ETV Bharat / state

ಕೆಎಸ್​ಆರ್​ಟಿಸಿ ಬಸ್​ಗಳೆರೆಡು ಡಿಕ್ಕಿ... ಪ್ರಯಾಣಿಕರು ಬಚಾವ್​!

​ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಕೆಎಸ್​ಆರ್​ಟಿಸಿ ಬಸ್​ ತಂಗುದಾಣದಲ್ಲಿ 2 ಬಸ್​ಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಯಾವುದೇ ಅಹಿತಕರ ಘಟನೆ ಜರುಗಿಲ್ಲ.

author img

By

Published : Nov 5, 2019, 5:42 AM IST

ಬಸ್​

ಕಡಬ : ನಗರದ ಕೆಎಸ್​ಆರ್​ಟಿಸಿ ಬಸ್​ ತಂಗುದಾಣದಲ್ಲಿ ಏಕಾಏಕಿ ಎರಡು ಕೆಎಸ್‌ಆರ್‌ಟಿಸಿ ಬಸ್ಸುಗಳು ಡಿಕ್ಕಿಯಾಗಿದ್ದು, ಅದೃಷ್ಟವಶಾತ್​ ಪ್ರಯಾಣಿಕರಿಗೆ ಯಾವುದೇ ತೊಂದರೆ ಸಂಭವಿಸಿಲ್ಲ.

ಸುಬ್ರಹ್ಮಣ್ಯ, ಕಡಬ ಮಾರ್ಗವಾಗಿ ಮಂಗಳೂರಿಗೆ ಹೋಗುವ ಕೆಎ-ಎಫ್ ೩೦೦೫ ವೇಗದೂತ ಬಸ್​, ಕಡಬ ಬಸ್​ ತಂಗುದಾಣದ ಎದುರು ನಿಲ್ಲಿಸಿದಂತೆ ಕಡಬ -ಉಪ್ಪಿನಂಗಡಿ ಕೆಎ೦೯-ಎಫ್ ೪೬೦೫ ಕೆಎಸ್‌ಆರ್‌ಟಿಸಿ ಬಸ್​ ನಿಲ್ದಾಣಕ್ಕೆ ಬಂದು ಏಕಾಏಕಿ ಮಂಗಳೂರು ಬಸ್ಸಿಗೆ ಹಿಂದಿನಿಂದ ಡಿಕ್ಕಿಯಾಯಿತು. ಪ್ರಯಾಣಿಕರಿಗೆ ಡಿಕ್ಕಿಯಾದಾಗ ಭಯಾನಕ ಶಬ್ಧ ಕೇಳಿಸಿದ್ದರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಸ್ಥಳದಲ್ಲಿದ್ದ ಕಡಬ ಪೊಲೀಸ್ ಠಾಣೆಯ ಗೃಹರಕ್ಷಕ ದಳದ ಸಿಬ್ಬಂದಿಯಾದ ರೂಪ ಮತ್ತು ಪ್ರಮೀತ ಕೂಡಲೇ ಶಾಲೆ ಬಿಟ್ಟ ಸಮಯವಾದುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಚದುರಿಸಿ ಯಾವುದೇ ಅನಾಹುತ ನಡೆಯದಂತೆ ಸೂಕ್ತ ಎಚ್ಚರಿಕೆ ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Intro:Location:- ಕಡಬ

