸಾಗಿ ಸಂಭ್ರಮದಿಂದ ಸಂಪನ್ನಗೊಳ್ಳಲಿದೆ.

Body:ಈ ಬಾರಿಯ ಮೆರವಣಿಗೆಯ ಸ್ವರೂಪದಲ್ಲಿ ಬದಲಾವಣೆ ಮಾಡಲಾಗಿದ್ದು, ಇಲ್ಲಿಯವರೆಗೆ ದಸರಾ ಮೆರವಣಿಗೆ ಸಾಗುವಾಗ ಸ್ತಬ್ಧಚಿತ್ರಗಳು ಮೊದಲಿಗೆ ಸಾಗಿ ಬಳಿಕ ನವದುರ್ಗೆಯರ ಸಹಿತ ಶ್ರೀಮಹಾಗಣಪತಿ, ಶಾರದೆಯ ಮೂರ್ತಿ ಸಾಗುತ್ತಿತ್ತು. ಆದರೆ ಈ ಬಾರಿ ದೇವರ ಮೂರ್ತಿಗಳು ಮೊದಲಿಗೆ ಸಾಗಿ ಬಳಿಕ ಸ್ತಬ್ಧಚಿತ್ರಗಳು ಸಾಗಲಿವೆ. ಹೀಗಾಗಿ ಮೆರವಣಿಗೆಯ ಅವಧಿ 4 ಗಂಟೆಗಳ ಕಾಲ ಕಡಿತಗೊಳ್ಳಲಿದೆ ಎಂದು ದೇವಾಲಯದ ಆಡಳಿತ ಸಮಿತಿ ಚಿಂತನೆ ನಡೆಸಿದೆ.

ಒಟ್ಟಿನಲ್ಲಿ ಇಂದು ಹತ್ತಾರು ಮೈಲು ಮೆರವಣಿಯ ಮೂಲಕ‌ ಸಾಗುವ ನವದುರ್ಗೆಯರ, ಶ್ರೀಶಾರದಾ, ಮಹಾಗಣಪತಿ ದೇವರ ಮೆರವಣಿಗೆಗೆ ನೂರಕ್ಕಿಂತಲೂ ಮಿಕ್ಕಿ ಹುಲಿವೇಷ, ಪೌರಾಣಿಕ, ಐತಿಹಾಸಿಕ ಸ್ತಬ್ಧಚಿತ್ರಗಳು ಮೆರುಗು‌ನೀಡಲಿವೆ. ಈ ಸಂದರ್ಭ ಸಾವಿರಾರು ಮಂದಿ ನೋಡುಗರು ಮೆರವಣಿಗೆಗೆ ಸಾಕ್ಷಿಯಾಗಲಿದ್ದಾರೆ.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.