ಮಂಗಳೂರು : ರಕ್ತದಾನ ಮಾಡುವುದೆಂದರೆ ಕೆಲವರಿಗೆ ಅಂಜಿಕೆ, ಇನ್ನು ಕೆಲವರಿಗೆ ಉತ್ಸಾಹ. ಇಂತಹ ಉತ್ಸಾಹಿಗಳನ್ನು ಸೇರಿಸಿಕೊಂಡು ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಗ್ರೂಪ್ ರಚಿಸಿ, ರಕ್ತದಾನ ಮಾಡುವ ಕಾರ್ಯವನ್ನು ಬ್ಲಡ್ ಡೋನರ್ಸ್ ಮಂಗಳೂರು ಕಳೆದ ಹಲವು ವರ್ಷಗಳಿಂದ ಮಾಡುತ್ತಿದೆ.
ಈ ಸಂಘಟನೆ 60 ವಾಟ್ಸ್‌ಆ್ಯಪ್ ಗ್ರೂಪ್ಗಳನ್ನು ಮಾಡಿದ್ದು, ಈ ಗ್ರೂಪ್ಗಳಲ್ಲಿ ಆಯಾಯ ಪ್ರದೇಶದ ರಕ್ತದಾನಿಗಳನ್ನು ಸೇರಿಸಿಕೊಳ್ಳಲಾಗಿದೆ. ಪ್ರತಿಯೊಂದು ಗ್ರೂಪ್ನ ಅಡ್ಮಿನ್ಗಳನ್ನು ಸೇರಿಸಿಕೊಂಡು 24/7 ಎನ್ನುವ ಇನ್ನೊಂದು ಗ್ರೂಪ್ ಮಾಡಲಾಗಿದೆ. ಈ ವಾಟ್ಸ್‌ಆ್ಯಪ್ ಗ್ರೂಪ್ಗಳಲ್ಲಿ ಬರುವ ರಕ್ತದ ಬೇಡಿಕೆಯನ್ನು ಅಡ್ಮಿನ್ ಗ್ರೂಪ್ನಲ್ಲಿ ಹಾಕಿ ರಕ್ತದ ವ್ಯವಸ್ಥೆ ಮಾಡುತ್ತಾರೆ.
ಈ ಸಂಘಟನೆಯ ಮೂಲಕ ಅಲ್ಲಲ್ಲಿ ರಕ್ತದಾನ ಶಿಬಿರ ಆಯೋಜಿಸಿ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ. ಜೊತೆಗೆ ತುರ್ತಾಗಿ ಯಾರಿಗಾದರೂ ರಕ್ತ ಬೇಕಿದ್ದರೆ, ಶೀಘ್ರ ವ್ಯವಸ್ಥೆ ಮಾಡುವ ಮೂಲಕ ಈ ತಂಡ ಮಾದರಿಯಾಗಿದೆ. ಗಲ್ಫ್ ದೇಶಗಳಲ್ಲಿ ಕೂಡ ಸಂಘಟನೆಯ ತಂಡ ಸಕ್ರೀಯವಾಗಿದೆ.