ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆ ಸಮೀಪ ಸುಮಾರು 12 ಅಡಿ ಉದ್ದವಿರುವ ಕಾಳಿಂಗ ಸರ್ಪವೊಂದು ಪತ್ತೆಯಾಗಿದೆ. ಈ ಕಾಳಿಂಗನನ್ನು ಉರಗಪ್ರೇಮಿ ಮಾಧವ ಅವರು ರಕ್ಷಿಸಿ, ಮರಳಿ ಕಾಡಿಗೆ ಬಿಟ್ಟರು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ವೃತ್ತಿಯಲ್ಲಿ ಚಾಲಕರಾಗಿರುವ ಮಾಧವ ಅವರು ಸುಮಾರು 2000 ನೇ ಇಸವಿಯಿಂದ ಹಾವು ಹಿಡಿಯುವ ಹವ್ಯಾಸ ರೂಡಿಸಿಕೊಂಡವರು. ಇವರು ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕಿನ ವಿವಿಧ ಕಡೆಗಳಲ್ಲಿ ಈವರೆಗೆ ಸುಮಾರು 11ಸಾವಿರಕ್ಕೂ ಹೆಚ್ಚಿನ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ಪರಿಸರದಲ್ಲಿ ಇದೇ ತರಹ ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಇವರು ಹಿಡಿದಿದ್ದರು.