ಮಂಗಳೂರು: ನಗರದಲ್ಲಿನ ನವಮಂಗಳೂರು ಬಂದರು ಟ್ರಸ್ಟ್ (NMPT) ನಲ್ಲಿ 35 ಕೋಟಿ ರೂ ವೆಚ್ಚದ ಮೊಬೈಲ್ ಕಂಟೈನರ್ ಎಕ್ಸ್ ರೇ ಸ್ಕ್ಯಾನರ್ ಅಳವಡಿಕೆ ಮಾಡಲಾಗಿದೆ.
ವಿಮಾನ ನಿಲ್ದಾಣಗಳ ಮಾದರಿಯಲ್ಲಿಯೇ ಎಲ್ಲ ದೇಶಗಳ ಬಂದರುಗಳಲ್ಲಿ ಸ್ಕ್ಯಾನಿಂಗ್ ಮಾಡಿ ಕಳುಹಿಸಬೇಕು ಎಂಬ ನಿರ್ದೇಶನದಂತೆ ಮೊಬೈಲ್ ಕಂಟೈನರ್ ಎಕ್ಸ್ ರೇ ಸ್ಕ್ಯಾನರ್ ಅಳವಡಿಸಲಾಗಿದೆ. ಈ ರೀತಿಯ ಸ್ಕ್ಯಾನರ್ನ್ನು ಮುಂಬಯಿ ಸೇರಿದಂತೆ ಹಲವು ಬಂದರುಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ.
ಎನ್ಎಂಪಿಟಿಗೆ ಫ್ರಾನ್ಸ್ನಿಂದ 16 ಕೋಟಿಗೆ ಖರೀದಿಸಲಾಗಿದ್ದು, ಇದನ್ನು ಅಳವಡಿಸುವಾಗ ಒಟ್ಟು 35 ಕೋಟಿ ವೆಚ್ಚವಾಗಿದೆ. ಎನ್ಎಂಪಿಟಿಯಲ್ಲಿ ಈ ಹಿಂದೆ ಒಂದೊಂದೇ ಪಾರ್ಸಲ್ ಬಾಕ್ಸ್ಗಳನ್ನು ತಪಾಸಣೆ ಮಾಡಲಾಗುತ್ತಿದ್ದರಿಂದ ಇದಕ್ಕೆ ಬಹಳಷ್ಟು ಸಮಯ ವ್ಯಯವಾಗುತ್ತಿತ್ತು. ಇದೀಗ ಅಳವಡಿಸಲಾಗಿರುವ ಸ್ಕ್ಯಾನರ್ನಿಂದ ಕೆಲವೇ ನಿಮಿಷಗಳಲ್ಲಿ ತಪಾಸಣೆ ಮಾಡಬಹುದಾಗಿದೆ.
ಓದಿ: ರಾಜ್ಯಸಭೆ: ರೈತರ ಸಮಸ್ಯೆ ಚರ್ಚೆಗೆ ಆಡಳಿತ, ಪ್ರತಿಪಕ್ಷಗಳ ಮಧ್ಯೆ ಸಮ್ಮತಿ
ಈ ಸ್ಕ್ಯಾನರ್ ಈಗ ಪ್ರಾಯೋಗಿಕ ಹಂತದಲ್ಲಿದ್ದು ಮುಂದಿನ ತಿಂಗಳಲ್ಲಿ ಅಧಿಕೃತ ಕಾರ್ಯಾಚರಣೆ ಆರಂಭಿಸಲಿದೆ.