ETV Bharat / state

ಜಲಪಾತ ವೀಕ್ಷಣೆ ವೇಳೆ ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿದ ವಿದ್ಯಾರ್ಥಿ ಪತ್ತೆಗೆ ಶೋಧ ಕಾರ್ಯ ಚುರುಕು - Belthangadi landslide

ಬೆಳ್ತಂಗಡಿ ಜಲಪಾತ ವೀಕ್ಷಣೆ ವೇಳೆ ಗುಡ್ಡ ಜರಿದು ಮಣ್ಣಿನಡಿಯಲ್ಲಿ ಸಿಲುಕಿಕೊಂಡ ವಿದ್ಯಾರ್ಥಿಗಾಗಿ ಶೋಧಕಾರ್ಯ ಚುರುಕುಗೊಂಡಿದೆ.

Landslide
ಗುಡ್ಡ ಕುಸಿತ
author img

By

Published : Jan 26, 2021, 5:51 PM IST

ಬೆಳ್ತಂಗಡಿ: ತಾಲೂಕಿನ ಎಳನೀರು ಸಮೀಪದ ಬಂಗಾರ್ ಪಲ್ಕೆ ಎಂಬಲ್ಲಿ ಕಾಡಿನ ಮಧ್ಯೆ ಇರುವ ಜಲಪಾತ ವೀಕ್ಷಿಸಲು ತೆರಳಿದ್ದ ನಾಲ್ಕು ಮಂದಿಯ ಮೇಲೆ ಗುಡ್ಡ ಜರಿದು ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿ ಮಣ್ಣಿನಡಿ ಸಿಲುಕಿದ್ದು, ಉಳಿದ ಮೂವರು ಪಾರಾಗಿದ್ದಾರೆ.

ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿದ ವಿದ್ಯಾರ್ಥಿ ಪತ್ತೆಗೆ ಕಾರ್ಯಾಚರಣೆ

ಘಟನೆಯಲ್ಲಿ ವಿದ್ಯಾರ್ಥಿ ಬದುಕಿರುವುದು ಸಂಶಯವಾಗಿದೆ. ಈಗಾಗಲೇ ಮಣ್ಣಿನಡಿ ಸಿಲುಕಿದ ವಿದ್ಯಾರ್ಥಿಯನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಯುತ್ತಿದೆ. ಬೃಹತ್ ಗಾತ್ರದ ಬಂಡೆಗಳು ಮರಗಳು ಕುಸಿದು ಬಿದ್ದಿರುವುದರಿಂದ ಆ ಜಾಗಕ್ಕೆ ಯಾವುದೇ ರೀತಿಯ ವಾಹನ ಹೋಗಲಾಗುತ್ತಿಲ್ಲ. ಹೀಗಾಗಿ ಕಾರ್ಯಾಚರಣೆಗೆ ತೊಡಕುಂಟಾಗಿದೆ.

ಅಗ್ನಿಶಾಮಕ ದಳ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಎನ್​ಡಿಆರ್​ಎಫ್​ ತಂಡ ಮತ್ತು ಸ್ಥಳೀಯ ಯುವಕರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ಥಳದಲ್ಲಿ ಇದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.