ಕಡಬದ ಬಸ್ಸು ನಿಲ್ದಾಣದಲ್ಲೇ ಬಸ್ಸುಗಳೆರಡು ಡಿಕ್ಕಿಯಾಗಿತ್ತು. ಬಸ್ಸಲ್ಲಿ ಕೂತವರಿಗೆ ಏನೋ ನಡೆದ ಅನುಭವ, ಆದರೆ ಏನು ನಡೆಯಿತು ಎಂಬುದು ತಿಳಿಯದೇ ಒಂದು ಕ್ಷಣ ಪ್ರಯಾಣಿಕರು ದಂಗಾದರು.
ಪುಣ್ಯಕ್ಕೆ ಈ ಬಸ್ಸುಗಳ ಮಧ್ಯೆ ಯಾರು ಸಿಲುಕ್ಕದ್ದು ಆದೃಷ್ಟವೇ ಆಗಿತ್ತು.Body:ಕಡಬದ ಕೆಎಸ್‌ಆರ್‌ಟಿಸಿ ಬಸ್ಸು ತಂಗುದಾಣದಲ್ಲಿ ಏಕಾಏಕಿ ೨ ಕೆಎಸ್‌ಆರ್‌ಟಿಸಿ ಬಸ್ಸುಗಳ ಡಿಕ್ಕಿಯ ಒಡೆತದ ಶಬ್ಧಕ್ಕೆ ಕಡಬ ಪೇಟೆಯಾದ್ಯಂತ ಸಾರ್ವಜನಿಕರು ಓಡಿ ಬಂದು ಅಚ್ಚರಿಪಟ್ಟಿದಲ್ಲದೆ ಎರಡು ಬಸ್ಸುಗಳಲ್ಲಿದ್ದ ಪ್ರಯಾಣಿಕರು ಆಶ್ಚರ್ಯದಿಂದ ಭಯಗೊಂಡು ಕಿಟಕಿಗಳಿಂದ ಹೊರ ಇಣುಕಿ ಅಯ್ಯೋ ದೇವರೆ ಎಂದು ಬೊಬ್ಬೆ ಹೊಡೆದ ಘಟನೆ ನ.೪ರಂದು ಕಡಬ ಬಸ್ಸು ತಂಗುದಾಣದಲ್ಲಿ ನಡೆಯಿತು.
ಸುಬ್ರಹ್ಮಣ್ಯ ಕಡಬ ಮಾರ್ಗವಾಗಿ ಮಂಗಳೂರಿಗೆ ಹೋಗುವ ಕೆಎ-ಎಫ್೩೦೦೫ ವೇಗದೂತ ಬಸ್ಸು ಕಡಬ ಬಸ್ಸು ತಂಗುದಾಣದ ಎದುರು ನಿಲ್ಲಿಸಿದಂತೆ ಕಡಬ -ಉಪ್ಪಿನಂಗಡಿ ಕೆಎ೦೯-ಎಫ್ ೪೬೦೫ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣಕ್ಕೆ ಬಂದು ಏಕಾಏಕಿ ಮಂಗಳೂರು ಬಸ್ಸಿಗೆ ಹಿಂದಿನಿಂದ ಡಿಕ್ಕಿಯಾಯಿತು. ಭಯಾನಕ ಶಬ್ಧ ಕೇಳಿಸಿದ್ದರೂ ಯಾವುದೇ ಅಪಾಯವಿಲ್ಲದೆ ಪ್ರಯಾಣಿಕರು ಪಾರಾಗುವುದರೊಂದಿಗೆ ದೊಡ್ಡ ಪ್ರಮಾಣದ ಅಪಾಯವೊಂದು ತಪ್ಪಿದಂತಾಗಿದೆ.Conclusion:ಎರಡು ಬಸ್ಸುಗಳ ಮಧ್ಯೆ ಜನರು ಓಡಾಡದಿರುವುದು ಪುಣ್ಯವೆಂದು ಎಲ್ಲರ ಬಾಯಲ್ಲಿ ಕೇಳಿಬರುತ್ತಿತ್ತು.
ಸ್ಥಳದಲ್ಲಿದ್ದ ಕಡಬ ಪೋಲೀಸ್ ಠಾಣೆಯ ಗೃಹರಕ್ಷಕ ದಳದ ಸಿಬ್ಬಂದಿಗಳಾದ ರೂಪ ಮತ್ತು ಪ್ರಮೀತ ಕೂಡಲೇ ಶಾಲೆ ಬಿಟ್ಟ ಸಮಯವಾದುದರಿಂದ ವಿದ್ಯಾರ್ಥಿಗಳನ್ನು, ಸಾರ್ವಜನಿಕರನ್ನು ಚದುರಿಸಿ ಯಾವುದೇ ಅನಾಹುತ ನಡೆಯದಂತೆ ಸೂಕ್ತ ಎಚ್ಚರಿಕೆ ವಹಿಸಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.