ETV Bharat / state

ಅಕ್ರಮ ಮರ ಸಾಗಾಟ: ಓರ್ವನ ಬಂಧನ, ಮರದ ದಿಮ್ಮಿಗಳು ವಶ

ಅಕ್ರಮವಾಗಿ ಸಾಗಿಸುತ್ತಿದ್ದ ಅಂದಾಜು 25,000 ಮೌಲ್ಯದ ಮರದ ದಿಮ್ಮಿಗಳನ್ನ ಉಪ್ಪಿನಂಗಡಿ ಪೊಲೀಸರು ವಶಪಡಿಸಿಕೊಂಡು, ಓರ್ವನನ್ನು ಬಂಧಿಸಿದ್ದಾರೆ.

author img

By

Published : Mar 25, 2019, 4:40 PM IST

ಅಕ್ರಮವಾಗಿ ಮರ ಸಾಗಾಟ.

ಮಂಗಳೂರು: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಹಾಗೂ ಮರದ ದಿಮ್ಮಿಗಳನ್ನು ಪೊಲೀಸರು ವಶಪಡಿಸಿ, ಓರ್ವನನ್ನು ಬಂಧಿಸಿದ ಘಟನೆ ತೆಕ್ಕಾರು ಗ್ರಾಮದ ಅಜಿಲ ಮೊಗ್ರು ಸೇತುವೆ ಬಳಿ ಇಂದು ಮಧ್ಯಾಹ್ನ ನಡೆದಿದೆ.

ಆರೋಪಿ ಪಿಕಪ್‌ ಚಾಲಕ ಶಾಂತಿಪ್ರಸಾದ್​ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೋರ್ವ ಆರೋಪಿ ಹಕೀಂ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಯಾವುದೇ ದಾಖಲೆಗಳಿಲ್ಲದೆ ಅರಣ್ಯದ ಸೊತ್ತಾದ ಹಲಸಿನ ಮರದ ದಿಮ್ಮಿಗಳನ್ನು ಅಕ್ರಮವಾಗಿ ಎಲ್ಲಿಂದಲೊ ಕಳವು ಮಾಡಿ ಪಿಕಪ್‌ ವಾಹನದಲ್ಲಿ ಸಾಗಾಟ ಮಾಡುತ್ತಿರುವಾಗ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸ್ವಾಧೀನಪಡಿಸಿಕೊಂಡಿರುವ ಮರದ ದಿಮ್ಮಿಗಳ ಅಂದಾಜು ಮೌಲ್ಯ 25,000 ರೂ.ಹಾಗೂ ಪಿಕಪ್‌ ವಾಹನದ ಮೌಲ್ಯ 1.15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Mangaluru File name_Tree Transport Reporter_Vishwanath Panjimogaru ಅಕ್ರಮ ಮರ ಸಾಗಾಟ: ಓರ್ವನ ಬಂಧನ, ಸೊತ್ತು ವಶಕ್ಕೆ ಮಂಗಳೂರು: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಪಿಕಪ್ ಹಾಗೂ ಮರದ ದಿಮ್ಮಿಗಳನ್ನು ಪೊಲೀಸರು ವಶಪಡಿಸಿ, ಓರ್ವನನ್ನು ಬಂಧಿಸಿದ ಘಟನೆ ತೆಕ್ಕಾರು ಗ್ರಾಮದ ಅಜಿಲ ಮೊಗ್ರು ಸೇತುವೆ ಬಳಿ ಇಂದು ಮಧ್ಯಾಹ್ನ ನಡೆದಿದೆ. ಆರೋಪಿ ಪಿಕಪ್‌ ಚಾಲಕ ಶಾಂತಿಪ್ರಸಾದ್ ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೋರ್ವ ಆರೋಪಿ ಹಕೀಂ ಓಡಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಯಾವುದೇ ದಾಖಲೆಗಳಿಲ್ಲದೆ ಅರಣ್ಯದ ಸೊತ್ತಾದ ಹಲಸಿನ ಮರದ ದಿಮ್ಮಿಗಳನ್ನು ಅಕ್ರಮವಾಗಿ ಎಲ್ಲಿಂದಲೊ ಕಳವುಗೈದು ಪಿಕಪ್‌ ವಾಹನದಲ್ಲಿ ಸಾಗಾಟ ಮಾಡುತ್ತಿರುವಾಗ ಪೊಲೀಸರು ಪತ್ತೆ ಹಚ್ಚಿದ್ದಾರೆ. ಸ್ವಾಧೀನಪಡಿಸಿಕೊಂಡಿರುವ ಮರದ ದಿಮ್ಮಿಗಳ ಅಂದಾಜು ಮೌಲ್ಯ 25,000 ರೂ.ಹಾಗೂ ಪಿಕಪ್‌ ವಾಹನದ ಮೌಲ್ಯ 1.15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. Reporter_Vishwanath Panjimogaru

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.