ETV Bharat / state

ರಜಾ ದಿನಗಳಲ್ಲಿ ಕುಕ್ಕೆಯಲ್ಲಿ ಹೆಚ್ಚುತ್ತಿರುವ ಜನಸಂದಣಿ, ರಸ್ತೆಯಲ್ಲೇ ಮಲಗುವ ಭಕ್ತರು: ದೇಗುಲದಿಂದ ಪ್ರಕಟಣೆ ಬಿಡುಗಡೆ

ತಂಗಲು ಸಮಸ್ಯೆ ಆಗುತ್ತಿರುವುದರ ಬಗ್ಗೆ ತಿಳಿದ ದೇವಾಲಯ ಪ್ರಕಟಣೆ ಹೊರಡಿಸಿದೆ. ಶ್ರೀ ದೇವಳದ ಆದಿಸುಬ್ರಹ್ಮಣ್ಯ ದೇವಾಲಯದ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಮತ್ತು ಷಣ್ಮುಖ ಪ್ರಸಾದ ಭೋಜನಶಾಲೆಯ ಮೇಲ್ಮಹಡಿಯಲ್ಲಿ ಭಕ್ತರಿಗೆ ತಂಗಲು ವಸತಿ ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದೆ.

kukke subramanya temple provided safe place for the devotees to sleep safely at night
ದೇಗುಲದಿಂದ ಪ್ರಕಟಣೆ ಬಿಡುಗಡೆ
author img

By

Published : May 4, 2022, 10:46 PM IST

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಕುಕ್ಕೆ ಸುಬ್ರಮಣ್ಯದಲ್ಲಿ ಇತ್ತೀಚಿಗೆ ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳಿಗೂ ರಜೆ ಇರೋದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗೆ ರಜಾ ದಿನಗಳಲ್ಲಿ ಕುಕ್ಕೆಯಲ್ಲಿ ರಾತ್ರಿ ವಸತಿಗೆ ರೂಮ್ ಸಿಗದೇ ರಸ್ತೆಯಲ್ಲೇ ಭಕ್ತರು ಮಲಗುವ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ದೇವಸ್ಥಾನದಿಂದ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವಸ್ಥಾನದ ಹಾಗೂ ಖಾಸಗಿಯಾಗಿ ಹಲವು ವಸತಿ ಗೃಹಗಳಿವೆ. ದೇವಸ್ಥಾನ ಸಭಾಂಗಣ, ಹಳೆ ಪ್ರಾಥಮಿಕ ಶಾಲಾ ಕಟ್ಟಡಗಳೂ ಇವೆ. ಆದರೂ ಇತ್ತೀಚಿನ ದಿನಗಳಲ್ಲಿ ಭಕ್ತರು ಮಹಿಳೆಯರು ಮಕ್ಕಳ ಸಹಿತ ರಥ ಬೀದಿಯಲ್ಲಿ ಹಾಗೂ ಧರ್ಮಸಮ್ಮೇಳನ ಮಂಟಪದಲ್ಲಿ ರಾತ್ರಿ ವೇಳೆಯಲ್ಲಿ ಮಲಗುತ್ತಿರುವುದು ಕಂಡು ಬರುತ್ತಿದೆ.

kukke secular
ಪ್ರಕಟಣೆ ಹೀಗಿದೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಾದಿಗಳಿಗೆ ಮಲಗಲು ಸೂಕ್ತ ವ್ಯವಸ್ಥೆಗಳಿದ್ದರೂ ಭಕ್ತರು ರಸ್ತೆಯಲ್ಲಿ ಮಲಗಬೇಕಾಗಿ ಬಂದ ಸ್ಥಿತಿ ಬಗ್ಗೆ ಸಾರ್ವಜನಿಕರ ಆಕ್ರೋಶ ಒಂದು ಕಡೆಯಾದರೆ, ಇಲ್ಲಿ ವಸತಿ ವ್ಯವಸ್ಥೆಗಳು ಇವೆ. ಆದರೆ ಸ್ಪಷ್ಟವಾದ ಮಾಹಿತಿ ಕೊರತೆಯಿಂದ ಅದನ್ನು ಬಳಸಲು ಭಕ್ತರು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಅಭಿಪ್ರಾಯ ಇನ್ನೊಂದು ಕಡೆ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ವತಿಯಿಂದ ಭಕ್ತರಿಗಾಗಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಪ್ರಕಟಣೆ ಹೀಗಿದೆ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ವಸತಿಗೃಹಗಳಲ್ಲಿ ಕೊಠಡಿಗಳನ್ನು ನೀಡಲಾಗುತ್ತಿದೆ. ಆದರೆ ವಸತಿಗೃಹಗಳಲ್ಲಿ ಕೊಠಡಿಗಳು ಭರ್ತಿಯಾದ ನಂತರದ ಸಂದರ್ಭಗಳಲ್ಲಿ ಶ್ರೀ ದೇವಳದ ಆದಿಸುಬ್ರಹ್ಮಣ್ಯ ದೇವಾಲಯದ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಮತ್ತು ಷಣ್ಮುಖ ಪ್ರಸಾದ ಭೋಜನ ಶಾಲೆಯ ಮೇಲ್ಮಹಡಿಯಲ್ಲಿ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗಿದೆ.

ಆದರೂ ಕೂಡಾ ರಾತ್ರಿ ಸುಮಾರು ಗಂಟೆ 1.00 ರ ನಂತರದಲ್ಲಿ ಆಗಮಿಸುವಂತಹ ಕೆಲವು ಮಂದಿ ಭಕ್ತಾದಿಗಳು ರಥಬೀದಿಗಳಲ್ಲಿ ತಂಗಿರುವುದು ಕಂಡುಬರುತ್ತದೆ. ಅಲ್ಲದೇ ನಿರಂತರ ಸರ್ಕಾರಿ ರಜೆಗಳು ಇದ್ದುದರಿಂದ, ಅಕ್ಷಯ ತೃತೀಯ ಮತ್ತು ಕೆಲವು ವಿಶೇಷ ದಿನಗಳಲ್ಲಿ ಭಕ್ತಾದಿಗಳು ಅತ್ಯಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿರುತ್ತಾರೆ.

ಶ್ರೀ ಕ್ಷೇತ್ರಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಲ್ಲಿ ಈ ಮೂಲಕ ಮನವಿ ಮಾಡುವುದೇನೆಂದರೆ, ಶ್ರೀ ದೇವಳದ ವಸತಿಗೃಹಗಳಲ್ಲಿ ರಾತ್ರಿ ತಂಗಲು ಕೊಠಡಿಗಳು ಲಭ್ಯವಾಗದೇ ಇರುವ ಸಂದರ್ಭಗಳಲ್ಲಿ ಶ್ರೀ ದೇವಳದ ಆದಿಸುಬ್ರಹ್ಮಣ್ಯ ದೇವಾಲಯದ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಮತ್ತು ಷಣ್ಮುಖ ಪ್ರಸಾದ ಭೋಜನಶಾಲೆಯ ಮೇಲ್ಮಹಡಿಯಲ್ಲಿ ಭಕ್ತರಿಗೆ ತಂಗಲು ವಸತಿ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಇದರ ಉಪಯೋಗ ಪಡೆದುಕೊಳ್ಳಬೇಕಾಗಿ ಮನವಿ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ:ಆಶ್ಚರ್ಯವಾದ್ರೂ ಇದು ನಿಜ.. ಈ ಶಾಲೆಯ ಪ್ರತಿ ವಿದ್ಯಾರ್ಥಿ 'ಕೈ ಬರಹ' ಒಂದೇ ರೀತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.