ETV Bharat / state

ವಿಟ್ಲದಲ್ಲಿ ಕೋವಿಡ್, ಡೆಂಘಿ ಜಾಗೃತಿ: ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ಮಟ್ಟದ ಸಭೆ

ಕೋವಿಡ್-19 ಜೊತೆ ಡೆಂಘಿ, ಮಲೇರಿಯಾ ರೋಗಗಳ ಕುರಿತು ವಿಟ್ಲ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಬೇಕು. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಅಧಿಕಾರಿಗಳಿಗೆ ಸೂಚಿಸಿದರು.

author img

By

Published : May 19, 2020, 5:39 PM IST

Officers level meeting led by legislator
ಶಾಸಕ ನೇತೃತ್ವದಲ್ಲಿ ಅಧಿಕಾರಿಗಳ ಮಟ್ಟದ ಸಭೆ

ಬಂಟ್ವಾಳ: ಕೋವಿಡ್​​​​-19 ಹಿನ್ನೆಲೆಯಲ್ಲಿ ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ​ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ತಾಲೂಕು ವ್ಯಾಪ್ತಿಯ ಹಿರಿಯ ಅಧಿಕಾರಿಗಳ ಸಭೆ ಕರೆದು ಸಮಾಲೋಚನೆ ನಡೆಸಿದರು.

ಹೊರ ರಾಜ್ಯದಿಂದ ಮತ್ತು ದೇಶದಿಂದ ಆಗಮಿಸುವವರಿಗೆ ಸೂಕ್ತ ಕ್ವಾರಂಟೈನ್​​ ವ್ಯವಸ್ಥೆ ಮಾಡಬೇಕು. ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮತ್ತು ಕೊರೊನಾದ ಜೊತೆಯಲ್ಲಿ ಇದೀಗ ಡೆಂಘಿ ಮತ್ತು ಮಲೇರಿಯಾ ರೋಗದ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಎಸ್.ಆರ್. ತಹಶೀಲ್ದಾರ್ ರಶ್ಮಿ, ತಾ.ಪಂ. ಇಒ ರಾಜಣ್ಣ, ವಿಟ್ಲ ಪ.ಪಂ. ಮುಖ್ಯಾಧಿಕಾರಿ ಮಾಲಿನಿ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ವೇದಾವತಿ ಬಲ್ಲಾಳ್ ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರು ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.