ಮಂಗಳೂರು: ನಾಳೆ ಭಾರತ ಪಾಕಿಸ್ತಾನ ನಡುವೆ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತ ಗೆದ್ದು ಬರಲಿ ಎಂದು ಮಂಗಳೂರಿನ ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾರೈಸಿದರು. ನಗರದ ಅಲೋಶಿಯಸ್ ಕಾಲೇಜಿನ ಡಿಗ್ರಿ ವಿದ್ಯಾರ್ಥಿಗಳು ಕೂಡ ಭಾರತದ ಆಟಗಾರರಿಗೆ ಶುಭಾಶಯ ಕೋರಿದರು.
ಹುಬ್ಬಳ್ಳಿ: ಇಂಗ್ಲೆಂಡ್ಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳು ಪ್ರಾರಂಭವಾಗಿದ್ದು, ಟೂರ್ನಿಯಲ್ಲಿ ಮೊದಲ ಬಾರಿಗೆ ಇಂಡಿಯಾ- ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಇದರಿಂದ ಅಭಿಮಾನಿಗಳಲ್ಲಿ ಕ್ರಿಕೆಟ್ ಫೀವರ್ ಏರುತ್ತಲಿದೆ. ಮೊದಲೇ ಬದ್ದ ವೈರಿ ಎನಿಸಿಕೊಂಡಿರುವ ಪಾಕಿಸ್ತಾನ ವಿರುದ್ಧ ಟೂರ್ನಿಯಲ್ಲಿ ಮೊದಲ ಬಾರಿಗೆ ಎದುರಾಗಿದ್ದು, ಪಂದ್ಯ ಹೈ ವೋಲ್ಟೆಜ್ಗೆ ತಿರುಗಿದೆ. ಇದರಿಂದ ಕ್ರಿಕೆಟ್ ಅಭಿಮಾನಿಗಳು ಪಂದ್ಯಕ್ಕಾಗಿ ಕಾಯುತ್ತಿದ್ದು, ಪಂದ್ಯದಲ್ಲಿ ಭಾರತ ಜಯಗಳಿಸಲಿ. ಪಂದ್ಯಕ್ಕೆ ಮಳೆಯ ಅಡ್ಡಿಯಾಗದಿರಲಿ ಎಂದು ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಅಭಿಮಾನಿಗಳಲು ಶುಭ ಹಾರೈಸಿದ್ದಾರೆ.