ಕಡಬ: ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುವಾಗ ಖಚಿತ ಮಾಹಿತಿ ಪಡೆದ ಕಡಬ ಪೊಲೀಸರು, ಬಿಜೆಪಿ ಮಾಜಿ ಪಂಚಾಯತ್ ಸದಸ್ಯ ಸೇರಿ ನಾಲ್ವರನ್ನು ವಶಕ್ಕೆ ಪಡೆದಿರುವ ಘಟನೆ ಕೋಡಿಂಬಾಳ ಗ್ರಾಮದ ಮಜ್ಜಾರು ಕ್ರಾಸ್ ಸಮೀಪ ನಡೆದಿದೆ.
ಇಲ್ಲಿನ ಪುಳಿಕುಕ್ಕುವಿನಿಂದ ಮಡ್ಯಡ್ಕ ಎಂಬಲ್ಲಿಗೆ ಎರಡು ಹೋರಿಗಳನ್ನು ಕೊಂಡೊಯ್ಯಲಾಗುತ್ತಿದ್ದು, ಮಡ್ಯಡ್ಕದ ಮನೆಯೊಂದರಲ್ಲಿ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆಯೂ ಆರೋಪಗಳು ಕೇಳಿ ಬಂದಿದೆ. ಈ ಜಾನುವಾರು ಸಾಗಾಟದಲ್ಲಿ ಕಡಬ ಬಿಜೆಪಿ ಮಾಜಿ ಸದಸ್ಯರೋರ್ವರು ಶಾಮಿಲಾಗಿದ್ದು, ಎರಡು ಹೋರಿ, ಆಲ್ಟೋ ಕಾರು ಸೇರಿದಂತೆ ನಾಲ್ವರನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ.