ಮಂಗಳೂರು: ಮೂರ್ಛೆ ಕಾಯಿಲೆಯಿಂದ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದ ವ್ಯಕ್ತಿಯೋರ್ವನಿಗೆ ಕೊಣಾಜೆ ಪೊಲೀಸ್ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.
![Konaja police first treated a man who had fallen into a fainting mood](https://etvbharatimages.akamaized.net/etvbharat/prod-images/kn-mng-ullal-02-konajepolice-photo-kac10026_17072020205454_1707f_1594999494_756.jpg)
ಬೆಲ್ಮ ಗ್ರಾಮದ ಕುಕ್ಕುದಕಟ್ಟೆ ಎಂಬಲ್ಲಿ ತಮಿಳುನಾಡು ಮೂಲದ ಜೋಸೆಫ್ ಎಂಬುವವರು ಮೂರ್ಛೆ ಕಾಯಿಲೆಯಿಂದ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದರು. ಆದರೆ, ಕೊರೊನಾ ಭಯದಿಂದ ಯಾರೊಬ್ಬರೂ ಜೋಸೆಫ್ ನೆರವಿಗೆ ಧಾವಿಸಿರಲಿಲ್ಲ. ಕರ್ತವ್ಯದಲ್ಲಿದ್ದ ಕೊಣಾಜೆ ಪೊಲೀಸ್ ಠಾಣೆಯ ಜಗನ್ನಾಥ್ ಮತ್ತು ಲಕ್ಷ್ಮಣ ಅವರು, ವ್ಯಕ್ತಿಯನ್ನು ಕಂಡು ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ್ದು, ಜೋಸೆಫ್ ಚೇತರಿಸಿಕೊಂಡಿದ್ದಾರೆ.
![Konaja police first treated a man who had fallen into a fainting mood](https://etvbharatimages.akamaized.net/etvbharat/prod-images/kn-mng-ullal-02-konajepolice-photo-kac10026_17072020205454_1707f_1594999494_1057.jpg)
ಕೊರೊನಾ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿಯೇ ಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಮಯದಲ್ಲಿ ಜೋಸೆಫ್ ಅವರ ಜೀವ ಉಳಿಸಿದ ಕೊಣಾಜೆ ಪೊಲೀಸ್ ಸಿಬ್ಬಂದಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.