ಮಂಗಳೂರು: ಐಷಾರಾಮಿ ಕಾರು ಮಾರಾಟ ಪ್ರಕರಣದ ಆರೋಪಿಗಳಾದ ಸಿಸಿಬಿ ಪೊಲೀಸರ ವಿರುದ್ಧದ ಸಿಐಡಿ ತನಿಖೆ ಈಗಾಗಲೇ ಆರಂಭಗೊಂಡಿದ್ದು, ಮಂಗಳವಾರ ನಗರಕ್ಕೆ ಆಗಮಿಸಿರುವ ಸಿಐಡಿ ಇನ್ ಸ್ಪೆಕ್ಟರ್ ಚಂದ್ರಪ್ಪ ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಅಮಾನತಾಗಿರುವ ನಾಲ್ವರು ಸಿಸಿಬಿ ಪೊಲೀಸ್ ಅಧಿಕಾರಿಗಳಾದ ಕಬ್ಬಾಳ್ ರಾಜ್, ರಾಮಕೃಷ್ಣ, ಸಿಸಿಬಿ ಸಿಬ್ಬಂದಿ ಆಶಿತ್ ಡಿಸೋಜ ಹಾಗೂ ರಾಜಾ ಅವರ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೆ ಹಿಂದಿನ ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್, ಎಎಸ್ಐ ಹರೀಶ್ ಹಾಗೂ ಎಲ್ಲಾ ಸಿಬ್ಬಂದಿ ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ : ಕೇರಳ, ಮಹಾರಾಷ್ಟದಿಂದ ಬರುವ ಚಾಲಕರಿಗೆ ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯ.!
ಹಣಕಾಸಿನ ವಿಚಾರ ಹಾಗೂ ಕಾರು ಮಾರಾಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಿರುದ್ಧ ಈಗಾಗಲೇ ಸಿಐಡಿಗೆ 24 ದೂರುಗಳು ಬಂದಿದ್ದು, ಅವುಗಳಲ್ಲಿ 8 ಪ್ರಕರಣಗಳು ಕಾರು ಮಾರಾಟಕ್ಕೆ ಸಂಬಂಧಿಸಿವೆ.
ಉಳಿದಂತೆ ಬೆಟ್ಟಿಂಗ್, ಹವಾಲಾ, ಹಣಕಾಸಿನ ವಹಿವಾಟುಗಳ ದೂರುಗಳಿವೆ. ದಾಖಲೆಗಳ ಸಹಿತ ದೂರುದಾರರು ಸಿಐಡಿಗೆ ದೂರು ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.